ಪುನೀತ್ ರಾಜ್‌ಕುಮಾರ್ ನೆನಪು.. ಕಣ್ಣೀರು ಹಾಕಿದ ಅಶ್ವಿನಿ ಪುನೀತ್...
ಪುನೀತ್ ರಾಜ್‌ಕುಮಾರ್.. ಅದೆಷ್ಟೋ ಮನೆಗಳ ದೇವರ ಮನೆಯಲ್ಲಿ ಸ್ಥಾನ ಪಡೆದಿರುವ ಈ ನಟ ಇಂದು ನಮ್ಮ ಜೊತೆಗೆ ಇಲ್ಲ. ಆದ್ರೆ ಕನ್ನಡಿಗರ ಮನಸ್ಸಿನಲ್ಲಿ ಮಾತ್ರ ಪುನೀತ್ ಅವರ ಹೆಸರು ಎಂದೆಂದಿಗೂ ಅಜರಾಮರ. ಪುನೀತ್ ನಮ್ಮನ್ನು ಬಿಟ್ಟು ಹೋಗಿಲ್ಲ, ಅವರು ಇಲ್ಲೇ ಎಲ್ಲೋ ನಮ್ಮ ಜೊತೆಯಲ್ಲೇ ಇದ್ದಾರೆ ಅನ್ನೋದು ಅಭಿಮಾನಿಗಳ ನಂಬಿಕೆ. ಹೀಗಿದ್ದಾಗಲೇ ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಕಣ್ಣೀರು ಹಾಕಿದ್ದಾರೆ. ಈ ಘಟನೆ ನಡೆದಿದ್ದು ಎಲ್ಲಿ? ಮುಂದೆ ಓದಿ.
ಪವರ್ ಸ್ಟಾರ್ ಪುನೀತ್ ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ? ಅಪ್ಪು ಅಂದ್ರೆ ಈಗಿನ್ನು ಹುಟ್ಟಿರುವ ಮಗುವಿನಿಂದ ಹಿಡಿದು ದೊಡ್ಡವರಾಗಿ ಬೆಳೆದ ನಮ್ಮ ತನಕ ಎಲ್ಲರಿಗೂ ಇಷ್ಟ ಇಷ್ಟ. ಯಾಕಂದ್ರೆ ಬೆಟ್ಟದ ಹೂವು ಸಿನಿಮಾದಿಂದ ಹಿಡಿದು, ಗಂಧದ ಗುಡಿ ಸಿನಿಮಾ ತನಕ ಈ ನಟನ ಸಾಧನೆಗೆ ಈ ಭೂಮಿ ಮೇಲೆ ಯಾರೂ ಸಾಟಿ ಇಲ್ಲ. ಹೀಗಿದ್ದಾಗ ಇಂದು ಅಪ್ಪು ಅಭಿನಯಿಸಿದ್ದ 2010ರಲ್ಲಿ ರಿಲೀಸ್ ಆಗಿದ್ದ 'ಜಾಕಿ' ಸಿನಿಮಾ ರೀ ರಿಲೀಸ್ ಆಗಿದೆ. ಈ ಸಮಯದಲ್ಲೇ ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ದುಖಃ ತಡೆಯಲು ಆಗದೆ ಕಣ್ಣೀರು ಹಾಕಿ, ಭಾವುಕರಾಗಿ ನಿಂತರು.

ಥಿಯೇಟರ್ ಒಳಗೆ ಅಶ್ವಿನಿ ಪುನೀತ್ ಕಣ್ಣೀರು
'ಜಾಕಿ' ಸಿನಿಮಾ ಕನ್ನಡ ಸಿನಿ ಇಂಡಸ್ಟ್ರಿಯಲ್ಲೇ ಎವರ್‌ಗ್ರೀನ್ ಚಿತ್ರ. 'ಜಾಕಿ' ಚಿತ್ರವನ್ನು, ಬೇರೆ ಬೇರೆ ಭಾಷೆಯಲ್ಲಿ ರೀಮೇಕ್ ಮಾಡಲು ಕೂಡ ಅಂದಿನ ಸ್ಟಾರ್ ನಟರು ಮುಗಿಬಿದ್ದು ಬಂದಿದ್ದೂ ಉಂಟು. ಕನ್ನಡಿಗರ ಸಿನಿಮಾ 'ಜಾಕಿ' ಹತ್ತಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿತ್ತು.
ಈಗ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ ಹೀಗಾಗಿ, ಅವರ ಹಳೆಯ ಸಿನಿಮಾ ಥಿಯೇಟರ್ ಸ್ಕ್ರೀನ್ ಮೇಲೆ ರಿಲೀಸ್ ಆಗಬೇಕು ಎಂಬುದೇ ಅಭಿಮಾನಿಗಳ ಬಯಕೆಯೂ ಆಗಿತ್ತು. ಇದೇ ಕಾರಣಕ್ಕೆ ಈಗ 'ಜಾಕಿ' ಸಿನಿಮಾ ರಾಜ್ಯದ ಮೂಲೆ ಮೂಲೆಯಲ್ಲಿ ರಿಲೀಸ್ ಆಗಿದೆ. ಹಾಗೇ ಹೌಸ್‌ಫುಲ್ ಪ್ರದರ್ಶನ ಕಾಣುವಾಗ ಅಪ್ಪು ಅವರು ಸ್ಕ್ರೀನ್ ಮೇಲೆ ಬಂದಿದ್ದನ್ನು ನೋಡಿದ ಪುನೀತ್ ರಾಜ್‌ಕುಮಾರ್ ಅವರ ಪತ್ನಿ, ಅಶ್ವಿನಿ ಪುನೀತ್ ಅವರು ಕಣ್ಣೀರು ಹಾಕಿದರು.
