ಹೊಸ ಫೋಟೋ ರಿವೀಲ್ ಮಾಡಿ ಯಶ್ ಕೊಟ್ಟ ಸಂದೇಶವೇನು?
ಸೋಶಿಯಲ್ ಮೀಡಿಯಾದಲ್ಲಿ ಸದ್ಯ ರಾಕಿಂಗ್ ಸ್ಟಾರ್ ಯಶ್ ಅವರ ಧೂಳೆಬ್ಬಿಸಿದ್ದಾರೆ. ಇತ್ತೀಚೆಗೆ ಅವರು ಮಾಡಿದ ಒಂದು ಕೆಲಸದಿಂದಾಗಿ ಅಭಿಮಾನಿಗಳ ಆಸೆ ದುಪ್ಪಟ್ಟಾಗಿದೆ. ಸೋಶಿಯಲ್ ಮೀಡಿಯಾಗಳಲ್ಲಿ ಯಶ್ ಅವರು ತಮ್ಮ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡಿ ಹುಚ್ಚೆಬ್ಬಿಸಿದ್ದಾರೆ. ಈ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು ಟಾಕ್ಸಿಕ್ ಸಿನಿಮಾದ ಅಪ್‌ಡೇಟ್ ಇರಬಹುದಾ ಎಂಬ ಕುತೂಹಲದಲ್ಲಿದ್ದಾರೆ.
ಇನ್ನು ಸಾಮಾನ್ಯವಾಗಿ ಯಶ್ ಆಗಾಗ ಪ್ರೊಫೈಲ್ ಫೋಟೋ ಅಪ್‌ಡೇಟ್ ಮಾಡುವ ಜಾಯಮಾನದವರಲ್ಲ. ಅಪರೂಪಕ್ಕೆ ಅಥವಾ ಏನಾದ್ರು ಸ್ಪೆಷಲ್ ಇದ್ದರಷ್ಟೇ ಅವರು ಈ ರೀತಿ ಸರ್‌ಪ್ರೈಸ್ ಕೊಡುತ್ತಾರೆ. ಇನ್ನು ಸದ್ಯ ಟಾಕ್ಸಿಕ್ ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಯಶ್ ಅವರು ಇತ್ತೀಚೆಗೆ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದರು.

ಈಗಲೂ ಸಹ ಅವರು ತಮ್ಮ ಪ್ರೊಫೈಲ್ ಫೋಟೋಗಳನ್ನು ಚೇಂಜ್ ಮಾಡುವ ಮೂಲಕ ಏನೋ ಸಂದೇಶ ರವಾನಿಸಿದ್ದಾರೆ ಎಂದೇ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ. ಈ ಫೋಟೋ ಮೆಚ್ಚಿಕೊಂಡಿರುವ ಹಲವರು ನಿಮ್ಮ ಲುಕ್ ಬೆಂಕಿ ಬಾಸ್..! ಎಂದು ಶೇರ್ ಮಾಡಿಕೊಂಡಿದ್ದಾರೆ. ಬಾಸ್ ಏನೋ ಹೇಳೋಕೆ ಹೊರಟಿದ್ದಾರೆ...ಎಲ್ರೂ ರೆಡಿ ಆಗ್ರೋ ಎಂದು ಯಶ್ ಅಭಿಮಾನಿಗಳು ಬರೆದುಕೊಂಡಿದ್ದಾರೆ.
ಇನ್ನು ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯುತ್ತಿದ್ದು, ಇದರ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶೂಟಿಂಗ್ ಮುಗಿಸಿ ವಾಪಸ್ ಆಗುತ್ತಿದ್ದ ಯಶ್ ಅವರ ವಿಡಿಯೋ ಅನ್ನು ಸ್ಥಳೀಯರು ಶೇರ್ ಮಾಡಿದ್ದು, ಇದರಲ್ಲಿ ಯಶ್ ಮಾಸ್ಕ್ ಹಾಕಿಕೊಂಡು ಹೋಗಿದ್ದಾರೆ. ಇದೇ ವೇಳೆ ಅಲ್ಲಿದ್ದ ಕೆಲವರಿಗೆ ಯಶ್ ಶೇಕ್ ಹ್ಯಾಂಡ್ ನೀಡಿ ಹೊರಟಿದ್ದಾರೆ.
ಕೆಜಿಎಫ್ ಬಳಿಕ ಯಶ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಗ್ಯಾಪ್ ನಂತರ ಸಿನಿಮಾ ಮಾಡುತ್ತಿರುವುದರಿಂದ ಈ ಸಿನಿಮಾ ಮೇಲಿನ ನಿರೀಕ್ಷೆಗಳು ಹೆಚ್ಚಾಗಿಯೇ ಇವೆ. ಟಾಕ್ಸಿಕ್ ಸಿನಿಮಾದಲ್ಲಿ ಬಾಲಿವುಡ್ ಬ್ಯೂಟಿ ಕಿಯಾರಾ ಅಡ್ವಾಣಿ ಕಾಣಿಸಿಕೊಳ್ಳಲಿದ್ದು, ಇತ್ತೀಚಿಗೆ ಶೂಟಿಂಗ್‌ನಲ್ಲೂ ಕಿಯಾರಾ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈಗ ಮತ್ತೊಬ್ಬ ಬಾಲಿವುಡ್ ನಟಿ ಹುಮಾ ಖುರೇಷಿ ಕೂಡ ಟಾಕ್ಸಿಕ್ ಸಿನಿಮಾದ ಮುಂಬೈ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ.

