ಸ್ಯಾಂಡ್‌ವಿಚ್ ಅನ್ನು ಅರ್ಧಕ್ಕೆ ಕತ್ತರಿಸಲು 182 ರೂ: ಬಿಲ್ ಕಂಡು ಪ್ರವಾಸಿಗ ಶಾಕ್!
ಸಾಮಾನ್ಯವಾಗಿ ವಿವಿಧ ಖಾದ್ಯಗಳ ಬೆಲೆ ಬೇರೆಬೇರೆಯಾಗಿರುತ್ತದೆ. ದೇಶ ವಿದೇಶದ ಖಾದ್ಯಗಳ ಬೆಲೆಗಳಿಗೆ ಹೋಲಿಸಿದರೆ ತುಂಬಾನೇ ವ್ಯತ್ಯಾಸ. ಆದರೆ ಇತ್ತೀಚೆಗೆ ಹಲವಾರು ಶುಲ್ಕಗಳಿಂದಾಗಿ ವಿವಿಧ ಖಾದ್ಯಗಳಿಗೆ ಹೆಚ್ಚಿನ ಬೆಲೆ ನೀಡಬೇಕು ಅನ್ನೋದು ಬೇಸರದ ಸಂಗತಿ. ಹೀಗೊಂದು ಘಟನೆಯಲ್ಲಿ ಇಟಾಲಿಯನ್ ಕೆಫೆ ಸ್ಯಾಂಡ್‌ವಿಚ್ ಅನ್ನು ಅರ್ಧಕ್ಕೆ ಕತ್ತರಿಸಲು ಪಡೆದ ಹಣವನ್ನು ಕಂಡು ಪ್ರವಾಸಿಗರೊಬ್ಬರು ಆಶ್ಚರ್ಯಗೊಂಡಿದ್ದಾರೆ.
ಹೌದು... ಇಟಾಲಿಯನ್ ಕೆಫೆ ಸ್ಯಾಂಡ್‌ವಿಚ್ ಅನ್ನು ಅರ್ಧಕ್ಕೆ ಕತ್ತರಿಸಲು ಬರೋಬ್ಬರಿ 182 ರೂಪಾಯಿ ಪಡೆದ ಘಟನೆ ನಡೆದಿದೆ. ಇಟಲಿಯ ಲೇಕ್ ಕೊಮೊ ಬಳಿಯ ಜನಪ್ರಿಯ ರಜಾ ತಾಣವಾದ ಗೆರಾ ಲಾರಿಯೊದಲ್ಲಿನ ಬಾರ್ ಪೇಸ್‌ನಲ್ಲಿ ಭೋಜನ ಮಾಡುತ್ತಿದ್ದ ಪ್ರವಾಸಿಗ ಬಿಲ್ ನೋಡಿ ಶಾಕ್ ಆಗಿದ್ದಾರೆ.

