Dhananjaya Marriage: ಮದುವೆ ವೇದಿಕೆಯಲ್ಲೇ ನನ್ನನ್ನು ಕ್ಷಮಿಸಿ ಎಂದ ಡಾಲಿ, ಕಾರಣವೇನು?

ಸ್ಯಾಂಡಲ್‌ವುಡ್‌ ನಟ ಡಾಲಿ ಧನಂಜಯ್‌ ಹಾಗೂ ಧನ್ಯತಾ ಅವರ ವಿವಾಹವು ಇಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿದೆ. ಇಂದು ಬೆಳಿಗ್ಗೆಯಿಂದಲೇ ಮದುವೆ ಶಾಸ್ತ್ರಗಳು ನೆರವೇರುತ್ತಿದ್ದು, ಡಾಲಿ ಹಾಗೂ ಧನ್ಯತಾ ಜೋಡಿ ಎಲ್ಲರ ಗಮನ ಸೆಳೆದಿದೆ. ನಿನ್ನೆ ಅದ್ಧೂರಿ ಆರತಕ್ಷತೆ ಕೂಡ ನಡೆದಿದ್ದು, ಸ್ಯಾಂಡಲ್‌ವುಡ್‌ ನಟ ನಟಿಯರು, ರಾಜಕಾರಣಿ ಹಾಗೂ ಅಭಿಮಾನಿಗಳು ದಂಡು ದಂಡಾಗಿ ಬಂದು ಡಾಲಿ ಜೋಡಿಗೆ ಹರಸಿದ್ದಾರೆ. ಆದರೆ ಡಾಲಿ ವೇದಿಕೆಯಲ್ಲೇ ಎಲ್ಲರ ಕ್ಷಮೆ ಕೋರಿ ಅಚ್ಚರಿ ಮೂಡಿಸಿದ್ದಾರೆ.

ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿ ಡಾಲಿ ಮದುವೆಗಾಗಿ ಬೃಹತ್‌ ಸೆಟ್‌ಗಳನ್ನು ನಿರ್ಮಿಸಲಾಗಿದೆ. ನಿನ್ನೆ ಆರತಕ್ಷತೆಗೂ ವಿಶೇಷ ಸೆಟ್‌ ಹಾಕಲಾಗಿತ್ತು. ಡಾಲಿ ಅವರು ಖುದ್ದಾಗಿ ಎಲ್ಲರಿಗೂ ಆಹ್ವಾನ ನೀಡಿ ಬಂದಿದ್ದ ಹಿನ್ನೆಲೆ ಇಡೀ ಸ್ಯಾಂಡಲ್‌ವುಡ್‌ ನಿನ್ನೆ ಮೈಸೂರಿನಲ್ಲಿತ್ತು. ವೇದಿಕೆ ತುಂಬೆಲ್ಲ ಜನವೋ ಜನ ತುಂಬಿ ತುಳುಕಾಡಿದರು. ರಾಜಕಾರಣಿಗಳು, ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಒಂದೆಡೆ ಸೇರಿದ್ದರಿಂದ ಅವರನ್ನು ನಿಯಂತ್ರಿಸಲು ಸ್ವಲ್ಪ ಕಷ್ಟವೂ ಆಯಿತು ಎಂದು ತಿಳಿದುಬಂದಿದೆ.

Kannada Actor Dhananjaya Apologizes To Fans During Wedding Reception

ಧನಂಜಯ್ ಮದುವೆ ಹಿನ್ನೆಲೆ ವಸ್ತು ಪ್ರದರ್ಶನ ಮೈದಾನದಲ್ಲಿ ಸಾವಿರಾರು ಅಭಿಮಾನಿಗಳಿಗೂ ಅವಕಾಶ ನೀಡಲಾಗಿತ್ತು. ಹಾಗಾಗಿ ಜನರು ಹೆಚ್ಚಾದ ಕಾರಣ ಕೆಲಕಾಲ ವೇದಿಕೆಯ ಮೇಲೆ ತಳ್ಳಾಟ, ನೂಕಾಟ ಕೂಡ ಎದುರಾಗಿ ಪರಿಸ್ಥಿತಿ ನಿಯಂತ್ರಿಸಲು ಸ್ವಲ್ಪ ಪರದಾಡುವಂತಾಯಿತು. ಇದನ್ನು ಮನಗಂಡ ಡಾಲಿ ಧನಂಜಯ್‌ ಅವರು ಕೆಲಕಾಲ ತಾವೇ ಬಂದು ದಟ್ಟಣೆ ನಿಯಂತ್ರಿಸಲು ಮುಂದಾದರು. ದಯವಿಟ್ಟು ನೂಕಾಡದೆ ಒಬ್ಬೊಬ್ಬರಾಗಿ ಬನ್ನಿ ಎಂದು ಮನವಿ ಕೂಡ ಮಾಡಿಕೊಂಡ್ರು. ಈ ವೇಳೆ ಕೆಲವರು ಸೆಲ್ಫೀ ಹಾಗೂ ಫೋಟೋಗಳಿಗೆ ಮುಗಿಬಿದ್ದ ಹಿನ್ನೆಲೆ ಡಾಲಿ ಅವರ ತಾಳ್ಮೆ ಕೂಡ ಮೀರಿತ್ತು. ಆಗ ಡಾಲಿ ಗರಂ ಕೂಡ ಆದರು ಎನ್ನಲಾಗಿದೆ.

