Ramya: ಸ್ಯಾಂಡಲ್‌ವುಡ್‌ಗೆ ನಟಿ ರಮ್ಯಾ ಯಾವಾಗ ವಾಪಸ್ ಬರ್ತಾರೆ? ಮೋಹಕ ತಾರೆ ಹೇಳಿದ್ದಿಷ್ಟು
ಸ್ಯಾಂಡಲ್‌ವುಡ್ ಕ್ವೀನ್, ನಟಿ ಮೋಹಕತಾರೆ ರಮ್ಯಾ ಅವರು ಹಲವು ವರ್ಷಗಳಿಂದ ಸಿನಿಮಾಗಳಿಂದ ದೂರ ಸರಿದಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ರಮ್ಯಾ ಅವರು ಮತ್ತೆ ಯಾವಾಗ ಸಿನಿಮಾ ರಂಗಕ್ಕೆ ಬರುತ್ತಾರೆ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಇದಕ್ಕೆ ರಮ್ಯಾ ಅವರು ನೋಡೋಣ ಎಂದು ಸುಮ್ಮನೆ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಉತ್ತರ ನೀಡುತ್ತಿದ್ದರು. ಇದೀಗ ಮತ್ತೆ ರಮ್ಯಾ ಅವರು ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.
ನಟಿ ರಮ್ಯಾ ಅವರಿಗೆ ಇಂದು ಕೂಡ ಯಾವಾಗ ಸಿನಿಮಾ ಮಾಡ್ತೀರಿ? ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕೆ ಮುದ್ದಾಗಿ ನಗುತ್ತಲೇ ಉತ್ತರಿಸಿರುವ ನಟಿ ರಮ್ಯಾ ಅವರು ಒಳ್ಳೆಯ ಕಥೆ ಸಿಕ್ಕರೆ ಕಂಡಿತವಾಗಿಯೂ ಸಿನಿಮಾ ಮಾಡುತ್ತೇನೆ. ಸದ್ಯಕ್ಕೆ ನನಗೆ ಇಲ್ಲಿವರೆಗೂ ಅಂತಹ ಸ್ಕ್ರಿಪ್ಟ್ ಸಿಕ್ಕಿಲ್ಲ ಎಂದು ರಮ್ಯಾ ಹೇಳಿದ್ದಾರೆ. ಇದರ ಬೆನ್ನಲ್ಲೇ ರಮ್ಯಾ ಅವರು ಸಿನಿಮಾಗಳಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಒಳ್ಳೆಯ ಕಥೆಗಾಗಿ ಕಾಯುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಇತ್ತೀಚೆಗೆ ತೆರೆಕಂಡಿರುವ ಯುಐ ಹಾಗೂ ಮ್ಯಾಕ್ಸ್ ಸಿನಿಮಾಗಳು ಚೆನ್ನಾಗಿ ಪ್ರದರ್ಶನ ಕಾಣುತ್ತಿವೆ. ಅದರ ಬಗ್ಗೆ ಬಹಳ ಖುಷಿ ಇದೆ. ಇತ್ತೀಚೆಗೆ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ ಎಂದು ರಮ್ಯಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರಮ್ಯಾ ಅವರು ಮತ್ತೆ ರಾಜಕೀಯದ ಕಡೆಗೆ ಬರುತ್ತಾರಾ ಎಂಬ ಬಗ್ಗೆಯೂ ಉತ್ತರಿಸಿದ್ದಾರೆ. ನಾನು ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಮದುವೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ರಮ್ಯಾ ಅವರು ನಗುವಿನ ಉತ್ತರ ನೀಡಿದ್ದಾರೆ.
ಕೋರ್ಟ್ ಮುಂದೆ ಹಾಜರಾದ ರಮ್ಯಾ: ನಟಿ ರಮ್ಯಾ ಅವರು 2023 ರಲ್ಲಿ ಬಿಡುಗಡೆ ಆಗಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ವಿರುದ್ಧ ಕೋರ್ಟ್ ಮೊರೆ ಹೋಗಿದ್ದರು. ಈ ಸಿನಿಮಾದಲ್ಲಿ ತಮ್ಮ ಅನುಮತಿ ಮೀರಿ ಕೆಲ ದೃಶ್ಯಗಳನ್ನು ಬಳಸಿಕೊಂಡಿರುವುದಾಗಿ ರಮ್ಯಾ ಆರೋಪ ಮಾಡಿದ್ದರು. ಇಂದು ಈ ಕೇಸ್ ಸಂಬಂಧ ರಮ್ಯಾ ಅವರು ಬೆಂಗಳೂರಿನ ವಾಣಿಜ್ಯ ಸಂಕೀರ್ಣದ ನ್ಯಾಯಾಲಯಕ್ಕೆ ಹಾಜರಾದರು.
ಈ ಸಂಬಂಧ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದ ನಿರ್ಮಾಪಕರು, ನಿರ್ದೇಶಕರ ವಿರುದ್ಧ ರಮ್ಯಾ ದೂರು ಕೊಟ್ಟಿದ್ದರು. 2023ರಲ್ಲೇ ರಮ್ಯಾ ಅವರು ಈ ಕೇಸ್ ದಾಖಲಿಸಿದ್ದರು. ಅಲ್ಲದೆ, ಈ ಸಿನಿಮಾ ಬಿಡುಗಡೆಗೆ ತಡೆ ನೀಡುವಂತೆ ಕೇಳಿದ್ದರು. ಆದರೆ ಕೋರ್ಟ್ ಈ ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತ್ತು. ಸದ್ಯ ಈ ಕೇಸ್ ವಿಚಾರಣೆ ನ್ಯಾಯಾಲಯದಲ್ಲಿದ್ದು, ಇಂದು ರಮ್ಯಾ ಅವರು ಕೋರ್ಟ್‌ಗೆ ಹಾಜರಾಗಿ ಕೇಸ್ ಸಂಬಂಧ ಹಲವು ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಇದೇ ಕೇಸ್ ಸಂಬಂಧ ರಮ್ಯಾ ಅವರು ಕಳೆದ ಡಿಸೆಂಬರ್ 30ರಂದು ಕೂಡ ವಿಚಾರಣೆಗೆ ಹಾಜರಾಗಿದ್ದರು. ಆಗ ರಮ್ಯಾ ಅವರಿಗೆ ಕೆಲ ದಾಖಲೆಗಳನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಅದರಂತೆ ಇಂದು ಕೋರ್ಟ್‌ಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆ. ಈ ಬಗ್ಗೆ ಅವರು ಮಾಧ್ಯಮಗಳ ಮುಂದೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಈ ಕೇಸ್ ಕೋರ್ಟ್‌ನಲ್ಲಿರುವುದರಿಂದ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ರಮ್ಯಾ ಹೇಳಿ ಹೊರಟರು.












Click it and Unblock the Notifications