ಟಾಲಿವುಡ್‌ನಲ್ಲಿ ಮಿಂಚಲು ಹೊರಟ 'ಕನ್ನಡದ ಅತ್ಯುತ್ತಮ ನಟಿ' ಅವಾರ್ಡ್ ವಿನ್ನರ್
ಸ್ಯಾಂಡಲ್‌ವುಡ್ ನಟಿಯರ ಪೈಕಿ ಹಲವರು ಬೇರೆ ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ. ಅಲ್ಲಿನ ನಟಿಯರಿಗೆ ಸೆಡ್ಡು ಹೊಡೆದು ಸಕತ್ ಕ್ರೇಜ್ ಕೂಡ ಹುಟ್ಟಿಸಿದ್ದಾರೆ. ಈ ಪೈಕಿ ಕನ್ನಡ ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಟಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈಗ ಮತ್ತೊಬ್ಬ ಕನ್ನಡದ ನಟಿ ತೆಲುಗು ಚಿತ್ರರಂಗಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.
ಹೌದು, 'ಬೀರ್‌ಬಲ್' ಹಾಗೂ 'ಸಪ್ತಸಾಗರದಾಚೆ ಎಲ್ಲೋ' ಸಿನಿಮಾಗಳ ಮೂಲಕ ಪ್ರೇಕ್ಷಕರ ಮನೆಮಾತಾಗಿರುವ ನಟಿ ರುಕ್ಮಿಣಿ ವಸಂತ್ ಅವರಿಗೆ ದೊಡ್ಡ ಆಫ್ ಬಂದಿದೆ. ಇದನ್ನು ಇಂಟರೆಸ್ಟಿಂಗ್ ವಿಚಾರ ಅಂದ್ರೆ ಈ ಸಿನಿಮಾಗೆ ಆಕ್ಷನ್ ಕಟ್ ಹೇಳ್ತಿರೋದು ಕೂಡ ಕನ್ನಡಿಗ ಪ್ರಶಾಂತ್ ನೀಲ್. ಈ ಸಿನಿಮಾದ ನಟ ಕೂಡ ಕನ್ನಡ ನೆಲದ ಮೊಮ್ಮಗ ಜ್ಯೂನಿಯರ್ ಎನ್‌ಟಿಆರ್.

ಕನ್ನಡ ನಂಟಿನಲ್ಲೇ ಇರುವ ಈ ಸಿನಿಮಾದಲ್ಲಿ ಕನ್ನಡಿಗರೇ ಮುಂಚೂಣಿಯಲ್ಲಿದ್ದು, ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರೇ ನಾಯಕಿಯಾಗಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಜ್ಯೂನಿಯರ್ ಎನ್‌ಟಿಆರ್ ಅಭಿನಯದ ದೇವರ ಸಿನಿಮಾ ಇತ್ತೀಚೆಗೆ ತೆರೆಕಂಡು ಸಖತ್ ಸದ್ದು ಮಾಡುತ್ತಿದೆ. ಈಗ ಪ್ರಶಾಂತ್ ನೀಲ್ ಅವರ ಮುಂದಿನ ಸಿನಿಮಾದಲ್ಲಿ ತಾರಕ್ ಹಾಗೂ ರುಕ್ಮಿಣಿ ಮೋಡಿ ಮಾಡಲು ಹೊರಟಿದ್ದಾರೆ.
ರುಕ್ಮಿಣಿ ವಸಂತ್ ಅವರನ್ನು ಸದ್ಯ ಕರ್ನಾಟಕದ ಕ್ರಶ್ ಎಂದೇ ಕರೆಯಲಾಗುತ್ತಿದೆ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದಲ್ಲಿನ ನಟನೆಗೆ ಅವರು ಪ್ರತಿಷ್ಠಿತ ಸೈಮಾ ಹಾಗೂ ಐಫಾ ಅವಾರ್ಡ್‌ನಲ್ಲಿ ಅತ್ಯುತ್ತಮ ಕನ್ನಡ ನಟಿ ಕೂಡ ಬಾಚಿಕೊಂಡಿದ್ದಾರೆ. ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಿದ್ದರಿಂದ ರುಕ್ಮಿಣಿ ಅವರಿಗೆ ಸಖತ್ ಫ್ಯಾನ್ ಫಾಲೋಯಿಂಗ್ ಕೂಡ ಸೃಷ್ಟಿಯಾಗಿದೆ.

ಈ ಸಿನಿಮಾ ರಿಲೀಸ್ ಆದ ನಂತರ ಬೇರೆ ಚಿತ್ರರಂಗಗಳಿಂದ ರುಕ್ಮಿಣಿ ಅವರಿಗೆ ಆಫರ್ ಬರಲಾರಂಭಿಸಿದ್ದು, ಈಗಾಗಲೇ ಕೆಲವು ಸಿನಿಮಾಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಇದೀಗ ಜ್ಯೂನಿಯರ್ ಎನ್‌ಟಿಆರ್ (ತಾರಕ್) ಜೊತೆ ನಾಯಕನಟಿಯಾಗಿ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಟಾಲಿವುಡ್ ಅನ್ನು ಶೇಕ್ ಮಾಡಲು ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಶಾಂತ್ ನೀಲ್ ಅವರು ಈ ಆಫರ್ ಕೊಟ್ಟ ತಕ್ಷಣವೇ ರುಕ್ಮಿಣಿ ಅವರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ತೆಲುಗು ಚಿತ್ರರಂಗವನ್ನು ಆಳುವುದು ಪಕ್ಕಾ ಎಂದು ಪ್ರೇಕ್ಷಕರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ನೀಲ್ ಚಿತ್ರದಲ್ಲಿ ರುಕ್ಮಿಣಿ ಅವರು ಎರಡು ಶೇಡ್‌ನ ಪಾತ್ರಗಳಲ್ಲಿ ಮೋಡಿ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಅವರು ಶ್ರೀಮುರಳಿ ಅಭಿನಯದ 'ಬಘೀರ' ಸಿನಿಮಾದಲ್ಲೂ ನಟಿಸಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ. ನಟ ಶಿವರಾಜ್ ಕುಮಾರ್ ಅವರ 'ಭೈರತಿ ರಣಗಲ್' ಸಿನಿಮಾದಲ್ಲಿಯೂ ರುಕ್ಮಿಣಿ ನಟಿಸಿದ್ದಾರೆ. ಮತ್ತೊಂದೆಡೆ ತಮಿಳು ನಟ ವಿಜಯ್ ಸೇತುಪತಿ ಸಿನಿಮಾದಲ್ಲೂ ರುಕ್ಮಿಣಿ ಶೂಟಿಂಗ್ ಮುಗಿಸಿದ್ದಾರೆ. ಇದಲ್ಲದೆ ಇನ್ನೂ ಹಲವು ಸಿನಿಮಾಗಳಲ್ಲಿ ಕನ್ನಡದ ಪುಟ್ಟಿ ಅಭಿನಯಿಸುತ್ತಿದ್ದು, ಸಾಲು ಸಾಲು ಸಿನಿಮಾಗಳ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ.












Click it and Unblock the Notifications