'ರಶ್ಮಿಕಾ ಮಂದಣ್ಣ ದಿನದ 24 ಗಂಟೆ ಕೆಲಸ ಮಾಡ್ತಾರೆ': ಕನ್ನಡ ನಟನ ಮೆಚ್ಚುಗೆ ಮಾತು

ಕನ್ನಡದ ಕಿರಿಕ್‌ ಪಾರ್ಟಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಶ್ಮಿಕಾ ಮಂದಣ್ಣ ಈಗ ಭಾರತೀಯ ಚಿತ್ರರಂಗದ ಬಹುಬೇಡಿಕೆಯ ನಟಿ. ಕನ್ನಡ ಸಿನಿಮಾದಿಂದಲೇ ನಟನೆ ಆರಂಭಿಸಿದ ರಶ್ಮಿಕಾ ಮಂದಣ್ಣ, 'ನನಗೆ ಕನ್ನಡ ಗೊತ್ತಿಲ್ಲ, ನಾನು ಹೈದರಾಬಾದ್‌ನವಳು' ಎನ್ನುವ ಹೇಳಿಕೆಗಳನ್ನು ಕೊಡುವುದರ ಮೂಲಕ ಪದೇ ಪದೇ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗುತ್ತಾರೆ. ಇತ್ತೀಚಿಗೆ ನೀಡಿದ ಹೇಳಿಕೆಯಿಂದ ತೀವ್ರ ಟೀಕೆಗೆ ಗುರಿಯಾಗುತ್ತಿರುವ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಕನ್ನಡ ಚಿತ್ರರಂಗದ ನಟ ಮಾತನಾಡಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ.

ದಿಯಾ ಚಿತ್ರದ ನಾಯಕ ದೀಕ್ಷಿತ್‌ ಶೆಟ್ಟಿ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಬಗ್ಗೆ ಮಾತನಾಡಿದ್ದಾರೆ. 'ರಶ್ಮಿಕಾ ಮಂದಣ್ಣ ಅವರ ಜೊತೆಗೆ ನಟಿಸಿರುವುದಕ್ಕೆ ತುಂಬಾ ತುಂಬಾ ಖುಷಿಯಾಗುತ್ತದೆ. ಅವರು ಈಗ ತಲುಪಿರುವ ಸ್ಥಾನ ನೋಡಲು ತುಂಬಾ ಖುಷಿಯಾಗುತ್ತದೆ. ನಮ್ಮ ಕರ್ನಾಟಕದಿಂದ ನಮ್ಮ ಕನ್ನಡದ ಹುಡುಗಿಯಾಗಿ ಆ ಹಂತಕ್ಕೆ ಹೋಗಿ ಅಲ್ಲಿ ಆಕೆ ಬೆಳೆದಿರುವ ಪರಿ ನೋಡಿದರೆ ಹೆಮ್ಮೆ ಅನಿಸುತ್ತದೆ'.

Kannada Actor Deekshith Shetty Praises Actress Rashmika Mandanna

'ನನ್ನ ಪ್ರಕಾರ ಹೇಳಬೇಕು ಅಂದರೆ ಅವರು ತುಂಬಾ ಶ್ರಮಜೀವಿ. ನನಗೆ ನಾನೇ ಜಾಸ್ತಿ ಕಷ್ಟಪಟ್ಟು ಕೆಲಸ ಮಾಡುವುದು ಎನ್ನುವುದು ತಲೆಯಲ್ಲಿದೆ. ನಾನು ತುಂಬಾ ಕೆಲಸ ಮಾಡುತ್ತೇನೆ. ಹಗಲು ರಾತ್ರಿ ಕೆಲಸ ಮಾಡುತ್ತೇನೆ. ಆದರೆ ನನಗೆ ಅವರನ್ನು ನೋಡಿದಾಗ ನನಗಿಂತ ಇವರು ಇನ್ನಷ್ಟು ಹೆಚ್ಚು ಶ್ರಮ ಹಾಕಿ ಕೆಲಸ ಮಾಡುತ್ತಾರೆ ಅನಿಸಿತು' ಎಂದರು.