ಸುಟ್ಟ ಸ್ಯಾಂಡ್‌ವಿಚ್ ಅನ್ನು "ಡಿವಿಸೋ ಡಾ ಮೆಟಾ" ಅಥವಾ "ಅರ್ಧಕ್ಕೆ ಕತ್ತರಿಸುವುದಕ್ಕಾಗಿ" ರಶೀದಿಯಲ್ಲಿ €2 (ರೂ. 182) ಶುಲ್ಕವನ್ನು ನಮೋದಿಸಲಾಗಿತ್ತು. ಅದನ್ನು ಕಂಡು ಗ್ರಾಹಕ ಆಶ್ಚರ್ಯಚಕಿತರಾಗಿದ್ದಾರೆ. ಟ್ರಿಪ್ಯಾಡ್ವೈಸರ್‌ಗೆ ರಸೀದಿಯ ಚಿತ್ರವನ್ನು ಅಪ್‌ಲೋಡ್ ಮಾಡಿದ ಗ್ರಾಹಕ ತನ್ನ ಆಶ್ಚರ್ಯವನ್ನು ವ್ಯಕ್ತಪಡಿಸಿ, "ಸ್ಯಾಂಡ್‌ವಿಚ್ ಅನ್ನು ಅರ್ಧಕ್ಕೆ ಕತ್ತರಿಸಿದಕ್ಕೆ ಇಷ್ಟೊಂದು ಪಾವತಿಸಬೇಕಾ?" ಎಂದು ಪ್ರಶ್ನೆ ಮಾಡಿದ್ದಾರೆ.
ರಶೀದಿಯ ಪ್ರಕಾರ, ಸ್ಯಾಂಡ್‌ವಿಚ್-ಕತ್ತರಿಸುವ ಶುಲ್ಕವು ಸ್ಯಾಂಡ್‌ವಿಚ್‌ನ ಒಟ್ಟು ವೆಚ್ಚಕ್ಕಿಂತ €7.50 ರಿಂದ €9.50ರಷ್ಟು ಹೆಚ್ಚಿದೆ. ಇದು ಒಂದು ಕಪ್ ಎಸ್ಪ್ರೆಸೊದ ಬೆಲೆಗಿಂತ ಹೆಚ್ಚು. ಕೆಫೆಯ ಮಾಲೀಕ ಕ್ರಿಸ್ಟಿನಾ ಬಿಯಾಚಿ ಅವರು ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ. ಹೆಚ್ಚುವರಿ ವಿನಂತಿಗಳು ವೆಚ್ಚವನ್ನು ಉಂಟುಮಾಡುತ್ತವೆ ಎಂದು ವಿವರಿಸಿದ್ದಾರೆ.
ಒಂದರ ಬದಲಿಗೆ ಎರಡು ಪ್ಲೇಟ್‌ಗಳನ್ನು ಬಳಸುವುದು ಮತ್ತು ಅವುಗಳನ್ನು ತೊಳೆಯಲು ಸಮಯ ಮತ್ತು ಶ್ರಮವು ಶುಲ್ಕವನ್ನು ಸಮರ್ಥಿಸುತ್ತದೆ ಎಂದು ಬಿಯಾಚಿ ಹೇಳಿದ್ದಾರೆ. ಸ್ಯಾಂಡ್‌ವಿಚ್‌ನಲ್ಲಿ ಫ್ರೆಂಚ್ ಫ್ರೈಸ್ ಸೇರಿದೆ ಎಂದು ಅವರು ತಿಳಿಸಿದ್ದಾರೆ, ಕತ್ತರಿಸಲು ಹೆಚ್ಚುವರಿ ಸಮಯ ಬೇಕಾಗುತ್ತದೆ ಎಂದಿದ್ದಾರೆ.

ಆ ಸಮಯದಲ್ಲಿ ಗ್ರಾಹಕರು ದೂರು ನೀಡಿದ್ದರೆ, ಬಿಲ್‌ನಿಂದ ಶುಲ್ಕವನ್ನು ತೆಗೆದುಹಾಕಲಾಗುತ್ತದೆ ಎಂದು ಬಿಯಾಚಿ ಹೇಳಿದರು. ಈ ಘಟನೆಯು ಇಟಲಿಯಲ್ಲಿ ಇದೇ ಮೊದಲಲ್ಲ, ಏಕೆಂದರೆ ಪ್ರವಾಸಿಗರು ಈ ಹಿಂದೆ ಊಟಕ್ಕೆ ಹೆಚ್ಚಿನ ಬೆಲೆಗಳ ಬಗ್ಗೆ ದೂರು ನೀಡಿದ್ದರು. ಊಟಕ್ಕೆ ಆಶ್ಚರ್ಯಕರ ಶುಲ್ಕಗಳನ್ನು ಇಟಲಿಯಲ್ಲಿ ಪ್ರವಾಸಿಗರಿಗೆ ಕಳವಳವನ್ನುಂಟುಮಾಡುತ್ತಿದೆ.












Click it and Unblock the Notifications