ನಟ ಯಶ್ ಪತ್ನಿಯಾಗಿ ಖ್ಯಾತ ನಟಿ ಕಾಜಲ್ ಅಗರ್ವಾಲ್ ನಟನೆ, ಯಾವ ಸಿನಿಮಾದಲ್ಲಿ?
ಕೆಜಿಎಫ್ ಬಳಿಕ ರಾಕಿಂಗ್ ಸ್ಟಾರ್ ಯಶ್ ಅವರು ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಎರಡೂ ಕೂಡ ಬಿಗ್ ಬಜೆಟ್‌ನ ಸಿನಿಮಾಗಳಾಗಿದ್ದು, ಮೊದಲಿಗೆ ಟಾಕ್ಸಿಕ್ ರಿಲೀಸ್ ಆಗಲಿದೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಪೂರ್ಣಗೊಳ್ಳುತ್ತಿದ್ದು, ಖ್ಯಾತ ನಟಿಯರ ಬಳಗವೇ ಈ ಸಿನಿಮಾದಲ್ಲಿದೆ. ಇನ್ನು ರಾಮಾಯಣ ಸಿನಿಮಾದಲ್ಲಿ ಕೂಡ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮತ್ತೊಂದೆಡೆ ಯಶ್ ಅವರ ಹೊಸ ಸಿನಿಮಾದಲ್ಲಿ ನಾಯಕಿಯಾಗಿ ಖ್ಯಾತ ನಟಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ರಾಮಾಯಣ ಸಿನಿಮಾದಲ್ಲಿ ಯಶ್ ರಾವಣನ ಪಾತ್ರ ಮಾಡುತ್ತಿದ್ದಾರೆ. ರಾಮನ ಪಾತ್ರವನ್ನು ರಣವೀರ್ ಸಿಂಗ್ ಮಾಡುತ್ತಿದ್ದು, ಸೀತೆ ಪಾತ್ರಕ್ಕೆ ಈಗಾಗಲೇ ಸಾಯಿ ಪಲ್ಲವಿ ಕೂಡ ಕನ್ಫರ್ಮ್ ಆಗಿದೆ. ಇನ್ನು ಯಶ್ ಅವರ ನಾಯಕಿ ಪಾತ್ರ ಎಂದರೆ ಅದು ರಾವಣ ಪತ್ನಿ ಮಂಡೋದರಿಯ ಪಾತ್ರ. ಹಾಗಾಗಿ ಈ ಪಾತ್ರಕ್ಕೆ ಕೂಡ ಫೇಮಸ್ ನಟಿ ಆಯ್ಕೆಯಾಗಿದ್ದಾರಂತೆ. ತೆಲುಗು, ತಮಿಳು, ಬಾಲಿವುಡ್ ಸೇರಿದಂತೆ ಬಹುಭಾಷೆಗಳಲ್ಲಿ ಮಿಂಚಿರುವ ನಟಿ ಕಾಜಲ್ ಅಗರ್ವಾಲ್ ಅವರು ಈ ಸಿನಿಮಾದಲ್ಲಿ ರಾವಣ ಯಶ್ ಪತ್ನಿ ಮಂಡೋದರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಸಲ್ಮಾನ್ ಖಾನ್ ಅವರ "ಸಿಕಂದರ್" ಸಿನಿಮಾ ಬಳಿಕ ನಟಿ ಕಾಜಲ್ ಅಗರ್ವಾಲ್ ನಿತೇಶ್ ತಿವಾರಿ ಅವರ "ರಾಮಾಯಣ" ಸಿನಿಮಾಗೆ ಎಂಟ್ರಿ ಕೊಟ್ಟಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಕಾಜಲ್ ಮಂಡೋದರಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ರಾವಣನ ಪಾತ್ರವನ್ನು ನಿರ್ವಹಿಸುವ ನಟ ಯಶ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ಈ ಹಿಂದೆ ನಟಿ ಸಾಕ್ಷಿ ತನ್ವರ್ ಮಂಡೋದರಿ ಪಾತ್ರ ಮಾಡಲಿದ್ದಾರೆ ಎಂದು ಎಂದು ಹೇಳಲಾಗಿತ್ತು. ಆದರೆ, ನಿರ್ಮಾಣ ಸಂಸ್ಥೆಯ ಆಪ್ತ ಮೂಲಗಳು ಕಾಜಲ್ ಅವರ ಹೆಸರನ್ನು ಬಾಯ್ಬಿಟ್ಟಿದ್ದು, ಈಗಾಗಲೇ ಕಾಜಲ್ ತನ್ನ ಪಾತ್ರದ ಚಿತ್ರೀಕರಣ ಕೂಡ ಆರಂಭಿಸಿದ್ದಾರಂತೆ.
