24 ಬಾತ್‌ರೂಮ್+12 ಬೆಡ್‌ರೂಮ್: ಮುಖೇಶ್ ಅಂಬಾನಿ ಪುತ್ರಿಯ ಲಾಸ್ ಎಂಜಲೀಸ್ ಬಂಗಲೆ ಖರೀದಿಸಿದ ಹಾಲಿವುಡ್ ತಾರೆ- ಬೆಲೆ ಎಷ್ಟು?
ಹಾಲಿವುಡ್‌ನ ಎ-ಲಿಸ್ಟ್ ಜೋಡಿ ಜೆನ್ನಿಫರ್ ಲೋಪೆಜ್ ಮತ್ತು ಬೆನ್ ಅಫ್ಲೆಕ್ ನ್ಯೂಯಾರ್ಕ್‌ನಲ್ಲಿ ಹೊಸ ಮನೆ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಮನೆಯನ್ನು ಅವರು ನಮ್ಮ ದೇಶದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಸೇರಿಸಿರುವ ಮುಖೇಶ್ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಅವರಿಂದ ಖರೀದಿಸಿದ್ದಾರೆ.
ಹಾಲಿವುಡ್ ತಾರೆ ಜೆನ್ನಿಫರ್ ಲೋಪೆಜ್ ಮುಖೇಶ್ ಅಂಬಾನಿ ಪುತ್ರಿಯ ಲಾಸ್ ಎಂಜಲೀಸ್ ಬಂಗಲೆ ಖರೀದಿಸಿದ್ದಾರೆ. ಬೆವರ್ಲಿ ಹಿಲ್ಸ್‌ನ ಮಧ್ಯದಲ್ಲಿರುವ ಈ ಐಷಾರಾಮಿ ಬಂಗಲೆ 38,000 ಚದರ ಅಡಿಗಳಷ್ಟು ಹರಡಿದೆ. ಇದು 12 ಮಲಗುವ ಕೋಣೆಗಳು, 24 ಸ್ನಾನಗೃಹಗಳು, ಒಳಾಂಗಣ ಅಂಕಣ, ಜಿಮ್, ಸಲೂನ್, ಸ್ಪಾ, 155 ಅಡಿ ಉದ್ದದ ಒಳಗಿನ ಇನ್ಫಿನಿಟಿ ಪೂಲ್, ಹೊರಾಂಗಣ ಅಡುಗೆಮನೆ ಮತ್ತು ಹಲವಾರು ಸೊಂಪಾದ ಹುಲ್ಲುಹಾಸುಗಳನ್ನು ಹೊಂದಿದೆ.

ಹಾಲಿವುಡ್ ತಾರೆ ಜೆನ್ನಿಫರ್ ಮತ್ತು ಬೆನ್ ಕಳೆದ ವರ್ಷ ಜೂನ್‌ನಲ್ಲಿ ಇಶಾ ಅವರಿಂದ ಈ ಹೊಸ ಮನೆಯನ್ನು ಖರೀದಿಸಿದ್ದರು. ಜೆನ್ನಿಫರ್ ಈ ಮನೆಯನ್ನು 500 ಕೋಟಿಗೂ ಹೆಚ್ಚು ಕೊಟ್ಟು ಖರೀದಿಸಿದ್ದಾರೆ. ಈ ಐಷಾರಾಮಿ ಮತ್ತು ಭವ್ಯವಾದ ಮನೆಯ ಒಪ್ಪಂದವನ್ನು ಕಳೆದ ಜೂನ್‌ನಲ್ಲಿ ಇಶಾ ಮತ್ತು ಜೆನ್ನಿಫರ್ ನಡುವೆ ಸಹಿ ಮಾಡಲಾಗಿತ್ತು.
ಜೆನ್ನಿಫರ್ ಮತ್ತು ಬೆನ್ ಇದನ್ನು $ 61 ಮಿಲಿಯನ್(500 ಕೋಟಿ ರೂ)ಗೆ ಖರೀದಿಸಿದ್ದಾರೆ. ಬೆನ್ ತನ್ನ ಪೆಸಿಫಿಕ್ ಪಾಲಿಸೇಡ್ಸ್ ಮನೆಯನ್ನು 2022 ರಲ್ಲಿ $ 28.5 ಮಿಲಿಯನ್‌ಗೆ ಮಾರಾಟ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಜೆನ್ನಿಫರ್ ತನ್ನ ಬೆಲ್-ಏರ್ ಮ್ಯಾನ್ಷನ್ ಆಸ್ತಿಯನ್ನು $34 ಮಿಲಿಯನ್‌ಗೆ ಮಾರಾಟ ಮಾಡಿದ್ದಳು.
ತಮ್ಮ ಗರ್ಭಾವಸ್ಥೆಯನ್ನು ಇಲ್ಲಿಯೇ ಕಳೆದ ಇಶಾ ಅಂಬಾನಿ
ಇಶಾ ಅಂಬಾನಿ ತಮ್ಮ ಗರ್ಭಾವಸ್ಥೆಯ ಬಹುಪಾಲು ಸಮಯವನ್ನು ಲಾಸ್ ಏಂಜಲೀಸ್‌ನಲ್ಲಿರುವ ಈ ಭವನದಲ್ಲಿ ಕಳೆದಿದ್ದಾರೆ ಎಂದು ಹೇಳಲಾಗುತ್ತದೆ. ರಿಲಯನ್ಸ್ ಅಧ್ಯಕ್ಷ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರಿ ಇಶಾ, ಉದ್ಯಮಿ ಆನಂದ್ ಪಿರಮಲ್ ಅವರನ್ನು 2018 ರಲ್ಲಿ ವಿವಾಹವಾದರು.

