ಜೋಗಿ ಸಿನಿಮಾದಲ್ಲಿ ನಟಿಸಿದ್ದ ಕನ್ನಡದ ಖ್ಯಾತ ನಟ ನಿಧನ

ಕನ್ನಡ ಚಿತ್ರರಂಗದ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ಅಭಿನಯದ ಸೂಪರ್‌ ಹಿಟ್‌ ಸಿನಿಮಾ ಜೋಗಿಯಲ್ಲಿ ನಟಿಸಿದ್ದ ನಟ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದ ನಟ ಉಮೇಶ್ ಅಲಿಯಾಸ್ ಕೋತಿ ಮಂಜ ನಿನ್ನೆ ( ಏಪ್ರಿಲ್‌ 30) ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನಿನ್ನೆ ರಾತ್ರಿ ತಮ್ಮ ನಿವಾಸದಲ್ಲಿ ಎಲ್ಲರೊಂದಿಗೆ ಖುಷಿಯಾಗಿದ್ದ ನಟ ಉಮೇಶ್ ಅಲಿಯಾಸ್ ಕೋತಿ ಮಂಜ ಅವರಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡಿದ್ದು, ತಡರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

Jogi Movie Actor Umesh Alias Koli Manja Passed Away

ನಟ ಉಮೇಶ್ ಕನ್ನಡ ಚಿತ್ರರಂಗದಲ್ಲಿ ಕೋತಿ ಮಂಜ ಎಂದೇ ಖ್ಯಾತಿ ಪಡೆದಿದ್ದರು. ಅವರನ್ನು ಕೋತಿ ಮಂಜ ಎಂದು ಕರೆಯಲು ಕಾರಣ ಕೂಡ ಇದೆ. 2005ರಲ್ಲಿ ತೆರೆಕಂಡ ಕನ್ನಡದ ಸೂಪರ್ ಹಿಟ್ ಚಿತ್ರ ಜೋಗಿಯಲ್ಲಿ ಉಮೇಶ್‌ ಕೋತಿ ಮಂಜ ಎಂಬ ಪಾತ್ರದಲ್ಲಿ ನಟಿಸಿದ್ದರು. ಜೋಗಿ ಸಿನಿಮಾದಲ್ಲಿ ಕೋತಿ ಮಂಜನ ಪಾತ್ರವು ಜನರ ಮನಸ್ಸಿನಲ್ಲಿ ಉಳಿಯುವಂತದ್ದು. ಕೋತಿ ಮಂಜನನ್ನು ನೋಡಿ ಎಷ್ಟು ನಗುತ್ತಾರೋ ಅದೇ ರೀತಿ ಭಾವನಾತ್ಮವಾಗಿ ಅಷ್ಟೇ ಜನರ ಮನಸ್ಸಿಗೆ ಹತ್ತಿರವಾಗುತ್ತಾರೆ. ಹೀಗಾಗಿ ಈ ಪಾತ್ರ ಮಾಡಿದ ನಟ ಉಮೇಶ್‌ ಕೋತಿ ಮಂಜ ಎಂದೇ ಖ್ಯಾತಿ ಪಡೆದಿದ್ದರು.

ಜೋಗಿ ಸಿನಿಮಾದ ನಂತರ ಉಮೇಶ್‌ ಕೆಲ ವರ್ಷಗಳು ಬೆಳ್ಳಿ ತೆರೆಯಲ್ಲಿ ಸಕ್ರಿಯರಾಗಿದ್ದರು. ಪೋಷಕ ಪಾತ್ರಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಅವರು, ಕೆಲವು ಕಾಮಿಡಿ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಕೋತಿ ಮಂಜ ಪಾತ್ರ ತಂದುಕೊಟ್ಟಷ್ಟು ಖ್ಯಾತಿಯನ್ನು ಬೇರೆ ಪಾತ್ರಗಳು ಅಷ್ಟಾಗಿ ತಂದುಕೊಟ್ಟಿಲ್ಲ. ಬಳಿಕ ಕಾಲ ಕಳೆದಂತೆ ಚಿತ್ರರಂಗದಲ್ಲಿ ಹೊಸ ಪ್ರತಿಭೆಗಳು ಬರುತ್ತಿದ್ದಂತೆ ಉಮೇಶ್‌ ತೆರೆ ಮರೆಗೆ ಸರಿದ್ದಿದ್ದರು.

Jogi Movie Actor Umesh Alias Koli Manja Passed Away

ಇನ್ನು ನಟ ಉಮೇಶ್ ಅಲಿಯಾಸ್ ಕೋತಿ ಮಂಜ ನಿರ್ದೇಶಕ ಜೋಗಿ ಪ್ರೇಮ್ ಅವರ ಆಪ್ತರಾಗಿದ್ದು, ಅವರ ಇತರ ಸಿನಿಮಾಗಳಿಲ್ಲಿ ಕೂಡ ಕೆಲಸ ಮಾಡಿದ್ದಾರೆ. ಇದೀಗ ನಟ ಉಮೇಶ್‌ ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ನಿರ್ದೇಶಕರು, ನಟ ಹಾಗೂ ನಟಿಯರು ಸಂತಾಪ ಸೂಚಿಸಿದ್ದಾರೆ. ಉಮೇಶ್ ಅಲಿಯಾಸ್ ಕೋತಿ ಮಂಜ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+