Jailer-2 ಸಕ್ಸಸ್! ರಜನಿಕಾಂತ್ ಸರಳತೆಗೆ ಫ್ಯಾನ್ಸ್‌ ಫಿದಾ: 75ರ ವಯಸ್ಸಿನಲ್ಲೂ ಇಷ್ಟೊಂದು ಫಿಟ್ ಹೇಗೆ?

Jailer 2 Movie: ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಸಿನಿಮಾ ದೇಶಾದ್ಯಂತ ಪಂಚಭಾಷೆಗಳಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು, 75 ವರ್ಷ ವಯಸ್ಸಿನ ಸ್ಟಾರ್‌ ರಜನಿ ಅವರ ನಟನೆ, ಸ್ಟಂಟ್, ಫೈಟ್, ಸ್ಟೈಲ್, ಮ್ಯಾನರಿಸಂ ಕಂಡು ಅಚ್ಚರಿಗೊಂಡಿದ್ದಾರೆ. ಇವತ್ತಿಗೂ ಯುವ ಸ್ಟಾರ್ ನಟರಿಗೂ ಪೈಪೋಟಿ ನೀಡುವಷ್ಟರ ಮಟ್ಟಿಗೆ ದೇಹವನ್ನು ಫೀಟ್‌ ಆಗಿ ಇಟ್ಟುಕೊಂಡಿದ್ದಾರೆ. ಇದು ರಜನಿಕಾಂತ್ ಸಿನಿಮಾ, ಅವರ ಸೂಪರ್ ಸ್ಟಾರ್ ಎಂಬುದಕ್ಕಷ್ಟೇ ಅಲ್ಲದೇ ಅವರ ಸರಳ ವ್ಯಕ್ತಿತ್ವ, ಗುಣ, ಸರಳತೆಯಿಂದಲೂ ಅವರು ಫಿದಾ ಆಗಿರುವ ಫ್ಯಾನ್ಸ್‌ಗಳಿಂದ 'ಜೈಲರ್ 2'ಗೆ ಈ ಗೆಲುವು ಧಕ್ಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಹೌದು, ಕರ್ನಾಟಕದಲ್ಲಿ ಡಾ.ರಾಜಕುಮಾರ್ ಅವರಂತೆ ತಮಿಳಿನಲ್ಲಿ ರಜನಿಕಾಂತ್ ಅವರು ಅತ್ಯಂತ ಸರಳ ವ್ಯಕ್ತಿತ್ವ ನಟನಾಗಿ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ. ತಮ್ಮ 75ರ ಹರೆಯದಲ್ಲೂ ಅವರು ಬ್ಲಾಕ್‌ ಬಸ್ಟಾರ್ ಸಿನಿಮಾ ನೀಡುತ್ತಾರೆ ಎಂದರೆ ಅವರ ಚಾರ್ಮ್, ಔರಾ ಒಂಚೂರು ಕಡಿಮೆ ಆಗಿಲ್ಲ ಎಂಬುದಕ್ಕೆ ಜೈಲರ್-2 ಸಿನಿಮಾದ ನಟನೆಯೇ ಸಾಕ್ಷಿ ಎನ್ನಬಹುದು.

Jailer 2 Rajinikanth Fitness Secrets

ರಜನಿ ಬಗ್ಗೆ ಆಸಕ್ತಿದಾಯಕ ವಿಚಾರ ತಿಳಿಸಿದ ಸಹ ನಟಿ

ಇತ್ತೀಚೆಗೆ ಜೈಲರ್-2 ರಜನಿಕಾಂತ್ ಅವರ ಸಹನಟಿ ಮಿರ್ನಾ ಮೆನನ್ ಅವರು ರಜನಿಕಾಂತ್ ಅವರ ಬಗ್ಗೆ ಆಸಕ್ತಿದಾಯಕ, ಅದೆಷ್ಟೋ ಜನರಿಗೆ ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ರಜನಿಅವರು ಸೆಟ್‌ನಲ್ಲಿ ಇರುವಾಗ ಏನೆಲ್ಲ ಮಾಡುತ್ತಾರೆ. ಅವರ ದಿನಚರಿ, ವ್ಯಾಯಾಮ, ಊಟದ ಕುರಿತು ತಿಳಿಸಿದ್ದಾರೆ.

