ಒಂದೇ ತಿಂಗಳಲ್ಲಿ 10ಕೆ.ಜಿ ತೂಕ ಇಳಿಸಿದ ನಟಿ ದೀಪಿಕಾ ದಾಸ್: ಯಾಕೆ ಗೊತ್ತಾ..?
ಬೆಂಗಳೂರು, ಸೆಪ್ಟೆಂಬರ್ 04: ನಾಗಿಣಿ ಧಾರಾವಾಹಿ ಹಾಗೂ ಬಿಗ್‌ಬಾಸ್ ಶೋ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ದೀಪಿಕಾ ದಾಸ್ ಮದುವೆಯ ನಂತರ ಕ್ಯಾಮರಾ ಮುಂದೆ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದರು. ಬಹಳ ದಿನಗಳ ಬಳಿಕ ಇದೀಗ ನಟನೆಗೆ ಕಮ್‌ಬ್ಯಾಕ್ ಮಾಡಿರುವ ನಟಿ ದೀಪಿಕಾ ದಾಸ್ #ಪಾರು ಪಾರ್ವತಿ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾಗೆ ಆಯ್ಕೆಯಾದ ಬಗ್ಗೆ ಹಾಗೂ ಸಿನಿಮಾಗೋಸ್ಕರ ಮಾಡಿರುವ ತ್ಯಾಗದ ಬಗ್ಗೆ ಸ್ವತಃ ದೀಪಿಕಾ ದಾಸ್ ಹೇಳಿಕೊಂಡಿದ್ದಾರೆ.
ನ್ಯೂಸ್‌ಫಸ್ಟ್ ಸುದ್ದಿ ವಾಹಿನಿ ಜೊತೆ ಮಾತನಾಡಿದ ಅವರು, 'ನನ್ನ ಸೋಶಿಯಲ್ ಮೀಡಿಯಾ ಪ್ರೊಫೈಲ್ ನೋಡಿ ಈ ಪಾತ್ರಕ್ಕೆ ಸೂಕ್ತ ಅಂತಾ ಆಯ್ಕೆ ಮಾಡಿದ್ದಾರೆ. ಆ ಪಾತ್ರವನ್ನು ನನ್ನ ನೋಡಿಯೇ ಬರೆದಿರಬಹುದಾ ಎನ್ನುವ ಪ್ರಶ್ನೆ ನನ್ನಲ್ಲಿತ್ತು. ನಾನು ಈ ಬಗ್ಗೆ ಎಂದೂ ಕೇಳಿಲ್ಲ. ಆದರೆ ನನ್ನ ನಿಜ ಜೀವನದ ರೀತಿಯೇ ಇರುವ ಪಾತ್ರವನ್ನು ನಾನು ಮಾಡುತ್ತಿದ್ದೇನೆ ಎನ್ನುವುದು ನನಗೆ ಖುಷಿ ಇದೆ' ಎಂದರು.

'ನನ್ನ ಪಾತ್ರ ಅಂತಾ ಬಂದಾಗ ನಿರ್ದೇಶಕರು ನನಗೆ ಜಾಸ್ತಿ ಹೇಳುತ್ತಲೇ ಇರಲಿಲ್ಲ. ನಾನು ಮಾಡಿರುವುದನ್ನು ನೋಡಿ, ಇದೇ ನನಗೆ ಬೇಕಾಗಿದ್ದು ಎನ್ನುತ್ತಿದ್ದರು. ಆಗ ನನಗೂ ಅನಿಸುತ್ತಿತ್ತು ಈ ಪಾತ್ರಕ್ಕೆ ನಾನು ನ್ಯಾಯ ಕೊಡುತ್ತಿದ್ದೇನೆ ಅಂತಾ. ಇದು ನನ್ನ ಪಾತ್ರವೇ ಅಂತಾ ನನಗೆ ಅನಿಸಿತು. ಕೊನೆಗೆ ನಾನು ಚೆನ್ನಾಗಿ ಮಾಡುತ್ತಿದ್ದೇನೆ ಎನ್ನುವ ತೃಪ್ತಿ ಕೂಡ ನನಗೆ ಬಂತು' ಎಂದು ಹೇಳಿದರು.
ಈ ಸಿನಿಮಾಕ್ಕಾಗಿ ಕೂದಲು ಕತ್ತರಿಸಿರುವುದು ಮತ್ತು ಒಂದೇ ತಿಂಗಳಿಗೆ ಹತ್ತು ಕೆ.ಜಿ ಕಡಿಮೆಯಾಗಿರುವ ಬಗ್ಗೆ ಮಾತನಾಡಿದ ದೀಪಿಕಾ ದಾಸ್, ' ಒಂದು ತಿಂಗಳಿಗೆ ಹತ್ತು ಕೆ.ಜಿ ಕಡಿಮೆಯಾಗಲೂ ಯಾರೂ ಹೋಗಬೇಡಿ. ಇದು ಒಳ್ಳೆಯದಲ್ಲ. ನನಗೆ ಅದು ಅನಿವಾರ್ಯವಾಗಿತ್ತು. ನಾನು ಮೊದಲೇ ಹೇಳಿದಂತೆ ಆ ಸಮಯ ತುಂಬಾ ಚಾಲೆಂಜಿಂಗ್ ಆಗಿತ್ತು. ಸಿನಿಮಾ ಇನ್ನೂ ಮೂರು-ನಾಲ್ಕು ತಿಂಗಳು ಮುಂದೆ ಹೋಗುವುದು ನನಗೆ ಇಷ್ಟ ಇರಲಿಲ್ಲ. ಈ ವಾತಾವರಣ ಎಲ್ಲಾ ನಾವು ಊಹಿಸಿದಂತೆ ಇರುವುದಿಲ್ಲ.

ನನಗೋಸ್ಕರ ಒಂದು ಸಂಪೂರ್ಣ ಟೀಂ ಕಾಯುತ್ತಿದೆ ಅಂದರೆ ನಾವು ಏನಾದರೂ ಪ್ರಯತ್ನ ಮಾಡಬೇಕು. ನಾನು ಸುಮ್ಮನೆ ಪ್ರಯತ್ನಪಟ್ಟೆ, ಪ್ರತಿಫಲನೂ ಸಿಕ್ಕಿತು ಅದಕ್ಕೆ. ಆಗ ಉದ್ದ ಕೂದಲು ಬಿಟ್ಟು ನೀಲಿ ಬಣ್ಣ ಹಾಕಿಕೊಂಡು ಖುಷಿಯಾಗಿದ್ದೆ. ಆದರೆ ಸಿನಿಮಾ ಅಂತಾ ಬಂದಾಗ ಯೋಚನೆ ಮಾಡಿದೆ. ಕೂದಲು ಮತ್ತೆ ಬರುತ್ತದೆ. ಆದರೆ ಈ ಪಾತ್ರನಾ ಮತ್ತೆ ನಾನು ಮಾಡಲು ಸಾಧ್ಯವಾಗುವುದಿಲ್ಲವೇನೋ, ಅವಕಾಶ ಹುಡುಕಿ ಬರುವುದು ಒಂದೇ ಸಾರಿ ಅಂತಾ ಎಲ್ಲಾದಕ್ಕೂ ಒಪ್ಪಿಕೊಂಡು ಈ ಪಾತ್ರ ಮಾಡಿದೆ ಎಂದರು.












Click it and Unblock the Notifications