Rachita Ram: ನಟಿ ರಚಿತಾ ರಾಮ್ ಮೊದಲ ಸಂಭಾವನೆ ರಿವೀಲ್, ಡಿಂಪಲ್ ಕ್ವೀನ್ ಎಷ್ಟೆಲ್ಲ ಕಷ್ಟ ಪಟ್ಟಿದ್ರು?
ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಸದ್ಯ ಕನ್ನಡದ ಟಾಪ್ ನಟಿಯರಲ್ಲಿ ಒಬ್ಬರು. ಅಲ್ಲದೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಕೂಡ. ಸದ್ಯ ರಚಿತಾ ರಾಮ್ ಅವರ ಸಂಭಾವನೆಯು ಕೋಟಿ ಕ್ಲಬ್‌ನಲ್ಲಿದೆ. ಆದರೆ, ಅವರ ಮೊದಲ ಸಂಭಾವನೆ ಎಷ್ಟು ಎನ್ನುವ ಅಚ್ಚರಿ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ರಚಿತಾ ರಾಮ್ ಅವರು ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡಿದ್ದಾರೆ. ಎಲ್ಲರಿಗೂ ಗೊತ್ತಿರುವಂತೆ ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಟ ದರ್ಶನ್ ಸರ್ ಎಂದು ನೆನೆದಿದ್ದಾರೆ. ಪ್ರತಿದಿನ ಮೇಕಪ್ ಹಚ್ಚಿದಾಗಲೆಲ್ಲ ನಾನು ದರ್ಶನ್ ಅವರನ್ನೇ ನೆನೆಯುತ್ತೇನೆ. ದರ್ಶನ್ ಅವರಿಗೆ ನಾನು ಧನ್ಯವಾದ ಹೇಳ್ತೀನಿ ಎಂದಿದ್ದಾರೆ.

ರಚಿತಾ ರಾಮ್ ಅವರು ಮೊದಲಿಗೆ ಕಿರುತೆರೆ ಮೂಲಕ ನಟನೆಗೆ ಬಣ್ಣ ಹಚ್ಚಿದವರು. ಸುಮಾರು ದಶಕಗಳ ಹಿಂದೆ ನಾನು ಸೀರಿಯಲ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನ ಸಂಭಾವನೆ 750 ರೂಪಾಯಿ ಎಂದು ರಚಿತಾ ರಿವೀಲ್ ಮಾಡಿದ್ದಾರೆ. ಅಂದಿನಿಂದ ಇಂದಿನವರೆಗೂ ನಾನು ಯಾವುದೇ ಸಂಭಾವನೆ ಇಲ್ಲದೆ ಕೆಲಸ ಮಾಡಲಿಲ್ಲ. ನಾನು ನನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ನನಗೆ ಜನ ಕೊಟ್ಟಿರುವ ಪ್ರೀತಿ ಕಾಪಾಡಿಕೊಳ್ಳಬೇಕು ಎಂದು ರಚಿತಾ ಹೇಳಿದ್ದಾರೆ.
ಜೀವನದಲ್ಲಿ ದೇವರು ಎಲ್ಲವನ್ನೂ ಕೊಟ್ಟಿದ್ದಾನೆ. ಒಂದು ವೇಳೆ ಜೀವನದಲ್ಲಿ ಎಲ್ಲವನ್ನೂ ಕಳೆದುಕೊಂಡ ಸಂದರ್ಭ ಎದುರಾದರೆ, ಒಂದು ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ. ಅಲ್ಲಿ ಕೊಡೋ ಪ್ರಸಾದ ತಿನ್ಕೊಂಡು ಹೊಟ್ಟೆ ತುಂಬಿಸಿಕೊಳ್ತೀನಿ ಎಂದು ರಚಿತಾ ರಾಮ್ ಹೇಳಿದ್ದಾರೆ.
ನಾನು ಸುಮ್ಮನೆ ದರ್ಶನ್ ಅವರ ಹೆಸರಲ್ಲಿ ಪಬ್ಲಿಸಿಟಿ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ. ಏಕೆಂದರೆ ನಾನು ಅವರ ಬ್ಯಾನರ್‌ನಿಂದಲೇ ಬಂದ ಹುಡುಗಿ. ಹಾಗಾಗಿ ಅವರ ಬಗ್ಗೆ ಹಾಗೂ ಬ್ಯಾನರ್ ಬಗ್ಗೆ ಮಾತನಾಡಲು ನನಗೆ ಅಧಿಕಾರ ಖಂಡಿತಾ ಇದೆ. ನನ್ನ ತಂದೆ ತಾಯಿ ಬಗ್ಗೆ ಮಾತನಾಡೋಕೆ ನಾನೇಕೆ ಅನುಮತಿ ಪಡೆಯಬೇಕು? ದರ್ಶನ್ ಸರ್ ಆಗಿರಬಹುದು, ತೂಗುದೀಪ ಬ್ಯಾನರ್ ಬಗ್ಗೆ ಆಗಿರಬಹುದು ನನ್ನ ಉಸಿರಿರುವ ತನಕ ನನಗೆ ಮಾತನಾಡಲು ಅಧಿಕಾರವಿದೆ ಎಂದು ರಚಿತಾ ಹೇಳಿಕೊಂಡಿದ್ದಾರೆ.