ಬೆಂಗಳೂರಿನಲ್ಲೂ ಶೂಟಿಂಗ್ ಮುಗಿಸಿದ್ದ ಚಿತ್ರತಂಡವು ಸದ್ಯ ಮುಂಬೈನಲ್ಲಿ ಬೀಡುಬಿಟ್ಟಿದೆ. ಡೈರೆಕ್ಟರ್ ಗೀತು ಮೋಹನ್‌ದಾಸ್ ಟಾಕ್ಸಿಕ್ ಸಿನಿಮಾಗಾಗಿ 200 ದಿನಗಳ ಶೂಟಿಂಗ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಲಂಡನ್ ಸೇರಿ ಹಲವು ಸ್ಥಳಗಳಲ್ಲೂ ಶೂಟಿಂಗ್ ನಡೆಯಲಿದ್ದು, ಇಡೀ ತಂಡ ಲಂಡನ್‌ಗೆ ಹಾರಲಿದೆ ಎಂದು ಹೇಳಲಾಗುತ್ತಿದೆ.
ಟಾಕ್ಸಿಕ್ ಸಿನಿಮಾದಲ್ಲಿ ಸೌತ್ ಲೇಡಿ ಸೂಪರ್‌ಸ್ಟಾರ್ ನಯನತಾರಾ ಸೇರಿದಂತೆ ಹಲವು ನಟಿಯರು ಇರಲಿದ್ದಾರೆ ಎಂದು ಚಿತ್ರತಂಡ ಘೋಷಣೆ ಮಾಡಿದೆ. ಟಾಕ್ಸಿಕ್ ಸಿನಿಮಾಗೆ ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳುತ್ತಿದ್ದು, ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ನವರು ಬಂಡವಾಳ ಹೂಡುತ್ತಿದೆ. ಈ ಸಿನಿಮಾದ ಬಜೆಟ್ ಕೂಡ ದೊಡ್ಡದು ಎನ್ನಲಾಗಿದೆ. ಟಾಕ್ಸಿಕ್ ಕೂಡ ಕೆಜಿಎಫ್ ರೀತಿ ಮೋಡಿ ಮಾಡಲಿದೆಯಾ ಎಂದು ಎಲ್ಲರೂ ಕುತೂಹಲದಿಂದ ಕಾದಿದ್ದಾರೆ.












Click it and Unblock the Notifications