Kaatera: ಶತಕೋಟಿ ಕ್ಲಬ್ ಸೇರಿದ ಕಾಟೇರ: ಬೆಂಗಳೂರಿನಲ್ಲಿ ಪ್ರದರ್ಶನ ಸಂಖ್ಯೆ ಹೆಚ್ಚಳ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ತಾವು ಬಾಕ್ಸ್ ಆಫೀಸ್ ಸುಲ್ತಾನ್ ಅನ್ನೋದನ್ನ ಸಾಬೀತು ಮಾಡಿದ್ದಾರೆ. ಡಿಸೆಂಬರ್ 29 ರಂದು ಬಿಡುಗಡೆಯಾದ ಬಹುನಿರೀಕ್ಷಿತ ಕಾಟೇರ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹಲವು ದಾಖಲೆ ಬರೆಯುತ್ತಿದೆ.
ಬಿಡುಗಡೆಯಾದ ಮೊದಲ ವಾರದಲ್ಲೇ ಕಾಟೇರ ನೂರು ಕೋಟಿ ಕಲೆಕ್ಷನ್ ಮಾಡಿದೆ. ಏಳು ದಿನದಲ್ಲಿ ಸುಮಾರು 52 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದು, 104 ಕೋಟಿ ರೂ. ಕಲೆಕ್ಷನ್ ಆಗಿದೆ ಎಂದು ವರದಿಯಾಗಿದೆ.

ಒಂದು ವಾರ ಕಳೆದರು ಕಾಟೇರ ಕ್ರೇಜ್ ಇನ್ನು ಕಡಿಮೆ ಆಗಿಲ್ಲ. ಬೆಂಗಳೂರಿನಲ್ಲಿ ಮೊದಲ ವಾರಕ್ಕಿಂತ ಎರಡನೇ ವಾರ ಕಾಟೇರ ಪ್ರದರ್ಶನಗಳ ಸಂಖ್ಯೆ ಹೆಚ್ಚಾಗಿದೆ. ಕರ್ನಾಟಕ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಕಾಟೇರ ಚಿತ್ರಕ್ಕೆ ಉತ್ತಮ ಬೇಡಿಕೆ ಇದೆ. ಗೋವಾ, ಹೈದರಾಬಾದ್, ಹೊಸೂರಿನಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
Unstoppable Box-office Rampage🔥#BlockBusterKaatera#KaateraBORampage #KaateraBiggestBlockBuster#DBoss #Kaatera @dasadarshan@TharunSudhir @RocklineEnt pic.twitter.com/RTZliXb5Hj
— KAATERA (@Kaatera_film) January 5, 2024
ವಿದೇಶಗಳಲ್ಲೂ ಬಿಡುಗಡೆ
ರಾಜ್ಯದಲ್ಲಿ ಮೋಡಿ ಮಾಡಿರುವ ಕಾಟೇರ ಈಗ ವಿದೇಶದಲ್ಲೂ ಬಿಡುಗಡೆಗೆ ಸಿದ್ಧವಾಗಿದೆ. ದುಬೈ, ಯುಎಸ್ಎ, ಕೆನಡಾ, ಆಸ್ಟ್ರೇಲಿಯಾ, ಒಮನ್ ದೇಶಗಳಲ್ಲಿ ಕೂಡ ಕಾಟೇರ ಪ್ರದರ್ಶನ ಕಾಣಲಿದೆ.
ಹಲವು ಭಾಷೆಗಳಿಗೆ ಡಬ್ಬಿಂಗ್
ಕನ್ನಡದಲ್ಲಿ ಮೆಗಾಹಿಟ್ ಅದ ಬಳಿಕ ಹಲವು ಭಾಷೆಗಳಿಂದ ಕೂಡ ಬೇಡಿಕೆ ಬಂದಿದ್ದು, ಡಬ್ ಮಾಡಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ಜನವರಿ ತಿಂಗಳ ಕೊನೆಯಲ್ಲಿ ಹಿಂದಿ, ತೆಲುಗು, ತಮಿಳು ಭಾಷೆಯಲ್ಲಿ ಕಾಟೇರ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದ ಕಥಾ ಹಂದರ ಎಲ್ಲಾ ಭಾಷೆಗಳಲ್ಲೂ ಸಲ್ಲುವಂತಿದ್ದು ಅಲ್ಲೂ ಕೂಡ ಹಿಟ್ ಆಗುವ ವಿಶ್ವಾಸದಲ್ಲಿದೆ ಚಿತ್ರತಂಡ.
ಬೆಂಗಳೂರಿನಲ್ಲಿ ಶೋ ಸಂಖ್ಯೆ ಹೆಚ್ಚಳ
ಕಳೆದ ವಾರ ಸಲಾರ್ ಸಿನಿಮಾ ಪ್ರದರ್ಶನ ಇದ್ದ ಕಾರಣ ಕಾಟೇರ ಸಿನಿಮಾಗೆ ಹೆಚ್ಚಿನ ಶೋಗಳು ಸಿಕ್ಕಿರಲಿಲ್ಲ. ಆದರೂ ಕಾಟೇರ ಭರ್ಜರಿ ಪ್ರದರ್ಶನ ಕಂಡಿದೆ. ಈಗ ಸಲಾರ್ ಎತ್ತಂಗಡಿ ಮಾಡಿ ಹಲವು ಕಡೆ ಕಾಟೇರ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತಿದೆ.
7ನೇ ದಿನ ಕೂಡ ಕಾಟೇರ ಬರೋಬ್ಬರಿ 9.25 ಕೋಟಿ ರೂಪಾಯಿ ಗಳಿಕೆ ಮಾಡುವ ಮೂಲಕ ಶತಕೋಟಿ ಕ್ಲಬ್ ಸೇರಿದ್ದು, ಇನ್ನೊಂದು ವಾರ ಇದೇ ರೀತಿ ಪ್ರದರ್ಶನ ಕಂಡರೆ ಸುಲಭವಾಗಿ 150 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ.












Click it and Unblock the Notifications