ಅವರು ಕೊಟ್ಟಿರುವ ಒಂದು ಗಿಫ್ಟ್ ನನ್ನ ಕೆರಿಯರ್‌ನಲ್ಲಿ ಇಂದಿನವರೆಗೂ ಸಾಗುತ್ತಿದೆ. ಅದರಿಂದಲೇ ನನ್ನ ಜರ್ನಿ ತುಂಬಾ ಖುಷಿಯಾಗಿ ಸಾಗುತ್ತಿದೆ. ಇದಕ್ಕಾಗಿ ದರ್ಶನ್ ಸರ್ ಅವರಿಗೆ ಧನ್ಯವಾದಗಳು ಎಂದು ರಚಿತಾ ರಾಮ್ ಹೇಳಿದ್ದಾರೆ. ರಾಜನ್ನ ಯಾವತ್ತೂ ರಾಜನ ರೀತಿ ನೋಡಲು ನನಗೆ ಇಷ್ಟ. ದರ್ಶನ್ ಅವರನ್ನ ನೋಡಿದ ಕೂಡಲೇ ರಾಜ ಎಂದೇ ನೆನಪಾಗುತ್ತದೆ. ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದು ದರ್ಶನ್ ಸರ್. ದರ್ಶನ್ ಸರ್ ಹಾಗೂ ಅವರ ಕುಟುಂಬದ ಮೇಲೆ ನಾನು ಸದಾ ಆಭಾರಿ ಎಂದಿದ್ದಾರೆ.
ನಾನು ದರ್ಶನ್ ಅವರನ್ನು ಯಾಕೆ ಭೇಟಿಯಾಗಲಿಲ್ಲ ಅಂದ್ರೆ, ಈಗ ಅವರ ವೈಯಕ್ತಿಕ ಸಮಯ. ಹಾಗಾಗಿ ಅವರಿಗೆ ವೈಯಕ್ತಿಕವಾಗಿ ಸಮಯದ ಅಗತ್ಯವಿದೆ. ಅವರು ತಮ್ಮ ಕುಟುಂಬದೊಂದಿಗೆ ಸ್ವಲ್ಪ ಕಾಲ ಕಳೆಯಲಿ. ನೋಡೋಣ ನಮಗೂ ಒಂದು ಟೈಮ್ ಬರುತ್ತೆ. ಅವರು ಸದ್ಯ ತಮ್ಮ ಸಮಯವನ್ನು ಸ್ಪೆಂಡ್ ಮಾಡಲಿ ಎಂದು ರಚಿತಾ ರಾಮ್ ಹೇಳಿದ್ದಾರೆ.












Click it and Unblock the Notifications