Jacqueline Fernandez: ಶರ್ಟ್ ಸುತ್ತಿಕೊಂಡ ಬಾಲಿವುಡ್ ಸುಂದರಿ, ನಟಿಯ ವಿಡಿಯೋ ವೈರಲ್
Jacqueline Fernandez: ವ್ಯಕ್ತಿತ್ವ, ಸೌಂದರ್ಯದಿಂದಲೇ ಅಭಿಮಾನಿಗಳನ್ನು ಆಕರ್ಷಿಸುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ತೊಟ್ಟ ಉಡುಗೆ ಬಗ್ಗೆ ಬಳಹಷ್ಟು ಚರ್ಚೆಗಳು ಆಗುತ್ತಿವೆ. ಇವರು ಮತ್ತೊಬ್ಬ ಉರ್ಫಿ ಜಾದವ್ ಆದ್ರಾ? ಅಂತಲೂ ಮಾತನಾಡಿಕೊಳ್ಳುತ್ತಿದ್ದಾರೆ. ಅವರ ಹೊಸ ನಮೂನೆಯ ಡ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕನ್ನಡದಲ್ಲಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾದ 'ರಾರಾ...ರಕ್ಕಮ್ಮ' ಹಾಡಿನಲ್ಲಿ ಸೊಂಟ ಬಳಕಿಸಿದ್ದ ಬಾಲಿವುಡ್ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಇತ್ತೀಚೆಗೆ ದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು. ಫ್ಯಾಷನ್ ವಿಚಾರವಾಗಿ ಮಾತನಾಡಿದ್ದರು. ದೆಹಲಿಯ ಐಷಾರಾಮಿ ಫ್ಯಾಷನ್ ಹೌಸ್ ಬಾಲ್ಮೇನ್ ನಲ್ಲಿನ ಸಮಾರಂಭಕ್ಕೆ ಬಿಳಿ, ಉದ್ದ ತೋಳಿನ ಪಾಪ್ಲಿನ್ ಬಸ್ಟಿಯರ್ ಉಡುಪಿನಲ್ಲಿ ಬಂದ ಜಾಕ್ವೆಲಿನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದರು.

ಏನಿದು ಎಲ್ಲರು ಶರ್ಟ್ ಧರಿಸುತ್ತಾರೆ. ಆದರೆ ಜಾಕ್ವೆಲಿನ್ ಮೈಮೇಲೆ ಸುತ್ತಿಕೊಂಡು ಕಾರ್ಯಕ್ರಮಕ್ಕೆ ಹಾಜರಾಗಿದ್ದಾರೆ ಎಂದು ಮೊದಲು ಆಶ್ಚರ್ಯದಿಂದ ನೋಡಲಾಯಿತು. ನಟಿಯ ಭುಜವು ಹೊರಗೆ ಕಾಣುವಂತೆ ಶರ್ಟ್ ತೋಳು ಮೈಗೆ ಸುತ್ತಿಕೊಂಡಿತ್ತು. ಬಿಳಿಯ ಬಣ್ಣದ ಉದ್ದನೆಯ ರಚನಾತ್ಮಕ ಕಾಲರ್‌ಗಳು ಹೊಂದಿದ ಶರ್ಟ್ ರೀತಿ ಕಾಣುವ ಉಡುಪು ಇದಾಗಿದೆ. ನೋಡಲು ಶರ್ಟ್ ರೀತಿ ಕಂಡರು ಅದರಿಂದ ಪ್ರೇರಿತಗೊಂಡ ವಿಶೇಷ ಡ್ರೆಸ್ ಇದಾಗಿದೆ. ಸೂಕ್ಷ್ಮವಾದ ಸ್ಲಿಟ್ ಆಧುನಿಕ ಸ್ಪರ್ಶದ ಡ್ರೆಸ್ ಕಾರ್ಯಕ್ರಮದಲ್ಲಿದ್ದವರನ್ನು ಸಳೆಯುವಂತೆ ಮಾಡಿತು.
ಜಾಕ್ವೆಲಿನ್ ಅವರ ಈ ಉಡುಪು ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆಗೆ, ಸಂಭಾಷಣೆಗೆ ಕಾರಣವಾಯಿತು. ಈ ಧಿರಿಸಿನಲ್ಲಿ ನಟಿ ಕಾರ್ಯಕ್ರಮದಲ್ಲಿ ತಮ್ಮನ್ನು ನಿರ್ವಹಿಸಿಕೊಂಡಿದ್ದನ್ನು ನೋಡಿ ಫ್ಯಾನ್ಸ್ ಮನಸೋತಿದ್ದಾರೆ. ಇಂತಹ ಬಟ್ಟೆಯಲ್ಲಿ ಜಾಕ್ವೆಲಿನ್ ಹೇಗೆ ನಿರ್ವಹಿಸುತ್ತಾರೆ ಎಂಬ ಕೌತುಕತೆಗೆ ತೆರೆ ಬೀಳುವಂತೆ ಅವರು ನಡೆದು ಬಂದಿದ್ದಾರೆ. ಅನೇಕ ಮಂದಿ ರೆಡ್ಡಿಟ್, ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವರು ಇವರು ಮತ್ತೊಬ್ಬ ಉರ್ಫಿ ಜಾದವ್? ಎಂದು ಕಾಮೆಂಟ್ ಮಾಡಿದ್ದಾರೆ.












Click it and Unblock the Notifications