ಅವನಿಂದ ನಯನತಾರಾ ಇಮೇಜ್ ಹಾಳಾಗುತ್ತೆ: ಡಿವೋರ್ಸ್ ವದಂತಿ ನಡುವೆ ಮೂರನೇ ವ್ಯಕ್ತಿ ಹೆಸರು, ಯಾರದು?
ಬಹುಭಾಷಾ ನಟಿ ಹಾಗೂ ಲೇಡಿ ಸೂಪರ್‌ಸ್ಟಾರ್ ಖ್ಯಾತಿಯ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಅವರು ಡಿವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ವದಂತಿ ಎಲ್ಲೆಡೆ ಜೋರಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಈ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ನಯನತಾರಾ ಅವರ ಹೆಸರಿನ ಇನ್ಸ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಡಿವೋರ್ಸ್ ಬಗ್ಗೆ ಸುಳಿವು ನೀಡಿರುವ ಸ್ಕ್ರೀನ್‌ಶಾಟ್ ಹರಿದಾಡುತ್ತಿದೆ. ಆದರೆ ಈವರೆಗೆ ಈ ಬಗ್ಗೆ ಸ್ಪಷ್ಟನೆ ನೀಡದೆ ಇರುವುದರಿಂದ ಅಭಿಮಾನಿಗಳು ಕೂಡ ಈ ಬಗ್ಗೆ ಗೊಂದಲದಲ್ಲಿದ್ದಾರೆ. ಆದರೆ ಮತ್ತೊಂದೆಡೆ ನಯನತಾರಾ-ವಿಘ್ನೇಶ್ ನಡುವೆ ಮೂರನೇ ವ್ಯಕ್ತಿಯ ಹೆಸರು ಕೇಳಿಬಂದಿದೆ. ಅವನಿಂದ ನಯನತಾರಾ ಇಮೇಜ್ ಹಾಳಾಗುತ್ತೆ ಎಂದು ಎಚ್ಚರಿಕೆಯೂ ನೀಡುತ್ತಿದ್ದಾರೆ.
ವಿಘ್ನೇಶ್ ಶಿವನ್ ಹಾಗೂ ನಯನತಾರಾ ದಂಪತಿ ಕೆಲ ವರ್ಷಗಳ ಹಿಂದಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದರು. ವಿವಿಧ ಚಿತ್ರರಂಗಗಳ ಘಟಾನುಘಟಿಗಳು ಇವರ ಮದುವೆಗೆ ಸಾಕ್ಷಿಯಾಗಿದ್ದರು. ಬಳಿಕ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾದರೂ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದರು. ಇತ್ತೀಚೆಗೆ ವಿದೇಶಗಳಿಗೂ ತೆರಳಿ ಇಡೀ ಕುಟುಂಬ ಹ್ಯಾಪಿಯಾಗಿರುವ ಫೋಟೋಗಳನ್ನು ನಯನತಾರಾ ಅವರೇ ಹಂಚಿಕೊಂಡಿದ್ದರು. ಆದರೆ ಇದ್ದಕ್ಕಿದ್ದಂತೆ ಈ ಜೋಡಿ ಡಿವೋರ್ಸ್‌ಗೆ ಮುಂದಾಗಿದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ.

