ನಮ್ರತಾ ಗೌಡ ಪ್ರೀತಿಸಿದ್ದ ಆ ಹುಡುಗ ಯಾರು ಗೊತ್ತಾ?

ಪುಟ್ಟ ಗೌರಿ ಮದುವೆ, ನಾಗಿಣಿ ಧಾರಾವಾಹಿ ಹಾಗೂ ಬಿಗ್‌ ಬಾಸ್‌ ಕನ್ನಡ ಖ್ಯಾತಿಯ ನಮ್ರತಾ ಗೌಡ ಮೊದಲ ಬಾರಿ ತಮ್ಮ ಮೊದಲ ಪ್ರೀತಿ ಹಾಗೂ ಆ ಪ್ರೀತಿ ಮುರಿದು ಬಿದ್ದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ನನ್ನ ಮೊದಲ ಹಾಗೂ ಕೊನೆ ಪ್ರೀತಿ ಅವರೇ ಎಂದು ಹೇಳಿಕೊಂಡಿದ್ದಾರೆ.

'ನನ್ನ ಜೀವನದಲ್ಲಿ ಒಂದು ಪ್ರೀತಿ ಆಯ್ತು. ಅದೇ ಮೊದಲು ಅದೇ ಕೊನೆ ಆಗಿ ಹೋಯ್ತು. ಅದಾದ ಮೇಲೆ ಯಾರೂ ಕೂಡ ಇಷ್ಟ ಆಗಲಿಲ್ಲ. ಆಗ ತಾನೇ ಹತ್ತನೇ ತರಗತಿ ಮುಗಿದಿತ್ತು. ಪಿಯುಸಿ ಸೇರಿದ್ದೆ. ನನಗೆ ಅಲ್ಲಿ ತನಕ ಹುಡುಗರೇ ಫ್ರೆಂಡ್ಸ್‌ ಇದ್ದಿದ್ದು. ಇಬ್ಬರು ಮೂವರು ಹುಡುಗಿಯರು ಫ್ರೆಂಡ್ಸ್‌ ಇದ್ದರಷ್ಟೇ. ಅಲ್ಲಿ ತನಕ ಯಾರ ಮೇಲೂ ಪ್ರೀತಿ ಎನ್ನುವ ಭಾವನೆ ಬಂದಿರಲಿಲ್ಲ. ಯಾರ ಮೇಲೆ ಕ್ರಶ್‌ ಸಹ ಇರಲಿಲ್ಲ' ಎಂದರು.

Kannada Actress Namratha Gowda Talks About Her Toxic Love relationship

'ಕಾಲೇಜಿಗೆ ಹೋದ ಮೇಲೆ ಪ್ರೀತಿ ಮಾಡಬೇಕಾದ ಪರಿಸ್ಥಿತಿ ಬಂತು. ನಾನು ಮೊದಲು ಅವರನ್ನು ದ್ವೇಷಿಸುತ್ತಿದ್ದೆ. ನನಗೆ ಅವರು ಇಷ್ಟ ಆಗುತ್ತಿರಲಿಲ್ಲ. ಇವನ್ಯಾರು ನನ್ನ ಹಿಂದೆ ಬಿದ್ದು ಯಾಕೆ ಹೀಗೆ ಹಿಂಸೆ ಕೊಡುತ್ತಾನೆ ಅನಿಸುತ್ತಿತ್ತು. ಅದಾದ ಮೇಲೆ ಎರಡು ಮೂರು ತಿಂಗಳಾದ ಮೇಲೆ ನನಗೂ ಅವರ ಮೇಲೆ ಪ್ರೀತಿ ಹುಟ್ಟಲು ಶುರುವಾಯ್ತು'.