ಜೈ ಮಾಕಾಳಮ್ಮ 🔥
— ದೃಶ್ಯ | Drushya (@DrushyaDrush) March 14, 2024
" Jackie Fever begins "#AdvanceHBDDrPuneethRajkumar #DrPuneethRajkumar #JackieReRelease pic.twitter.com/sSBC9TssWN
ಬೆಳಗ್ಗೆ 4 ಗಂಟೆಗೆಯಿಂದ ಅಬ್ಬರ
ಕನ್ನಡ ನೆಲದ ಥಿಯೇಟರ್‌ನಲ್ಲಿ ಜಾಕಿ ಅಬ್ಬರ ಹೇಗಿದೆ ಅಂದ್ರೆ, ಅಪ್ಪು ಫ್ಯಾನ್ಸ್ ಥಿಯೇಟರ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ. ಹಾಗೇ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳಿಗೆ ಈ ಸಿನಿಮಾ ಸಾವಿರ ಸಾರಿ ನೋಡಿದರೂ ಮತ್ತೆ, ಮತ್ತೆ ನೋಡಬೇಕು ಅನಿಸುತ್ತಿದೆ. ಕರ್ನಾಟಕದ ಬಹುತೇಕ ಸಿನಿಮಾ ಮಂದಿರದಲ್ಲಿ ಇಂದು ಬೆಳಗ್ಗೆ 4 ಗಂಟೆಗೆಯಿಂದಲೇ ಈ ಸಿನಿಮಾ ಅಬ್ಬರ ಶುರುವಾಗಿತ್ತು 'ಜಾಕಿ' ಸಿನಿಮಾ ಬೆಳ್ಳಂಬೆಳಗ್ಗೆ ರಿಲೀಸ್ ಆಗಿದ್ದರು ಹೌಸ್‌ಫುಲ್ ಪ್ರದರ್ಶನ ಕಂಡಿದೆ.
ಈ ಮೂಲಕ ಫ್ಯಾನ್ಸ್‌ಗೆ ಮತ್ತೊಮ್ಮೆ ಬೆಳ್ಳಿ ಪರದೆ ಮೇಲೆ ದರ್ಶನ ಕೊಟ್ಟಿದ್ದಾರೆ ಕನ್ನಡಿಗರ ಆರಾಧ್ಯ ದೈವವಾದ ಪುನೀತ್ ರಾಜ್‌ಕುಮಾರ್ ಅವರು. ಆದರೆ ಸಿನಿಮಾ ನೋಡುವಾಗಲೇ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ಕಣ್ಣೀರು ಹಾಕಿದ ವಿಡಿಯೋ ಈಗ ವೈರಲ್ ಆಗುತ್ತಿದ್ದು ಅಭಿಮಾನಿಗಳು ಕೂಡ ಅಪ್ಪು ಇಲ್ಲದ್ದನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ.
How's the josh guys..#JackieReRelease#DrPuneethRajkumar pic.twitter.com/aPcPtX2V3T
— Hemanth (@Hemanthappu2005) March 12, 2024
ಅಪ್ಪು.. ಅಪ್ಪು.. ಅಪ್ಪು..
ಒಟ್ನಲ್ಲಿ ಭಾರತೀಯರಿಗೆ ರಾಜ್‌ಕುಮಾರ್ ಹೇಗೋ, ಅದೇ ರೀತಿ ಪುನೀತ್ ರಾಜ್‌ಕುಮಾರ್ ಕೂಡ ಹೃದಯದ 'ಅಪಧಮನಿ & ಅಭಿಧಮನಿ' ಆಗೋಗಿದ್ದಾರೆ ಭಾರತದಲ್ಲಿ ಮೂಲೆ ಮೂಲೆಯಲ್ಲಿ ಡಾ. ರಾಜ್ ಮತ್ತು ಪುನೀತ್ ರಾಜ್ ಇಬ್ಬರೂ ಚಿರಪರಿಚಿತ ಆಗೋಗಿದ್ದಾರೆ. ಹೀಗಿದ್ದಾಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಹಳೆಯ ಸಿನಿಮಾ ಜಾಕಿ ರಿಲೀಸ್ ಆಗಿ ಅಬ್ಬರಿಸುತ್ತಿದೆ. 2010ರಲ್ಲಿ ರಿಲೀಸ್ ಆಗಿದ್ದ ಜಾಕಿ ಈಗ ರೀ ರಿಲೀಸ್ ಆಗಿದ್ದರೂ ಖದರ್ ಮಾತ್ರ ಜೋರಾಗಿದೆ. ಹಾಗೇ ಇನ್ನೂ ಹಲವು ದಿನಗಳ ಕಾಲ ಇದೇ ರೀತಿ ಜಾಕಿ ಹೌಸ್‌ಫುಲ್ ಪ್ರದರ್ಶನ ಕಾಣುವ ನಿರೀಕ್ಷೆ ಇದೆ.












Click it and Unblock the Notifications