ಅಮ್ಮ ಶ್ರೀದೇವಿ ರೀತಿಯೇ ಜಾಹ್ನವಿ ಕಪೂರ್‌ ಹೋಗಿದ್ದೆಲ್ಲಿಗೆ?

ನಟಿ ಶ್ರೀದೇವಿ ಅಂದ್ರೆ ಟಾಲಿವುಡ್ ಟು ಬಾಲಿವುಡ್ ಭರ್ಜರಿ ಕ್ರೇಜ್ ಇತ್ತು ಸಿನಿಮಾಗಾಗಿ ಅಂತಾನೆ ಈ ನಟಿ ಜೀವನ ಮುಡಿಪಾಗಿ ಇಟ್ಟಿದ್ರು. ಹೀಗೆ ಶ್ರೀದೇವಿ ಅವರಿಗೆ ಕೋಟಿ ಕೋಟಿ ಫ್ಯಾನ್ಸ್ ಕೂಡ ಇದ್ದರು. ಆದ್ರೆ 2018ರಲ್ಲಿ ನಟಿ ಶ್ರೀದೇವಿ ಅವರ ಅಕಾಲಿಕ ಮರಣ ಅವರ ಅಭಿಮಾನಿಗಳಿಗೆ & ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಆಘಾತ ನೀಡಿತ್ತು. ಇದೀಗ ಅವರ ಮಗಳು ಜಾಹ್ನವಿ ಕಪೂರ್‌ ಕೂಡ ಅಮ್ಮನಂತೆಯೇ ಸದ್ದು ಮಾಡುತ್ತಿದ್ದಾರೆ.

ಹೌದು, ನಟಿ ಜಾಹ್ನವಿ ಕಪೂರ್‌ ಆಗಾಗ ಸದ್ದು ಮಾಡ್ತಾ ಸುದ್ದಿಯಲ್ಲಿ ಇರ್ತಾರೆ. ಈಗಲೂ ಅದೇ ರೀತಿ ಜಾಹ್ನವಿ ಕಪೂರ್‌ ಗಮನ ಸೆಳೆದಿದ್ದಾರೆ. ಆದ್ರೆ ಈಗ ದೇವಸ್ಥಾನದಲ್ಲಿ ಕಂಡಿರುವ ನಟಿ ಜಾಹ್ನವಿ ಸರ್ಪ್ರೈಸ್ ನೀಡಿದ್ದಾರೆ. ಅಂದಹಾಗೆ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿಯ ಕೊಟ್ಟ ನಟಿ ಜಾಹ್ನವಿ ಸೀರೆಯಲ್ಲಿ ಮಿಂಚಿದ್ದಾರೆ. ತಮ್ಮ ಗೆಳೆಯ ಶಿಖರ್‌ ಪಹರಿಯಾ ಹಾಗೂ ಮಹೇಶ್ವರಿ ಅವರ ಜೊತೆಗೆ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದಾರೆ. ಅಲ್ಲದೆ ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

Janhvi Kapoor Saree Photos Created Storm In Social Media

ಸೀರೆಯಲ್ಲಿ ಮಿಂಚಿದ ಶ್ರೀದೇವಿ ಮಗಳು!

ಇದು ಸೋಷಿಯಲ್ ಮೀಡಿಯಾ ಜಮಾನ. ಹೀಗಾಗಿ ಜನರು ಏನೇ ಆದರೂ ಅದನ್ನ ಈಗ ಸೋಷಿಯಲ್ ಮೀಡಿಯಾ ಮೂಲಕ ಶೇರ್ ಮಾಡ್ತಾರೆ. ಇದೇ ರೀತಿ ಈಗ ಜಾಹ್ನವಿ ಕಪೂರ್‌ ತಿರುಮಲ ತಿರುಪತಿ ದೇಗುಲಕ್ಕೆ ಭೇಟಿ ನೀಡಿರುವ ವಿಡಿಯೋ ವೈರಲ್ ಆಗುತ್ತಿದೆ. ಅದರ ಜತೆ ಸ್ವತಃ ಜಾಹ್ನವಿ ಕಪೂರ್‌ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿರುವ ಟ್ರೆಡೀಷನಲ್ ಡ್ರೆಸ್ ಫೋಟೋ ವೈರಲ್ ಆಗಿವೆ. ಈ ಬಗ್ಗೆ ಜಾಹ್ನವಿ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಸಂತಸ ಹಂಚಿಕೊಂಡಿದ್ದಾರೆ. ಗೋಲ್ಡನ್‌ ಕಲರ್‌ ಸೀರೆಯಲ್ಲಿ ಮಿಂಚಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ

ಜಾಹ್ನವಿ ಕಪೂರ್‌ ತಮ್ಮ ಅಮ್ಮನ ರೀತಿಯಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಇದೀಗ ಫುಲ್ ಬ್ಯುಸಿಯಾಗಿದ್ದಾರೆ. ಹಲವು ಪ್ರಾಜೆಕ್ಟ್ ಜಾಹ್ನವಿ ಕೈಯಲ್ಲಿದೆ. ಹಾಗೇ ಈಗಾಗಲೇ ಹಲವು ಹಿಟ್ ಸಿನಿಮಾಗಳನ್ನ ನೀಡಿರುವ ಜಾಹ್ನವಿ ಕಪೂರ್‌ ಸಿನಿಮಾ ರಂಗದಲ್ಲಿ ಸೆಟಲ್ ಆಗಿದ್ದಾರೆ. ಹೀಗೆ ಹೊಸ ವರ್ಷದಲ್ಲಿ ಸೀರೆ ತೊಟ್ಟು ಮತ್ತೊಂದು ಸರ್ಪ್ರೈಸ್ ಕೊಟ್ಟಿದ್ದಾರೆ. ಇನ್ನು ಫ್ಯಾನ್ಸ್‌ಗೆ ತಮ್ಮಿಷ್ಟದ ನಟಿಯ ಈ ಟ್ರೆಡಿಷನಲ್ ದರ್ಶನ ಸಿಕ್ಕಾಪಟ್ಟೆ ಇಷ್ಟವಾಗಿದೆ.

ಒಟ್ನಲ್ಲಿ ಅಮ್ಮನಂತೆ ಮಗಳು ಕೂಡ ಸಿನಿಮಾ ರಂಗದಲ್ಲಿ ಮಿಂಚುತ್ತಿದ್ದಾರೆ. ಇದರೊಂದಿಗೆ ನಟಿ ಜಾಹ್ನವಿ ಕಪೂರ್‌ ಅವರ ಮದುವೆ ಬಗ್ಗೆ ಕೂಡ ಸಖತ್ ಚರ್ಚೆಯಾಗುತ್ತಿದೆ. ಆದ್ರೆ ಈ ಬಗ್ಗೆ ನಟಿ ಜಾಹ್ನವಿ ಕಪೂರ್‌ ಯಾವುದೇ ಮಾಹಿತಿ ನೀಡಿಲ್ಲ. ಹೀಗಾಗಿ ಈ ವರ್ಷವೇ ಅವರು ಸಪ್ತಪದಿ ತುಳಿಯುತ್ತಾರಾ? ಅನ್ನೋ ಕುತೂಹಲ ಡಬಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+