ಗೌತಮಿ ಜಾದವ್‌ ಹಾದಿಯಲ್ಲಿ ಬದಲಾದ ಉಗ್ರಂ ಮಂಜು: ಇಷ್ಟಗಳನ್ನು ತ್ಯಜಿಸಿದ ನಟ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಉಗ್ರಂ ಮಂಜು, ಬಿಗ್‌ ಬಾಸ್‌ ಮುಗಿದ ಬಳಿಕ ಸಂಪೂರ್ಣ ಬದಲಾಗಿ ಹೋಗಿದ್ದಾರೆ. ಬಿಗ್‌ ಬಾಸ್‌ ಮನೆಗೆ ಹೋಗುವ ಮುನ್ನ ಉಗ್ರಂ ಮಂಜು ಆಗಿದ್ದ ಅವರು, ಹೊರಕ್ಕೆ ಬಂದ ಬಳಿಕ ಮ್ಯಾಕ್ಸ್‌ ಮಂಜುವಾಗಿ ಬದಲಾಗಿದ್ದಾರೆ. ಮಂಜು ಅವರ ಹಾವ-ಭಾವ, ನಡವಳಿಕೆ ಎಲ್ಲವೂ ಬದಲಾಗಿ ಹೋಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಉಗ್ರವಾಗಿ ಎಲ್ಲರ ಮುಂದೆಯೂ ಆರ್ಭಟಿಸುತ್ತಿದ್ದ ಮಂಜು ಈಗ ಸಿಕ್ಕಾಪಟ್ಟೆ ಸೈಲೆಂಟ್‌ ಆದಂತೆ ಕಾಣುತ್ತಿದ್ದಾರೆ. ಇದೆಲ್ಲದಕ್ಕಿಂತ ಮುಖ್ಯವಾಗಿ ತಮಗೆ ಅಚ್ಚುಮೆಚ್ಚಾಗಿದ್ದ ವಸ್ತುವನ್ನು ಮಂಜು ತ್ಯಜಿಸಿದ್ದಾರಂತೆ. ಹೌದು ಬಿಗ್‌ ಬಾಸ್‌ ಮನೆಯಿಂದ ಬಂದ ಬಳಿಕ ಬದಲಾದ ಉಗ್ರಂ ಮಂಜು ಮಾಂಸಹಾರ ಸೇವಿಸುವುದನ್ನು ಹಾಗೂ ಮದ್ಯಪಾನ ಮಾಡುವುದನ್ನು ಬಿಟ್ಟಿದ್ದಾರಂತೆ. ಈ ಬಗ್ಗೆ ಸ್ವತಃ ಮಂಜು ಅವರೇ ಹೇಳಿಕೊಂಡಿದ್ದಾರೆ.

Kannada Actor Ugram Manju Lifestyle Changes Post Bigg Boss Kannada

ಕಳೆದ ಎರಡು ದಿನಗಳ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ರಜತ್‌ ಕಿಶನ್‌ ಪತ್ನಿ ಅಕ್ಷಿತಾ ಬುಜ್ಜಿ ಹುಟ್ಟುಹಬ್ಬ ಅದ್ಧೂರಿಯಾಗಿ ನಡೆದಿದ್ದು, ಈ ಸೆಲೆಬ್ರೇಷನ್‌ನಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 11ರ ಬಹುತೇಕ ಎಲ್ಲಾ ಸ್ಪರ್ಧಿಗಳು ಭಾಗಿಯಾಗಿದ್ದರು. ಅಕ್ಷಿತಾ ಹುಟ್ಟುಹಬ್ಬದಲ್ಲಿ ಉಗ್ರಂ ಮಂಜು ಕೂಡ ಭಾಗಿಯಾಗಿದ್ದು, ಈ ವೇಳೆ ಊಟ ಮಾಡುವ ಸಮಯದಲ್ಲಿ ತಾವು ಮದ್ಯಪಾನ ಬಿಟ್ಟಿರುವ ವಿಚಾರವನ್ನು ಮಂಜು ಬಹಿರಂಗ ಪಡಿಸಿದ್ದಾರೆ.

Take a Poll

ಮೋಕ್ಷಿತಾ ಪೈ ಜೊತೆ ಊಟ ಮಾಡುತ್ತಾ ಮಾತನಾಡಿದ ಉಗ್ರಂ ಮಂಜು, 'ನಾನ್‌ ವೆಜ್‌ ತಿನ್ನುವುದನ್ನು ಹಾಗೂ ಡ್ರಿಂಕ್ಸ್‌ ಬಿಟ್ಟಿದ್ದೇನೆ. 48 ದಿನ ತಾಯತ ಕಟ್ಟಿಸಿ ಕೊಂಡಿದ್ದೇನೆ. ಅದಕ್ಕೆ ನನ್ನ ತಂಗಿ ಹೇಳುತ್ತಿದ್ದರು ಮುಖ ಬ್ರೈಟ್‌ ಆಗಿದೆ, ಗ್ಲಾಮರ್‌ ಬಂದಿದೆ ಅಂತಾ' ಎಂದು ಹೇಳಿದ್ದಾರೆ. ಮಂಜು ಈ ರೀತಿ ಹೇಳಿಕೆ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

Kannada Actor Ugram Manju Lifestyle Changes Post Bigg Boss Kannada

ಬಿಗ್‌ ಬಾಸ್‌ ಹೋಗುವ ಮುಂಚೆ ಉಗ್ರಂ ಮಂಜು ಮದ್ಯ ಪ್ರಿಯರಾಗಿದ್ದರು. ಅವರಿಗೆ ಮದ್ಯದ ಮೇಲೆ ಎಷ್ಟು ಪ್ರೀತಿ ಇದೆ ಎಂದು ತೋರಿಸಲು ಎರಡು ಬಾರಿ ಬಿಗ್‌ ಬಾಸ್‌ ವೇದಿಕೆಯ ಮೇಲೆ ಮದ್ಯದ ಬಾಟಲಿಗಳು ಮಂಜುಗಾಗಿ ವಿಶೇಷ ಪ್ರಚಾರ ನಡೆಸಿವೆ ಎನ್ನುವ ತಮಾಷೆಯ ವಿಡಿಯೋವನ್ನು ಹಾಕಲಾಗಿತ್ತು.

Kannada Actor Ugram Manju Lifestyle Changes Post Bigg Boss Kannada

ಇದೀಗ ಮಂಜು ಮದ್ಯ ಹಾಗೂ ನಾನ್‌ ವೆಜ್‌ ಬಿಟ್ಟಿರುವುದು ಇಂಟ್ರಸ್ಟಿಂಗ್‌ ವಿಚಾರವಾಗಿದ್ದು, ಗೆಳತಿ ಗೌತಮಿ ಜಾದವ್‌ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರಾ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಯಾಕೆಂದರೆ ಗೌತಮಿ ಜಾದವ್‌ ಕೂಡ ಮಾಂಸಾಹಾರವನ್ನು ತಿನ್ನುವುದು ಬಿಟ್ಟಿದ್ದು, ಅವರು ಈಗ ಸಂಪೂರ್ಣ ಸಸ್ಯಹಾರಿಯಾಗಿದ್ದಾರೆ. ಅದೇನೇ ಇರಲಿ, ಬಿಗ್‌ ಬಾಸ್‌ ಬಳಿಕ ಉಗ್ರಂ ಮಂಜು ಮಾಂಸಾಹಾರ, ಮದ್ಯ ಬಿಟ್ಟಿರುವುದಕ್ಕೆ ಅವರ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಮಂಜಣ್ಣ ಹೀಗೆ ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕಮೆಂಟ್‌ ಮಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+