Kalki 2898 AD on OTT: ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿರುವ ಕಲ್ಕಿ 2898 ಎಡಿ ಯಾವ ಒಟಿಟಿ ಪಾಲು?
ದೊಡ್ಡ ನಿರೀಕ್ಷೆಯಿಟ್ಟುಕೊಂಡು ತೆರೆಗೆ ಬಂದ ಪ್ರಭಾಸ್, ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಕಲ್ಕಿ 2898 ಎಡಿ ಕೊನೆಗೂ ಬಿಡುಗಡೆಯಾಗಿದೆ. ಅಭಿಮಾನಿಗಳ ಉತ್ಸಾಹ ಮತ್ತು ನಿರೀಕ್ಷೆಯ ನಡುವೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಬೃಹತ್ ಬಜೆಟ್‌ನ ಪ್ಯಾನ್-ಇಂಡಿಯನ್ ವೈಜ್ಞಾನಿಕ ಕಾಲ್ಪನಿಕ ಚಲನಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರಂತಹ ದಿಗ್ಗಜರು ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾದ ಒಟಿಟಿಗೆ ಹಕ್ಕುಗಳು ಈಗಾಗಲೇ ಮಾರಾಟವಾಗಿದೆ.

ಕಲ್ಕಿ 2898 AD ಯಾವ ಒಟಿಟಿಯಲ್ಲಿ ಬಿಡುಗಡೆ?
ಕಲ್ಕಿ 2898 ಎಡಿ ಸಂಸ್ಕೃತ ಪಠ್ಯಗಳಿಂದ ಪ್ರೇರಿತವಾಗಿದೆ. ಇದರಲ್ಲಿ ಅಗಸ್ತ್ಯ ಋಷಿಯ ಕಲ್ಕಿ ಪುರಾಣ ಮತ್ತು ವೇದ ವ್ಯಾಸರಿಂದ ಮಹಾಭಾರತ ಸೇರಿವೆ. ವರದಿಗಳ ಪ್ರಕಾರ, ಕಲ್ಕಿ 2898 AD ಯ ಒಟಿಟಿ ಹಕ್ಕುಗಳನ್ನು ದೇಶದ ಎರಡು ದೊಡ್ಡ ಸ್ಟ್ರೀಮಿಂಗ್ ಫ್ಲ್ಯಾಟ್‌ಫಾರಂಗಳು ಪಡೆದುಕೊಂಡಿವೆ ಎಂದು ವರದಿಯಾಗಿದೆ.
ಕಲ್ಕಿ 2898 ಎಡಿ ಚಿತ್ರದ ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್ 175 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಯಾಗಿದೆ. ಚಿತ್ರದ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಆವೃತ್ತಿಗಳನ್ನು ಅಮೆಜಾನ್ ಪ್ರೈಮ್ ವಿಡಿಯೋ 200 ಕೋಟಿ ರೂ.ಗೆ ಪಡೆದುಕೊಂಡಿದೆ. ಈ ಸುದ್ದಿಯನ್ನು ಒಟಿಟಿ ವೇದಿಕೆಗಳು ಇನ್ನೂ ದೃಢಪಟ್ಟಿಲ್ಲ.
ಪ್ರಭಾಸ್ ನಟನೆಯ ಕಲ್ಕಿ 2898 AD ಯ ಥಿಯೇಟ್ರಿಕಲ್ ಬಿಡುಗಡೆಯ ನಂತರ ಒಟಿಟಿಗೆ ಬರಲು ಸುಮಾರು ಎರಡು-ಮೂರು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ, ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಆರಂಭದ ವೇಳೆಗೆ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿವೆ ಟಿಕೆಟ್‌ಗಳು
ಇತ್ತೀಚಿನ ವರದಿಗಳ ಪ್ರಕಾರ ಅದರ ಎಲ್ಲಾ ಭಾಷೆಯ ಆವೃತ್ತಿಗಳಲ್ಲಿ ಕಲ್ಕಿ ಕಮಾಲ್ ಮಾಡುತ್ತಿದೆ. ಬಿಡುಗಡೆಯ ದಿನದಂದು ಭಾರಿ ಟಿಕೆಟ್ ಮಾರಾಟವನ್ನು ಸೃಷ್ಟಿಸಿದೆ. ಟ್ರ್ಯಾಕರ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ, ಚಲನಚಿತ್ರವು ಅದರ ಪ್ರೀಮಿಯರ್ ದಿನಕ್ಕೆ 1 ಮಿಲಿಯನ್‌ಗಿಂತಲೂ ಹೆಚ್ಚು ಟಿಕೆಟ್ ಮಾರಾಟವಾಗಿದೆ.
ಪ್ರೀ ಸೇಲ್ಸ್ ಬ್ಯುಸಿನೆಸ್ ಒಂದರಲ್ಲೇ ಚಿತ್ರ 37 ಕೋಟಿ ಕಲೆಕ್ಷನ್ ಮಾಡಿದೆ. ಚಿತ್ರವು ತನ್ನ ಮೊದಲ ದಿನದಲ್ಲಿ ರೂ 200 ಕೋಟಿ ಗಳಿಸಬಹುದು ಎಂದು ಅಂದಾಜಿಸಲಾಗಿತ್ತು. ಅದರಂತೆಯೇ ಮೊದಲ ದಿನ 191.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಯುಎಸ್‌ನಂತಹ ಜಾಗತಿಕ ಮಾರುಕಟ್ಟೆಗಳಲ್ಲಿಯೂ ಉತ್ತಮ ಕಲೆಕ್ಷನ್ ಕಂಡು ಬಂದಿದೆ.
ನಾಗ್ ಅಶ್ವಿನ್ ಆಕ್ಷನ್ ಕಟ್ ಹೇಳಿರುವ ಕಲ್ಕಿ 2898 AD ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದ ಹೆಸರುಗಳಿವೆ. ವಿಜಯ್ ದೇವರಕೊಂಡ, ದುಲ್ಕರ್ ಸಲ್ಮಾನ್, ಎಸ್ ಎಸ್ ರಾಜಮೌಳಿ ಮತ್ತು ಮೃಣಾಲ್ ಠಾಕೂರ್ ಅವರಂತಹ ಕೆಲವು ಪ್ರಮುಖ ಹೆಸರುಗಳು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
600 ಕೋಟಿ ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ಸಿ ಅಸ್ವಾನಿ ದತ್ ನಿರ್ಮಿಸಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ. ಜೋರ್ಡ್ಜೆ ಸ್ಟೋಜಿಲ್ಕೋವಿಕ್ ಛಾಯಾಗ್ರಾಹಕರಾಗಿದ್ದಾರೆ.












Click it and Unblock the Notifications