ಈ ವದಂತಿಯ ನಡುವೆ ಮತ್ತೊಂದೆಡೆ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರ ವಿಚಾರದಲ್ಲಿ ಮೂರನೇ ವ್ಯಕ್ತಿಯ ಹೆಸರು ಕೂಡ ಕೇಳಿಬಂದಿದೆ. ಆತನಿಂದ ತುಂಬಾ ಎಚ್ಚರಿಕೆಯಿಂದ ಇರಿ, ಏಕೆಂದರೆ ಅವನಿಂದ ನಯನತಾರಾ ಅವರ ಇಮೇಜ್ ಹಾಳಾಗುತ್ತೆ ಎಂದು ವಿಘ್ನೇಶ್ ಶಿವನ್ ಅವರಿಗೆ ಎಚ್ಚರಿಕೆ ಕೊಡುತ್ತಿದ್ದಾರೆ. ಇಷ್ಟಕ್ಕೂ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಖ್ಯಾತ ಕೊರಿಯೋಗ್ರಾಫರ್ ಜಾನಿ ಮಾಸ್ಟರ್. ಹೌದು ಜಾನಿ ಮಾಸ್ಟರ್ ವಿಚಾರವಾಗಿ ವಿಘ್ನೇಶ್-ನಯನತಾರಾ ಅವರನ್ನು ಜನ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣ ಏನೆಂಬ ವಿವರ ಇಲ್ಲಿದೆ.
"ಲವ್ ಇನ್ಶುರೆನ್ಸ್ ಕಂಪನಿ" ಸಿನಿಮಾಗಾಗಿ ಜಾನಿ ಮಾಸ್ಟರ್ ಜೊತೆಗಿನ ಚಿತ್ರವನ್ನು ವಿಘ್ನೇಶ್ ಶಿವನ್ ಇತ್ತೀಚೆಗಷ್ಟೇ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ವೈರಲ್ ಆಗಿದ್ದು, ಅನೇಕ ಸ್ತ್ರೀವಾದಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಸಿನಿರಂಗದವರಿಂದ ಟೀಕೆಗೆ ಗುರಿಯಾಗಿದೆ. ಏಕೆಂದರೆ ಜಾನಿ ಮಾಸ್ಟರ್ ಅವರನ್ನ ಇತ್ತೀಚೆಗಷ್ಟೇ ಪೋಕ್ಸೋ ಕೇಸ್‌ನಲ್ಲಿ ಅರೆಸ್ಟ್ ಮಾಡಲಾಗಿತ್ತು. ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಅವರು ರಿಲೀಸ್ ಆಗಿದ್ದರು.

ತನ್ನ ಸಹೋದ್ಯೋಗಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವನ್ನ ಜಾನಿ ಎದುರಿಸುತ್ತಿದ್ದಾರೆ. ಆದರೆ ಅವರು ಆ ಆರೋಪಗಳನ್ನ ನಿರಾಕರಿಸಿದ್ದಾರೆ. ಜಾಮೀನಿನ ಮೇಲೆ ರಿಲೀಸ್ ಆದ ನಂತರವೂ ಸಂತ್ರಸ್ತೆ ಹಲವು ಆರೋಪಗಳನ್ನ ಮಾಡಿದ್ದರು. ಈಗ ವಿಘ್ನೇಶ್ ಶಿವನ್ ಅವರೊಂದಿಗೆ ಜಾನಿ ಕಾಣಿಸಿಕೊಂಡಿರುವುದರಿಂದ ನಯನತಾರಾ ವಿರುದ್ಧವೂ ಟೀಕೆಗಳು ಕೇಳಿಬಂದಿದೆ.
ಅಪ್ರಾಪ್ತ ವಯಸ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಜಾನಿ ಅರೆಸ್ಟ್ ಆಗಿದ್ದು, ಇಂತಹ ವ್ಯಕ್ತಿಯ ಜೊತೆ ಇರುವುದು ಅಪಾಯಕಾರಿ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ಕೆಲವರು ನಯನತಾರಾ ಅವರು ಕಷ್ಟಪಟ್ಟು ದುಡಿಯುವ ಮಹಿಳೆಯರ ಬೆಂಬಲಕ್ಕೆ ನಿಲ್ಲುವಂತೆ ನಟಿಸುವ ದ್ವಂದ್ವ ನಿಲುವು ಹೊಂದಿದ್ದಾರೆ ಟೀಕಿಸಿದ್ದಾರೆ. ಜನರು ವಿಘ್ನೇಶ್ ಶಿವನ್ ಅವರಿಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡುತ್ತಿದ್ದಾರೆ. ಜಾನಿ ಅವರ ಕೆಲಸಗಳಿಂದ ನಟಿ ನಯನತಾರಾ ಅವರ ಇಮೇಜ್ ಹಾಳಾಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇದರ ನಡುವೆ ಈ ದಂಪತಿಯ ಡಿವೋರ್ಸ್ ವಿಚಾರವು ಕಾವು ಪಡೆದುಕೊಂಡಿದೆ.












Click it and Unblock the Notifications