ಆನಂದ್ ಅವರ ಪೋಷಕರು ಅಜಯ್ ಮತ್ತು ಸ್ವಾತಿ ಪಿರಾಮಲ್ ಅವರಿಗೆ ಮುಂಬೈನ ಬಾಂದ್ರಾ-ವರ್ಲಿ ಸೀ ಲಿಂಕ್ ಎದುರು 50,000 ಚದರ ಅಡಿ ಮತ್ತು 1,000 ಕೋಟಿ ಮೌಲ್ಯದ ಐಷಾರಾಮಿ ಮಹಲು ಉಡುಗೊರೆಯಾಗಿ ನೀಡಿದರು.
ಹಾಲಿವುಡ್ ತಾರೆ ಜೆನ್ನಿಫರ್ ಯಾರು?
ತುಂಡುಡುಗೆ ಹಾಟ್ ಪೋಟೋ ಶೂಟ್ ಗಳಲ್ಲಿ ಇಂದಿಗೂ ಜೆನ್ನಿಫರ್ ಲೋಫೆಜ್ ಗೆ ಯಾರು ಸರಿಸಾಟಿಯಿಲ್ಲ. ತಮ್ಮ ಸೌಂದರ್ಯವನ್ನು ಈಗಲೂ ಕಾಪಾಡಿಕೊಂಡು ಪಡ್ಡೆಗಳ ನಿದ್ದೆಗೆಡಿಸುತ್ತಿರುವ ಜೆನ್ನಿಫರ್ ಲೋಫೆಜ್ ಅವರನ್ನು ನಿಜವಾದ ಸೌಂದರ್ಯ ಗುರು ಎಂದರೆ ತಪ್ಪಾಗಲಾರದು.

ಕಳೆದ ವರ್ಷ ಜನವರಿಯಲ್ಲಿ ಪಾನ್ ನಳಿನ್ ಅವರ 2021 ರ ಗುಜರಾತಿ 'ಚೆಲೋ ಶೋ' ಸ್ಕ್ರೀನಿಂಗ್ ಅನ್ನು ಆಯೋಜಿಸಿದ್ದ ತನ್ನ ಸ್ನೇಹಿತೆ ಪ್ರಿಯಾಂಕಾ ಚೋಪ್ರಾಗೆ ಇಶಾ ತನ್ನ ಲಾಸ್ ಏಂಜಲೀಸ್ ಮನೆಯನ್ನು ನೀಡಿದ್ದಳು. ಇದನ್ನು ಆಸ್ಕರ್‌ಗೆ ಮುಂಚಿತವಾಗಿ ಯೋಚಿಸಲಾಗಿತ್ತು.












Click it and Unblock the Notifications