'ರಜನಿ ಅವರು ನಿತ್ಯವು ವ್ಯಾಯಾಮ ಮಾಡಿಕೊಂಡೇ ಸೆಟ್‌ಗೆ ಬರುತ್ತಿರುವುದನ್ನು ನಾನು ಗಮನಿಸಿದ್ದೇನೆ. ಕಟ್ಟುನಿಟ್ಟಿನ ಆಹಾರ, ಸ್ಥಿರ ವ್ಯಾಯಾಮ ಅವರ ದಿನಚರಿಗಳಲ್ಲಿ ಪ್ರಮುಖವಾದದ್ದು ಎಂದು ಕೇಳಿ ಖುಷಿ ಆಯಿತು. ಶೂಟಿಂಗ್ ಸ್ಥಳದಲ್ಲಿ ಜಿಮ್ ಇಲ್ಲದಿದ್ದಾಗ ರಜನಿ ಸರ್ ತಾವಿರುವ ರೂಮ್‌ನಲ್ಲೇ ಜಿಮ್ ಸಲಕರಣೆಗಳನ್ನು ಇಟ್ಟುಕೊಂಡಿದ್ದರು. ಅಷ್ಟರ ಮಟ್ಟಿಗೆ ದೈಹಿಕ ಚುಟವಟಿಕೆಗೆ ಅವರು ಆದ್ಯತೆ ನೀಡುತ್ತಾರೆ' ಎಂದು ಮೆನನ್ ತಿಳಿಸಿದರು.

ಆರೋಗ್ಯ ಆಹಾರ, ಈಜು, ಟ್ರೆಡ್ ಮಿಲ್ ವ್ಯಾಯಾಮ

'ಆಹಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿವು ರಜನಿ ಸರ್ ಬಳಿ ಅನ್ನ, ಸಕ್ಕರೆ ಮೊಸಲು, ಮಸಾಲೆಯುಕ್ತ ಆಹಾರಗಳಿಂದ ದೂರವಿರುತ್ತಾರೆ. ಹೆಚ್ಚಾಗಿ ಅವರು ಆರೋಗ್ಯಕರ ಆಹಾರ ಸೇವಿಸುತ್ತಾರೆ. ವಯೋಮಿತಿಗೆ ತಕ್ಕಂತಹ ಆಹಾರ, ವ್ಯಾಯಾಮದ ದಿನಚರಿ ಪಾಲಿಸುತ್ತಾರೆ. ಅವರ ವ್ಯಾಯಾಮದಲ್ಲಿ ಈಜು ಕೂಡ ಒಂದು. ಇದು ಹೃದಯ ಬಡಿತ, ರಕ್ತನಾಳಗಳಲ್ಲಿ ರಕ್ತದ ಹರಿವಿಗೆ, ಸ್ನಾಯುಗಳ ಉತ್ತಮ ಕೆಲಸಕ್ಕೆ, ಕೀಲುಗಳ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.'

'ಮುಖ್ಯವಾಗಿ ರಜನಿ ಅವರು ಈ ವಯಸ್ಸಿನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಾರೆ. ಶ್ವಾಸಕೋಶ, ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಅವರು ಆದ್ಯತೆ ನೀಡುವುದು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ' ಎಂದು ತಿಳಿಸಿದ್ದಾರೆ. ರಜನಿ ಕಾಂತ್ ಅವರ ನಟನೆ ಜೊತೆಗೆ ಇಳಿವಯಸ್ಸಿನಲ್ಲೂ ಅವರ ಚಾರ್ಮ್ ಉಳಿಯಲು ಈ ಮೇಲಿನ ಅವರ ಕಟ್ಟುನಿಟ್ಟಿನ ದಿನಚರಿಗಳೇ ಕಾರಣ.