'ನಮ್ಮಿಬ್ಬರ ಪ್ರೀತಿ ಕಾಲೇಜಿನಲ್ಲಿ ತುಂಬಾ ಫೇಮಸ್‌ ಆಗಿತ್ತು. ಇಬ್ಬರೂ ಎಲ್ಲರಿಗೂ ಗೊತ್ತಿರುವ ಕಾರಣ ಕಾಲೇಜಿನಲ್ಲಿ ನಮ್ಮಿಬ್ಬರ ರಿಲೇಷನ್‌ಶಿಪ್‌ ಫುಲ್‌ ಪೇಮಸ್‌ ಆಗಿತ್ತು. ಹೀಗಾಗಿ ಅಪ್ಪ-ಅಮ್ಮನ ಹತ್ತಿರನೂ ಹೇಳಿಕೊಂಡಿದ್ದೆ. ಹೀಗೊಬ್ಬ ಹುಡುಗ ಮೆಸೇಜ್‌ ಮಾಡುತ್ತಾನೆ. ಕಾಲೇಜಿಗೆ ಹೋದರೆ ಕಾಡಿಸುತ್ತಾನೆ ಅಂತೆಲ್ಲಾ. ಹೀಗಾಗಿ ಎಲ್ಲರಿಗೂ ಗೊತ್ತಿತ್ತು' ಎಂದರು.

Kannada Actress Namratha Gowda Talks About Her Toxic Love relationship

'ನಮ್ಮಿಬ್ಬರಿಗೂ ಆಗ ಹದಿನೈದು ವರ್ಷ. ಮೊದಲು ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪಿಯುಸಿ ಮುಗಿಯುತ್ತಿದ್ದಂತೆ ನಾನು ಮತ್ತೆ ನಟನೆ ಶುರು ಮಾಡಿದೆ. ಹೀಗಾಗಿ ಆ ಮನುಷ್ಯನಿಗೆ ನಾನು ಸಮಯ ಕೊಡಲು ಆಗಲಿಲ್ಲ. ಕೊನೆಗೆ ಅದೊಂತರಾ ಮೆಸ್ಸಿ, ಟಾಕ್ಸಿಕ್‌ ಸಂಬಂಧ ಆಗಿ ಹೋಯಿತು. ಆ ವಯಸ್ಸಿನಲ್ಲಿ ಇಬ್ಬರಿಗೂ ಅದನ್ನು ಹೇಗೆ ನಿರ್ವಹಿಸಬೇಕು ಅಂತಾ ಗೊತ್ತಾಗುತ್ತಿರಲಿಲ್ಲ. ನಾನು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗಿದ್ದೆ. ಈ ಮನುಷ್ಯ ನೀನೇ ಬೇಕು ಅಂತಾ ಬಂದು ಈಗ ಹೀಗೆ ಮಾಡುತ್ತಿದ್ದರಲ್ಲಾ ಅಂತಾ ತುಂಬಾ ನೋವಾಗುತ್ತಿತ್ತು. ಅಳುತ್ತಿದೆ. ಕೊನೆಗೂ ಈ ಸಂಬಂಧದಿಂದ ಹೊರ ಬರಬೇಕು ಅಂತಾ ನಿರ್ಧರಿಸಿ, ತುಂಬಾ ಸಮಯ ತೆಗೆದುಕೊಂಡು ಆ ಸಂಬಂಧದಿಂದ ಹೊರಬಂದೆ' ಎಂದು ಹೇಳಿದರು.

'ಈಗ ಆ ಮನುಷ್ಯ ಎಲ್ಲಿದ್ದಾರೆ ಏನೂ ಮಾಡುತ್ತಿದ್ದಾರೆ ಅಂತಾ ಏನೂ ಗೊತ್ತಿಲ್ಲ. ಅವರಿಂದ ಸಂಪೂರ್ಣವಾಗಿ ದೂರಾದೆ. ಯಾಕೆಂದರೆ ಆ ಸಂಬಂಧ ಉಳಿಯಬೇಕು ಅಂತಾ ತುಂಬಾ ಕಷ್ಟಪಟ್ಟಿದ್ದೆ ನಾನು. ನೀನು ನನ್ನ ಜೀವನದಲ್ಲಿ ಇರಬೇಕು, ಇರಲೇಬೇಕು ಅಂತಾ ಅವರಿಗೂ ನಾನು ಒತ್ತಡ ಹಾಕುತ್ತಿದ್ದೆ. ಒಂದು ಬ್ರೇಕಿಂಗ್‌ ಪಾಯಿಂಟ್‌ಅಲ್ಲಿ ನನಗೂ ಬೇಡ ಅನಿಸಿತು. ಬಿಟ್ಟು ಬಿಟ್ಟೆ' ಎಂದು ನಮ್ರತಾ ಗೌಡ ತಮ್ಮ ಮೊದಲ ಹಾಗೂ ಕೊನೆಯ ಪ್ರೀತಿ ಬಗ್ಗೆ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+