ವೇದಿಕೆ ಮೇಲೆ ಆದ ಈ ತೊಂದರೆಯಿಂದ ಡಾಲಿ ಅವರು ಸ್ವಲ್ಪ ಬೇಸರವೂ ಆಗಿದ್ದರು. ಬಳಿಕ ಅಲ್ಲಿದ್ದ ತಮ್ಮ ಸಿಬ್ಬಂದಿಗೆ ಸೂಚನೆ ನೀಡಿ, ಜನರನ್ನು ನಿಯಂತ್ರಿಸುವಂತೆ ಅಲರ್ಟ್‌ ಮಾಡಿದರು. ಬಳಿಕ ಅವರು ಮಾಮೂಲಿ ಡಾಲಿಯಂತೆ ಸ್ಟೇಜ್‌ ಮೇಲೆ ಕೂಲ್‌ ಆದರು. ಕೆಲ ಸಮಯದ ಬಳಿಕ ಡಾಲಿ ಅವರು ವೇದಿಕೆ ಮೇಲಿಂದಲೇ ಎಲ್ಲರಿಗೂ ಕ್ಷಮೆಯೂ ಕೇಳಿದರು.

Kannada Actor Dhananjaya Apologizes To Fans During Wedding Reception

ನಮ್ಮನ್ನು ಹರಸಲು ಬಂದ ಎಲ್ಲರಿಗೂ ಧನ್ಯವಾದಗಳು. ನಮ್ಮನ್ನು ಪ್ರೀತಿಯಿಂದ ಆದರಿಸಿದ ಎಲ್ಲರಿಗೂ ಸ್ಪೆಷಲ್‌ ಥ್ಯಾಂಕ್ಸ್‌. ಬೇರೆ ಬೇರೆ ಕಾರಣಗಳಿಂದ ವೇದಿಕೆ ಮೇಲೆ ತೊಂದರೆಯಾಗಿದ್ರೆ ದಯವಿಟ್ಟು ಕ್ಷಮಿಸಿ, ಎಲ್ಲರನ್ನೂ ಅಟೆಂಡ್‌ ಮಾಡೋಕೆ ಆಗಲಿಲ್ಲ. ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನ ಪಟ್ಟಿದ್ದೀವಿ ಎಂದರು.

Kannada Actor Dhananjaya Apologizes To Fans During Wedding Reception

ಅಭಿಮಾನಿಗಳು ತುಂಬಾ ಜನ ವೇದಿಕೆ ಮೇಲೆ ಬಂದರು. ಇಂತಹ ಈವೆಂಟ್‌ಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದು ಸ್ವಲ್ಪ ಕಷ್ಟದ ಮಾತು. ಯಾರ ಮನಸ್ಸಿಗಾದರೂ ನೋವಾಗಿದ್ರೆ ದಯವಿಟ್ಟು ಕ್ಷಮಿಸಿ" ಎಂದರು. ನಿಮ್ಮ ಪ್ರೀತಿ ಯಾವತ್ತೂ ಹೀಗೆ ಇರಲಿ. ನನ್ನ ಮೇಲೆ ಮಾತ್ರವಲ್ಲ, ನನಗೆ ಜೊತೆಯಾಗಿರುವ ಧನ್ಯತಾ ಅವರ ಮೇಲೂ ನಿಮ್ಮ ಪ್ರೀತಿ ಹೀಗೆಯೇ ಇರಲಿ. ದಯವಿಟ್ಟು ಎಲ್ಲರೂ ಊಟ ಮಾಡಿಕೊಂಡೇ ಹೋಗಬೇಕು ಎಂದು ಅಭಿಮಾನಿಗಳಿಗೆ ಮನವಿ ಮಾಡಿದರು. ಒಟ್ಟಾರೆ ಒಂದು ಡಾಲಿ ಸಿಂಗಲ್‌ ಲೈಫಿಗೆ ಗುಡ್‌ಬೈ ಹೇಳಿ ಧನ್ಯತಾ ಅವರೊಂದಿಗೆ ಸಪ್ತಪದಿ ತುಳಿಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+