ಸ್ಟಾರ್ ಆದ್ರೂ ಹಮ್ಮುಬಿಮ್ಮು ಇಲ್ಲದ ಸರಳ ವ್ಯಕ್ತಿ

ಇಂದಿನ ಸ್ಟಾರ್‌ ನಟರ ತಲೆಕೂದಲು ಉದುರಿದರೆ ವಿಗ್ ಹಾಕಿಕೊಂಡೇ ಓಡಾಡುತ್ತಾರೆ. ಶೂಟಿಂಗ್ ಇಲ್ಲದ ಸಮಯದಲ್ಲಿ ಕಾರ್ಯಕ್ರಮಗಳ ಹೊರತಾಗಿ ಬೇರೆಲ್ಲೂ ಕಾಣಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ. ಆದರೆ ಸೂಪರ್ ಸ್ಟಾರ್ ಆದರೂ ಸಹಿತ ರಜನಿಕಾಂತ್ ಅವರು ಇದಕ್ಕೆ ತದ್ವಿರುದ್ಧವಾಗಿದ್ದಾರೆ. ಪಂಚೆಯೊಂದಿಗೆ ಜುಬ್ಬಾ ಶರ್ಟ್ ಧರಿಸಿ ಸಾಮಾನ್ಯರಂತೆ ಓಡಾಡುತ್ತರೆ. ಚರ್ಮ ಸುಕ್ಕು ಹಿಡಿದರೂ, ವಯಸ್ಸಾದರೂ ಕನ್ನಡಕದೊಂದಿಗೆ ಬೋಳು ತಲೆಯಲ್ಲಿ ಕಾಣಸಿಗುತ್ತಾರೆ. ಅತ್ಯಂತ ಸರಳ ವ್ಯಕ್ತಿಯಾಗಿ, ಜನಸಾಮಾನ್ಯರಂತೆ ಕಾಣಿಸುತ್ತಾರೆ. ಅವರ ಈ ಕೀಳರಿಮೆ ಇಲ್ಲದ ಆತ್ಮ ವಿಶ್ವಾಸದ ಬದುಕು ಅದೆಷ್ಟೋ ನಟರಿಗೆ ಪ್ರೇರಣಿಯೂ ಆಗಿದ್ದು, ಇದು ಸಹ ಅವರ ಫ್ಯಾನ್ಸ್ ಇಷ್ಟವಾಗುತ್ತದೆ.

ಇತ್ತೀಚೆಗೆ ಸ್ವತಃ ರಜನಿಕಾಂತ್ ಅವರೇ ವೇದಿಕೆ ಮೇಲೆ, ನಾನು ಇವತ್ತಿಗೂ ಬಸ್ ಕಂಡಕ್ಟರ್ ಆಗಿಯೇ ಇದ್ದೇನೆ. ನಟ, ಸ್ಟಾರ್ ಆದರೂ ಅದೇ ನನ್ನ ಮನಸ್ಸಿನಲ್ಲಿದೆ. ಬೆಂಗಳೂರಿಗೆ ಹೋದರೆ. ಬಿಎಂಟಿಸಿ ಕಂಡಕ್ಟರ್ ಭೇಟಿ ಮಾಡುತ್ತೇನೆ. ಅವರನ್ನು ಆ ಯೂನಿಫಾರ್ಮ್‌ನಲ್ಲಿ ನೋಡಲು ನನಗೆ ತುಂಬ ಖುಷಿ ಅನ್ನಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ. ಅವರ ಇಂತಹ ಸರಳ ಮನೋಭಾವ, ಕೀಳರಿಮೆ ಇಲ್ಲದ ಗುಣ, ಸರಳ ವ್ಯಕ್ತಿತ್ವದಿಂದಲೇ ಅವರು ಇಂದಿಗೂ ಜನರಿಗೆ ಹತ್ತಿರವಾಗಿದ್ದಾರೆ. ಅವರು ಎಂದೆಂದಿಗೂ ಸೂಪರ್ ಸ್ಟಾರ್ ಆಗಿಯೇ ಇರುತ್ತಾರೆ ಎಂಬುದಕ್ಕೆ ಇವೆಲ್ಲವು ಸಾಕ್ಷಿಯಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+