Jayam Ravi: 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಖ್ಯಾತ ತಮಿಳು ನಟ ಜಯಂ ರವಿ

ಖ್ಯಾತ ತಮಿಳು ನಟ ಜಯಂ ರವಿ ತಮ್ಮ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ತಾವು ಮತ್ತು ಪತ್ನಿ ಆರತಿ ರವಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ. ಇಬ್ಬರು ಕೂಡ ಬೇರೆಯಾಗುತ್ತಾರೆ ಎಂದು ಹಲವು ದಿನಗಳಿಂದ ಊಹಾಪೋಹಗಳು ಇತ್ತಾದರೂ, ಇಂದು ಅದು ಅಧಿಕೃತವಾಗಿದೆ. ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು, ಇಬ್ಬರೂ ಒಬ್ಬೊಬ್ಬರನ್ನು ನೋಡಿಕೊಳ್ಳುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ವೈಯಕ್ತಿಕ ಕಾರಣಗಳಿಂದ ಬೇರೆಯಾಗುತ್ತಿರುವುದಾಗಿ ಇಬ್ಬರು ಕೂಡ ಹೇಳಿದ್ದಾರೆ. ನಟ ಜಯಂ ರವಿ ತಮ್ಮ ಎಕ್ಸ್‌ ಹ್ಯಾಂಡಲ್‌ನಲ್ಲಿ ಭಾರವಾದ ಮನಸ್ಸಿನಿಂದ ವೈಯಕ್ತಿಕ ಜೀವನದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದು, ಖಾಸಗಿತನಕ್ಕೆ ಬೆಲೆ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

Jayam Ravi and Aarti Ravi End 15-Year Marriage Official Statement

ಸಾಕಷ್ಟು ಯೋಚನೆ ಮತ್ತು ಚರ್ಚೆಯ ಬಳಿಕ ಆರತಿಯೊಂದಿಗೆ ನನ್ನ ಮದುವೆಯ ಸಂಬಂಧವನ್ನು ಮುರಿದುಕೊಳ್ಳುವ ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಆತುರದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರತಿಯೊಬ್ಬರ ಹಿತದೃಷ್ಟಿಯಿಂದ ಮತ್ತು ವೈಯಕ್ತಿಕ ಕಾರಣಗಳಿಂದ ಈ ನಿರ್ಧಾರ ಮಾಡಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ವಿಚ್ಛೇದನದ ಬಗ್ಗೆ ಗಾಳಿಸುದ್ದಿಯನ್ನು ಹರಡದಂತೆ ನಟ ಜಯಂ ರವಿ ಮನವಿ ಮಾಡಿಕೊಂಡಿದ್ದಾರೆ. "ಈ ಕಷ್ಟದ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಮತ್ತು ನಮ್ಮ ಕುಟುಂಬದ ಸದಸ್ಯರನ್ನು ಗೌರವಿಸಲು ಮತ್ತು ನಿಮ್ಮೆಲ್ಲರಿಗೂ ಮನವಿ ಮಾಡುತ್ತಿದ್ದೇನೆ. ಈ ವಿಷಯದಲ್ಲಿ ಯಾವುದೇ ಊಹೆಗಳು, ವದಂತಿಗಳು ಅಥವಾ ಆರೋಪಗಳನ್ನು ಮಾಡಬೇಡಿ, ಖಾಸಗಿತನಕ್ಕೆ ಬೆಲೆ ಕೊಡಿ" ಎಂದು ಕೇಳಿಕೊಂಡಿದ್ದಾರೆ.

ಅಭಿಮಾನಿಗಳಿಗೆ ಸಂತೋಷ ಮತ್ತು ಮನರಂಜನೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳುವ ಮೂಲಕ ತಮ್ಮ ಪತ್ರವನ್ನು ಮುಗಿಸಿದ್ದಾರೆ. ವೃತ್ತಿಜೀವನದಲ್ಲಿ ತಮಗೆ ಬೆಂಬಲವಾಗಿ ನಿಂತ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ನಿಜವಾದ ಊಹಾಪೋಹ

ಜಯಂ ರವಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವಿಚಾರ ಕಾಲಿವುಡ್ ಅಂಗಳದಲ್ಲಿ ಸಾಕಷ್ಟು ದಿನಗಳಲ್ಲಿ ಹರಿದಾಡುತ್ತಿತ್ತು. ಜೂನ್ 4 ರಂದು ದಂಪತಿಯ 15ನೇ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆರತಿ ಪತಿ ಜಯಂ ರವಿ ಅವರೊಂದಿಗಿದ್ದ ಅನೇಕ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದ್ದರು. ಆರತಿ ಅವರು ದೂರದರ್ಶನ ನಿರ್ಮಾಪಕಿ ಸುಜಾತ ವಿಜಯ್‌ಕುಮಾರ್ ಅವರ ಮಗಳಾಗಿದ್ದು ಸಿನಿಮಾ ನಂಟು ಹೊಂದಿದ್ದಾರೆ.

2009ರಲ್ಲಿ ಜಯಂ ರವಿ, ಆರತಿ ರವಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2003ರಲ್ಲಿ ಜಯಂ ಸಿನಿಮಾ ಭಾರಿ ಯಶಸ್ಸು ಕಂಡ ಬಳಿಕ ರವಿ ಅವರನ್ನು ಜಯಂ ರವಿ ಎಂದೇ ಗುರುತಿಸಲಾಗುತ್ತದೆ. ಜಯಂ ರವಿ ಇತ್ತೀಚೆಗೆ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್: II ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಇರೈವನ್ ಮತ್ತು ಸೈರೆನ್ ಸಿನಿಮಾ ಕೂಡ ಬಿಡುಗಡೆಯಾಗಿವೆ. ಸದ್ಯ ಅವರು ಬ್ರದರ್ ಮತ್ತು ಕದಳಿಕಾ ನೆರಮಿಲ್ಲೈ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+