ಬಿಗ್ ಬಾಸ್‌ ಶಿಶಿರ್‌-ಐಶ್ವರ್ಯ ಸಿಂಧೋಗಿ ಮಧ್ಯೆ ಲವ್‌ ಇದ್ಯಾ?

ಬಿಗ್ ಬಾಸ್‌ ಕನ್ನಡ ಸೀಜನ್‌ 11ರ ಸ್ಪರ್ಧಿಗಳಲ್ಲಿ ಧಾರಾವಾಹಿ ನಟ-ನಟಿಯರೇ ಹೆಚ್ಚಿದ್ದರು. ಈ ಪೈಕಿ ಶಿಶಿರ್‌ ಶಾಸ್ತ್ರಿ ಕೂಡ ಇಬ್ಬರು. ಅನೇಕ ಧಾರಾವಾಹಿ ಹಾಗೂ ಸಿನಿಮಾ ನಟಿಸಿ ಜನಪ್ರಿಯತೆ ಪಡೆದಿದ್ದ ಶಿಶಿರ್‌ ಬಿಗ್ ಬಾಸ್‌ ಕನ್ನಡ ಸೀಜನ್‌ 11ರ ವಿನ್ನರ್‌ ಆಗಬೇಕು ಎನ್ನುವುದು ಅನೇಕರ ಅಭಿಲಾಷೆ ಆಗಿತ್ತು. ಆದರೆ ಈ ಆಸೆಗೆ ಈಗಾಗಲೇ ತಣ್ಣೀರು ಬಿದ್ದಿದ್ದು, ಶಿಶಿರ್‌ ಶಾಸ್ತ್ರಿ ಎಲಿಮಿನೇಟ್‌ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

ಬಿಗ್ ಬಾಸ್‌ ಮನೆಯಲ್ಲಿ ಎಲ್ಲರೊಂದಿಗೂ ಉತ್ತಮ ಸ್ನೇಹ ಬೆಳೆಸಿಕೊಂಡಿದ್ದ ಶಿಶಿರ್‌, ನಟಿ ಐಶ್ವರ್ಯ ಸಿಂಧೋಗಿ ಜೊತೆ ಜಾಸ್ತಿ ಕ್ಲೋಸ್‌ ಆಗಿದ್ದರು. ಇದು ನೋಡುವವರಿಗೆ ಪ್ರೀತಿ ಇರಬಹುದು ಅನಿಸಿತ್ತು. ಈ ಬಗ್ಗೆ ನೇರವಾಗಿ ಶಿಶಿರ್‌ ಶಾಸ್ತ್ರಿ ಸ್ಪಷ್ಟನೆ ನೀಡಿದ್ದಾರೆ.

Is There Love Between Actor Shishir shastry And Actress Aishwarya

ಫಿಲ್ಮಿ ಫಸ್ಟ್‌ ಜೊತೆ ಮಾತನಾಡಿದ ಅವರು, ' ನಮ್ಮಿಬ್ಬರ ಮಧ್ಯೆ ಲವ್‌ ಅಥವಾ ಪ್ರೀತಿ ಎನ್ನುವುದು ಖಂಡಿತಾ ಇಲ್ಲ. ಅಲ್ಲಿ ಲವ್ ಅಥವಾ ಕ್ರಶ್‌ ಎನ್ನುವುದು ಖಂಡಿತಾ ಇರಲಿಲ್ಲ. ಅಲ್ಲಿ ಇದ್ದಿದ್ದು ಒಂದು ಪರಿಶುದ್ಧವಾದ ಸ್ನೇಹ. ಯಾಕೆಂದರೆ ಐಶ್ವರ್ಯ ಜೊತೆ ಮೊದಲು ಕೆಲಸ ಮಾಡಿದ್ದೆ. ನಾವಿಬ್ಬರು ಒಂದು ಸಿನಿಮಾ ಮಾಡಿದ್ದೆವು. ಅದಾದ ಮೇಲೆ ಎಷ್ಟೋ ವರ್ಷಗಳು ಆದ ಮೇಲೆ ನಾವಿಬ್ಬರು ಸಿಕ್ಕಿರುವುದು'.

'ನನ್ನ ಮತ್ತು ಐಶ್ವರ್ಯ ನಡುವೆ ಒಳ್ಳೆ ಬಾಂಧವ್ಯ ಶುರುವಾಗಿದ್ದೇ ಪಕ್ಷದ ಟಾಸ್ಕ್‌ ಬಳಿಕ. ಅಲ್ಲಿಯ ವರೆಗೆ ನಾವಿಬ್ಬರು ಸುಮ್ಮನೆ ಮಾತನಾಡುತ್ತಿದ್ದೆವು. ಆ ಪಕ್ಷದ ಟಾಸ್ಕ್‌ಲ್ಲಿ ಆಕೆ ಎಲ್ಲೋ ಕುಗ್ಗಿದಾಗ ನಾನು ನಿಂತುಕೊಂಡು ತುಂಬಾ ಬೆಂಬಲ ನೀಡಿದೆ. ಅದಾದ ಬಳಿಕ ಅವಳು ಕುಗ್ಗಿದಾಗ ನಾನು, ನಾನು ಕುಗ್ಗಿದಾಗ ಅವರು ಬೆಂಬಲಕ್ಕೆ ನಿಲ್ಲುತ್ತಿದ್ದರು. ಈ ರೀತಿಯಾಗಿ ನಮ್ಮ ಸ್ನೇಹ ಬೆಳೆಯುತ್ತಾ ಬಂತು' ಎಂದರು.

Is There Love Between Actor Shishir shastry And Actress Aishwarya

'ಈ ಸ್ನೇಹದಲ್ಲಿ ಪ್ರೀತಿಯಾಗಿದೆ, ಕ್ರಶ್‌ ಆಗಿದೆ ಖಂಡಿತಾ ಇಲ್ಲ. ಒಂದು ಪರಿಶುದ್ಧವಾದ ಸ್ನೇಹ ನನ್ನ ಮತ್ತು ಅವರ ಕಡೆಯಿಂದ ಇದೆ. ಐಶ್ವರ್ಯ ಎಲ್ಲರೂ ಅಂದುಕೊಂಡಂತೆ ಇಲ್ಲ. ಮಾನಸಿಕವಾಗಿ ಅವರು ತುಂಬಾ ಗಟ್ಟಿಯಾಗಿದ್ದಾರೆ. ತುಂಬಾ ಅಂದರೆ ತುಂಬಾ ಗಟ್ಟಿಯಾಗಿದ್ದಾರೆ. ಯಾಕೆಂದರೆ ಹೊರಗಡೆ ತುಂಬಾ ನೋವುಗಳನ್ನು ಎದುರಿಸಿ ಹೋಗಿರುವ ವ್ಯಕ್ತಿ. ಒಂಟಿಯಾಗಿ ನಿಂತುಕೊಂಡು ಎಷ್ಟೋ ಸಂದರ್ಭಗಳನ್ನು ಎದುರಿಸಿದ್ದಾಳೆ. ಹೀಗಾಗಿ ಆ ಮನೆಯಲ್ಲಿ ನಾನಿಲ್ಲ ಅಂತಾ ಅವಳು ಕುಗ್ಗಲ್ಲ, ಇನ್ನಷ್ಟು ಹೆಚ್ಚು ಗಟ್ಟಿಯಾಗಿ ಆಡುತ್ತಾಳೆ' ಎಂದು ಶಿಶಿರ್‌, ಐಶ್ವರ್ಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+