Kalki 2898 AD OTT release: ಥಿಯೇಟರ್‌ನಲ್ಲಿ ಧೂಳೆಬ್ಬಿಸುತ್ತಿರುವ ಕಲ್ಕಿ 2898AD ಒಟಿಟಿಗೆ ಎಂಟ್ರಿ; ಯಾವಾಗ, ಎಲ್ಲಿ ತಿಳಿಯಿರಿ
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರು ಅಭಿನಯಿಸಿರುವ ಸೂಪರ್ ಹಿಟ್ ವೈಜ್ಞಾನಿಕ ಆಕ್ಷನ್ ಚಲನಚಿತ್ರ ಕಲ್ಕಿ 2898 AD ಥಿಯೇಟರ್‌ಗಳಲ್ಲಿ ಧೂಳೆಬ್ಬಿಸುತ್ತಿದೆ. ಇದರ ಜೊತೆಗೆ ಸಿನಿಮಾ ಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ.
ನಾಗ್ ಅಶ್ವಿನ್ ನಿರ್ದೇಶನದ ಈ ಪೌರಾಣಿಕ ಮತ್ತು ವೈಜ್ಞಾನಿಕ ಆಕ್ಷನ್ ಸಿನಿಮಾವು ಈಗಾಗಲೇ ತನ್ನ ಥಿಯೇಟರ್ ಬಿಡುಗಡೆಯೊಂದಿಗೆ ವಿಶ್ವದಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ. ಜೂನ್ 27 ರಂದು ಬಿಡುಗಡೆಯಾದ ಕಲ್ಕಿ 2898 ಎಡಿ ಗಲ್ಲಾಪೆಟ್ಟಿಗೆಯಲ್ಲಿ ಬಿರುಗಾಳಿ ಎಬ್ಬಿಸಿದೆ. ಜಾಗತಿಕವಾಗಿ 714 ಕೋಟಿ ರೂಪಾಯಿಗಳನ್ನು ಗಳಿಸಿದೆ. ಆರು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ವ್ಯಾಪಕ ಮೆಚ್ಚುಗೆ ಮತ್ತು ಗಣನೀಯ ಗಳಿಕೆ ಕಂಡಿದೆ. ಈಗ ಒಟಿಟಿ ವೇದಿಕೆಗೆ ಬಿಡುಗಡೆಯಾಗಲು ಸಿದ್ಧವಾಗಿದೆ.

ಕಲ್ಕಿ 2898 ಎಡಿ ಒಟಿಟಿ ಬಿಡುಗಡೆ
ಇತ್ತೀಚಿನ ಅಪ್‌ದೇಟ್ ಪ್ರಕಾರ, ಕಲ್ಕಿ 2898 ಎಡಿ ಸಿನಿಮಾವು ಎರಡು ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ. ಅಮೇಜಾನ್ ಪ್ರೈಮ್ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಅಮೆಜಾನ್ ಪ್ರೈಮ್ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡಲಿದೆ. ಮತ್ತೊಂದೆಡೆ, ನೆಟ್‌ಫ್ಲಿಕ್ಸ್ ಹಿಂದಿ ಆವೃತ್ತಿಯನ್ನು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಸ್ಟ್ರೀಮ್ ಮಾಡುತ್ತದೆ.
ಚಿತ್ರದ ಆರಂಭಿಕ ಡಿಜಿಟಲ್ ಬಿಡುಗಡೆಯನ್ನು ಜುಲೈ ಅಂತ್ಯದಲ್ಲಿ ಯೋಜಿಸಲಾಗಿತ್ತು. ಆದರೆ ಗಲ್ಲಾಪೆಟ್ಟಿಗೆಯಲ್ಲಿ ಸಕತ್ ಕಮಾಲ್ ಮಾಡುತ್ತಿರುವ ಕಾರಣ ನಿರ್ಮಾಪಕರು ಚಿತ್ರದ ಥಿಯೇಟ್ರಿಕಲ್ ರನ್ ಅನ್ನು ವಿಸ್ತರಿಸಲು ನಿರ್ಧರಿಸಿದ್ದಾರೆ. ಪರಿಣಾಮವಾಗಿ, ಚಿತ್ರವು ಈಗ ಸೆಪ್ಟೆಂಬರ್ ಎರಡನೇ ವಾರದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಕಲ್ಕಿ 2898 ಎಡಿ 600 ಕೋಟಿ ರೂಪಾಯಿಗಳ ಬಜೆಟ್‌ನೊಂದಿಗೆ ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿ ದಾಖಲೆ ಬರೆದಿದೆ. ಚಿತ್ರವು ತನ್ನ ಥಿಯೇಟರ್‌ಗಳಿಂದ ಹೊರ ಬರುವ ವೇಳೆಗೆ 1000 ಕೋಟಿ ರೂಪಾಯಿಗಳನ್ನು ಗಳಿಸುವ ನಿರೀಕ್ಷೆಯಿದೆ.

ವೈಜಯಂತಿ ಮೂವೀಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಸೇರಿದಂತೆ ಬಹುತಾರಾಂಗಣವಿದೆ. ಪೋಷಕ ಪಾತ್ರಗಳಲ್ಲಿ ದಿಶಾ ಪಟಾನಿ, ಶಾಶ್ವತ ಚಟರ್ಜಿ, ವಿಜಯದೇವರಕೊಂಡ, ಮೃಣಾಲ್ ಠಾಕೂರ್, ಅನ್ನಾ ಬೇನ್, ಎಸ್‌ಎಸ್ ರಾಜಮೌಳಿ ಮತ್ತು ಶೋಭನಾ ನಟಿಸಿದ್ದಾರೆ.
ಚಲನಚಿತ್ರದದಲ್ಲಿ ಪುರಾಣದ ಅಂಶಗಳನ್ನು ಹೆಣೆದುಕೊಂಡು ಭವಿಷ್ಯದ ಜಗತ್ತನ್ನು ಪರಿಶೋಧಿಸಲಾಗಿದೆ. ನಿರ್ದೇಶಕ ನಾಗ್ ಅಶ್ವಿನ್ ಮುಂದಿನ ಭಾಗಕ್ಕೆ ಇನ್ನಷ್ಟು ಮಹತ್ವಾಕಾಂಕ್ಷೆಯ ವಿಷಯಗಳ ಬಗ್ಗೆ ಸುಳಿವು ನೀಡಿದ್ದಾರೆ.ಕ ಲ್ಕಿ 2898 AD ಯಿಂದ ಪರಿಹರಿಸಲಾಗದ ಪ್ರತಿಯೊಂದು ಎಳೆಯನ್ನು ಮುಂದಿನ ಭಾಗದಲ್ಲಿ ತಿಳಿಸಲಾಗುವುದು ಎಂದು ನಾಗ್ ಅಶ್ವಿನ್ ಉಲ್ಲೇಖಿಸಿದ್ದಾರೆ.












Click it and Unblock the Notifications