ರಾಮಾಯಣ ಸಿನಿಮಾದಲ್ಲಿ ಮಂಡೋದರಿಯ ಪಾತ್ರ ಕೂಡ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಯಶ್ ಎದುರು ರಾವಣನ ಪತ್ನಿಯ ಮಹತ್ವವಾದ ಪಾತ್ರ ಮಾಡಲು ಅತ್ಯುತ್ತಮ ನಾಯಕಿಯನ್ನೇ ಚಿತ್ರತಂಡ ಹುಡುಕುತ್ತಿತ್ತು. ಅದರಂತೆ ಕಾಜಲ್ ಈ ಪಾತ್ರಕ್ಕೆ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ. ಅಲ್ಲದೆ ನಿರ್ಮಾಪಕರು ಬಹುಭಾಷೆಗಳಲ್ಲಿ ಪರಿಚಿತರಾಗಿರುವ ನಟಿಯನ್ನೇ ಹುಡುಕುತ್ತಿದ್ದರು. ಅದರಂತೆ ಕಾಜಲ್ ಬಾಲಿವುಡ್ ಸೇರಿದಂತೆ ಉತ್ತರ ಮತ್ತು ದಕ್ಷಿಣ ಎರಡರಲ್ಲೂ ಕಾಜಲ್ ಅಗರ್ವಾಲ್ ಅವರ ಪ್ರಸಿದ್ಧಿ ಪಡೆದಿದ್ದಾರೆ. ಈ ಕಾರಣದಿಂದ ಅವರೇ ಈ ಪಾತ್ರಕ್ಕೆ ಸೂಕ್ತ ಎಂಬ ತೀರ್ಮಾನಕ್ಕೆ ಬರಲಾಯಿತು ಎಂದು ನಿರ್ಮಾಣ ಸಂಸ್ಥೆಯ ಮೂಲಗಳು ಹೇಳಿವೆ.

ಲಂಕೆಯ ಬುದ್ಧಿವಂತ ಮತ್ತು ಆಕರ್ಷಕ ರಾಣಿ ಎಂದು ಮಂಡೋದರಿ ಪಾತ್ರವನ್ನು ಉಲ್ಲೇಖಿಸಲಾಗಿದೆ. ತನ್ನ ಅಚಲ ನೈತಿಕ ದಿಕ್ಸೂಚಿ ಮತ್ತು ಆಂತರಿಕ ಶಕ್ತಿಗೆ ಮಂಡೋದರಿ ಹೆಸರುವಾಸಿ ಎನ್ನಲಾಗಿದೆ. ಅಲ್ಲದೆ ರಾಕ್ಷಸ ರಾಜ ಮಾಯಾಸುರ ಮತ್ತು ಅಪ್ಸರಾ ಹೇಮಾ ಅವರ ಮಗಳಾದ ಮಂಡೋದರಿ ರಾವಣನ ಪತ್ನಿಯಾಗಿ ಮಹತ್ವದ ಜವಾಬ್ದಾರಿ ವಹಿಸಿದ್ದರು ಎಂದು ಪುರಾಣಗಳಲ್ಲಿದೆ. ರಾವಣ ಸೀತೆಯನ್ನು ಅಪಹರಿಸಿದಾಗಲೂ ಅದನ್ನು ವಿರೋಧಿಸಿ, ಸೀತೆಯನ್ನು ಹಿಂದಿರುಗಿಸಿ ಧರ್ಮದ ಮಾರ್ಗ ಅನುಸರಿಸುವಂತೆ ಪದೇ ಪದೇ ಒತ್ತಾಯಿಸಿದ್ದಳು. ರಾಮಾಯಣ ಸಿನಿಮಾದಲ್ಲಿ ಈ ಪಾತ್ರವನ್ನು ಕಾಜಲ್ ಅಚ್ಚುಕಟ್ಟಾಗಿ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications