ನಟಿ ರಮ್ಯಾಗೆ ಎಂಗೇಜ್‌ಮೆಂಟ್ ಆಗೋಯ್ತಾ? ಸುಳಿವು ಕೊಡ್ತು ಸ್ಪೆಷಲ್ ಉಂಗುರ
ಸ್ಯಾಂಡಲ್‌ವುಡ್ ನಟಿ ಮೋಹಕತಾರೆ ರಮ್ಯಾ ಅವರು ಸಿನಿಮಾಗಳಿಂದ ದೂರ ಉಳಿದಿದ್ದರೂ ಅಭಿಮಾನಿಗಳಿಂದ ದೂರ ಉಳಿಯಲಿಲ್ಲ. ರಮ್ಯಾ ಎಂದ ಕೂಡಲೇ ಈಗಲೂ ಡ್ರೀಮ್ ಗರ್ಲ್ ಎನ್ನುವವರು ಈಗಲೂ ಇದ್ದಾರೆ. ಸದ್ಯ ಅವರು ಈಗ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಅವರ ಹವಾ ಕಡಿಮೆಯೇನಿಲ್ಲ. ರಮ್ಯಾ ಮದುವೆ ವಿಚಾರ ಕೂಡ ಹಲವು ವರ್ಷಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ.
ರಮ್ಯಾ ಅವರು ಕಾಣಿಸಿಕೊಂಡಾಗಲೆಲ್ಲ ಮತ್ತೆ ಸಿನಿಮಾ ಯಾವಾಗ? ನಿಮ್ಮ ಮದುವೆ ಯಾವಾಗ? ಎನ್ನುವ ಪ್ರಶ್ನೆಯೇ ಎದುರಾಗುತ್ತಿತ್ತು. ಇದೀಗ ರಮ್ಯಾ ಅವರು ಸದ್ದಿಲ್ಲದೆ ಎಂಗೇಜ್‌ಮೆಂಟ್ ಆಗಿದ್ದಾರಾ? ಎನ್ನುವ ಅನುಮಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ ಅವರ ಕೈಯಲ್ಲಿದ್ದ ಸ್ಪೆಷಲ್ ಉಂಗುರ. ಈ ಬಗ್ಗೆ ನಟಿ ರಮ್ಯಾ ಅವರು ಏನು ಹೇಳಿದ್ರು? ಅಂತಾ ಇಲ್ಲಿ ತಿಳಿಯಿರಿ..ಈ ಸಂಬಂಧ ವಿಡಿಯೋ ವೈರಲ್ ಆಗಿದೆ.

ಇತ್ತೀಚೆಗೆ ನಟಿ ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಮದುವೆ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿಯಾಗಿದ್ದರು. ಈ ವೇಳೆ ರಕ್ಷಿತಾ ಅವರಿಗೆ ರಮ್ಯಾ ಅವರು ತಮ್ಮ ಕೈಯಲ್ಲಿ ಧರಿಸಿದ್ದ ಸ್ಪೆಷಲ್ ಉಂಗುರ ತೋರಿಸಿದ್ದರು. ಇದನ್ನು ಕಂಡ ರಕ್ಷಿತಾ ಕೂಡ ಶಾಕ್ ಆಗಿದ್ದರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ರಮ್ಯಾ ಅವರು ಸೈಲೆಂಟಾಗಿ ಎಂಗೇಜ್‌ಮೆಂಟ್ ಆಗಿಬಿಟ್ರಾ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯವಾಗಿ ರಮ್ಯಾ ಅವರು ಮದುವೆ ವಿಚಾರಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಆಗ ಅವರು ಮುಗುಳ್ನಗುತ್ತಾ ಏನನ್ನೂ ಹೇಳದೆ ಹೊರಟು ಹೋಗುತ್ತಿದ್ದರು. ಈಗ ರಮ್ಯಾ ಅವರ ಉಂಗುರದ ಬಗ್ಗೆ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ರಮ್ಯಾ ಅವರು ಯಾರಿಗೂ ಹೇಳದೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿದ್ದಾರಾ? ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಇನ್ನು ಈ ಬಗ್ಗೆ ರಮ್ಯಾ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಮ್ಯಾ ಏನು? ನನ್ನ ಉಂಗುರದ ಬಗ್ಗೆ ಚರ್ಚೆಯಾಗುತ್ತಿದೆಯಾ? ಯಾಕೆ? ಎಂದು ಶಾಕ್ ಆಗಿ ನಕ್ಕಿದ್ದಾರೆ. ರಮ್ಯಾ ಅವರು ಎಂಗೇಜ್‌ಮೆಂಟ್ ಆಗಿದ್ದಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಕ್ಕೆ ರಮ್ಯಾ ಅವರು ಏನೂ ಮಾತನಾಡದೆ ಮೌನದ ಉತ್ತರ ಕೊಟ್ಟಿದ್ದಾರೆ.
ನಿಮ್ಮ ಮದುವೆ ಯಾವಾಗ ಅಂದಾಗಲೂ ನಾನಿನ್ನೂ ಅದರ ಬಗ್ಗೆ ಡಿಸೈಡ್ ಮಾಡಿಲ್ಲ. ಈ ಬಗ್ಗೆ ಪ್ರಶ್ನೆಗಳನ್ನ ಕೇಳ್ಬೇಡಿ ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. ಮದುವೆಯಾದರೆ ಮಾತ್ರ ಅಭಿಮಾನಿಗಳಿಗೆ ಸಿಹಿಯೂಟ ಕೊಡಬೇಕಾ? ಬೇಕಾದ್ರೆ ನಾನು ಹಾಗೆಯೇ ಸಿಹಿಯೂಟ ಹಾಕಿಸುತ್ತೇನೆ. ಯಾವಾಗ ಬೇಕಾದರೂ ಊಟ ಮಾಡಬಹುದು, ಇದಕ್ಕಾಗಿ ಮದುವೆ ಆಗಬೇಕು ಎಂದೇನಿಲ್ಲ ಎಂದೂ ರಮ್ಯಾ ಹೇಳಿದ್ದಾರೆ.

ಅಲ್ಲದೆ ದರ್ಶನ್ ಅವರ ಕೇಸ್ ಬಗ್ಗೆ ರಮ್ಯಾ ಅವರನ್ನು ಪ್ರಶ್ನೆ ಕೇಳಲಾಯಿತು. ಈ ಬಗ್ಗೆ ನಾನು ಮಾತನಾಡೋದಿಲ್ಲ ಎಂದು ರಮ್ಯಾ ನೇರವಾಗಿ ಹೇಳಿದ್ದಾರೆ. ರಮ್ಯಾ ಅವರು ರಕ್ಷಿತಾ ಸಹೋದರನ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.












Click it and Unblock the Notifications