'ರಶ್ಮಿಕಾ ಮಂದಣ್ಣ ಅವರು ದಿನದ ಇಪ್ಪತ್ನಾಲ್ಕು ಗಂಟೆಗಳು ಸಹ ಕೆಲಸ ಮಾಡುತ್ತಾ ಇರುತ್ತಾರೆ. ಅವರು ಎಷ್ಟು ಹೊತ್ತು ಯಾವಾಗ ಮಲಗುತ್ತಾರೆ ನಿಜವಾಗಿಯೂ ನನಗೆ ಗೊತ್ತಿಲ್ಲ. ನಾವು ಸಿನಿಮಾ ಮಾಡುವಾಗಲೇ ಪುಷ್ಟ- ೨ ಸಿನಿಮಾ ಶೂಟಿಂಗ್‌ ನಡೆಯುತ್ತಿತ್ತು. ನಮ್ಮ ಗರ್ಲ್‌ಫ್ರೆಂಡ್‌ ಸಿನಿಮಾ ಕೂಡ ನಡೆಯುತ್ತಿತ್ತು. ಜೊತೆಗೆ ಏಳು ಎಂಟು ಸಿನಿಮಾಗಳು ಮಾಡುತ್ತಿದ್ದರು. ಹೀಗಾಗಿ ಅವರು ಶೂಟಿಂಗ್‌ ಸೆಟ್‌ಗೆ ಬರಬೇಕಾದರೆ ಇವರು ಇಷ್ಟೊಂದು ಸಿನಿಮಾಗಳನ್ನು ಒಟ್ಟೊಟ್ಟಿಗೆ ಹೇಗೆ ಮಾಡುತ್ತಾರೆ ಅನಿಸುತ್ತಿತ್ತು'.

Kannada Actor Deekshith Shetty Praises Actress Rashmika Mandanna

'ಅವರು ಶೂಟಿಂಗ್‌ ಸೀನ್‌ಗೆ ಬಂದಾಗ ಅವರು ನಟನೆ ಮಾಡುವುದನ್ನು ನೋಡಿದಾಗ ಆ ಸುಸ್ತು ಏನು ಕಾಣುತ್ತಿರಲಿಲ್ಲ. ಒಂದು ದಿನ ಬೆಳಗ್ಗೆ ಆರು ಗಂಟೆಯಿಂದ ರಾತ್ರಿ ಎರಡು ಗಂಟೆ ತನಕ ಶೂಟ್‌ ಮಾಡಿದ್ದೇವೆ. ಅವರು ಹೋಗ್ತಾ ಅವರು ಜಿಮ್‌ ಟ್ರೈನರ್‌ಗೆ ಫೋನ್‌ ಮಾಡಿ ಟ್ರೈನಿಂಗ್‌ ಮಾಡುವಂತೆ ಕೇಳಿದರು. ಅಲ್ಲದೇ ಅವರು ಕ್ಯಾರವಾನ್‌ನಲ್ಲೇ ಟ್ರೆಡ್‌ಮಿಲ್‌ ಇಟ್ಟುಕೊಂಡಿದ್ದಾರೆ. ಶೂಟಿಂಗ್ ಮಧ್ಯೆ ಸ್ವಲ್ಪ ಸಮಯ ಸಿಕ್ಕರೂ ಹೋಗಿ ಅದರ ಮೇಲೆ ಓಡುತ್ತಾರೆ. ನಾನು ಅವರ ಜೊತೆಗೆ ಪ್ರತಿ ಸಲ ಮಾತನಾಡುವಾಗಲೂ ಅವರು ಅಷ್ಟು ದೊಡ್ಡ ನಟಿ ಅಂತಾ ಎಂದೂ ಅನಿಸಲ್ಲ. ಅವರು ಹಾಗೆ ಇರುತ್ತಿದ್ದರು' ಎಂದು ನಟಿ ರಶ್ಮಿಕಾ ಮಂದಣ್ಣ ಬಗ್ಗೆ ನಟ ದೀಕ್ಷಿತ್‌ ಶೆಟ್ಟಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+