Samantha: ನಾಗಚೈತನ್ಯ ಬೆನ್ನಲ್ಲೇ ಸಮಂತಾ ಕೂಡ ಸದ್ದಿಲ್ಲದೆ ನಿಶ್ವಿತಾರ್ಥ? ಯಾರು ಆ ವ್ಯಕ್ತಿ?
ಬಹುಭಾಷಾ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸದಾ ಗಾಸಿಪ್‌ನಲ್ಲಿರುವ ನಟಿಯರಲ್ಲಿ ಒಬ್ಬರು. ನಟ ನಾಗಚೈತನ್ಯಾ ಅವರೊಂದಿಗೆ ಡಿವೋರ್ಸ್ ಆದ ಬಳಿಕ ಸಮಂತಾ ಬೇರೊಂದು ಮದುವೆಗೆ ರೆಡಿಯಾಗಿದ್ದಾರೆ ಎಂಬುದು ಹೊಸ ವಿಚಾರವೇನಲ್ಲ. ಇದಕ್ಕೆ ನಟಿ ಕೂಡ ಯಾವುದೇ ಉತ್ತರ ಕೊಡಲೂ ಇಲ್ಲ. ಆದರೆ ಇತ್ತೀಚಿಗೆ ಸಮಂತಾ ಸೈಲೆಂಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ಅವರ ಕೈಯಲ್ಲಿ ಕಾಣಿಸಿಕೊಂಡ ಎಂಗೇಜ್‌ಮೆಂಟ್ ಉಂಗುರ. ಇದರ ಫೋಟೋಗಳು ವೈರಲ್ ಆಗಿದ್ದು, ಫೇಮಸ್ ವ್ಯಕ್ತಿಯ ಜೊತೆಗೆ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.
ಅತ್ತ ಮಾಜಿ ಪತಿ ನಾಗಚೈತನ್ಯಾ ಅವರು ಡಿವೋರ್ಸ್ ಬಳಿಕ ನಟಿ ಶೋಭಿತಾ ಅವರನ್ನು ಎರಡನೇ ಮದುವೆಯಾಗಿ ಖುಷಿಯಾಗಿ ಹೊಸ ಜೀವನ ನಡೆಸುತ್ತಿದ್ದಾರೆ. ಇತ್ತ ಸಮಂತಾ ಕೂಡ ಎರಡನೇ ಮದುವೆ ಆಗಬೇಕು ಎಂಬುದು ಅವರ ಅಭಿಮಾನಿಗಳ ಕನಸು. ಆದರೆ ಈ ಬಗ್ಗೆ ನಟಿ ಎಲ್ಲೂ ಮಾತನಾಡಲೇ ಇಲ್ಲ. ಇನ್ನು ಇತ್ತೀಚೆಗಂತೂ ಖ್ಯಾತ ನಿರ್ಮಾಪಕನ ಜೊತೆ ಸ್ಯಾಮ್ ಸಿಕ್ಕಾಪಟ್ಟೆ ಕಾಣಿಸಿಕೊಂಡಿದ್ದು. ಅವರೊಂದಿಗೆ ತುಂಬಾ ಕ್ಲೋಸ್ ಆಗಿ ಇದ್ದಿದ್ದರಿಂದ ಅವರೊಂದಿಗೆ ಸಮಂತಾ ಎರಡನೇ ಮದುವೆ ಆಗ್ತಾರೆ ಎಂದೇ ಹೇಳಲಾಗಿತ್ತು. ಈಗ ಕೈಯಲ್ಲಿ ಸ್ಪೆಷಲ್ ರಿಂಗ್ ತೋರಿಸಿ ನಟಿ ಶಾಕ್ ಕೊಟ್ಟಿದ್ದಾರೆ.

ಉಂಗುರವನ್ನೇ ಜೂಮ್ ಮಾಡಿ ತೋರಿಸಿದ ಸ್ಯಾಮ್!
ಸಮಂತಾ ರುತ್ ಪ್ರಭು ಮತ್ತು ಚಲನಚಿತ್ರ ನಿರ್ಮಾಪಕ ರಾಜ್ ನಿಡಿಮೋರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಹರಡಿವೆ. ಸಮಂತಾ ತನ್ನ ಬೆರಳಿನಲ್ಲಿ ಹೊಳೆಯುವ ಉಂಗುರವನ್ನು ತೋರಿಸುವ ಫೋಟೋಗಳನ್ನು ಪೋಸ್ಟ್ ಮಾಡಿದ ನಂತರ, ಅಭಿಮಾನಿಗಳು ಮತ್ತು ಮಾಧ್ಯಮಗಳಲ್ಲಿ ಸಂಚಲನ ಮೂಡಿಸಿದೆ. ಇತ್ತೀಚಿನ ಪ್ರವಾಸಗಳಲ್ಲಿಯೂ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಇದು ಅವರ ಸಂಬಂಧವು ನಿಶ್ಚಿತಾರ್ಥದವರೆಗೆ ಹೋಗಿದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು.
ಇದರ ಹೊರತಾಗಿಯೂ ಸಮಂತಾ ಅಥವಾ ರಾಜ್ ಅಧಿಕೃತವಾಗಿ ತಮ್ಮ ನಿಶ್ಚಿತಾರ್ಥವನ್ನು ದೃಢಪಡಿಸಿಲ್ಲ, ನಿರಾಕರಿಸಲೂ ಇಲ್ಲ. ಅವರು ದಿ ಫ್ಯಾಮಿಲಿ ಮ್ಯಾನ್ ಮತ್ತು ಸಿಟಾಡೆಲ್: ಹನಿ ಬನ್ನಿ ಸರಣಿಗಳಿಂದಲೂ ಪರಿಚಯರಾಗಿದ್ದು, ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡು ಗಾಸಿಪ್‌ಗಳಿಗೆ ಆಹಾರವಾಗಿದ್ದಾರೆ. ಸಮಂತಾ ಹಂಚಿಕೊಂಡ ಫೋಟೋದಲ್ಲಿ ಉಂಗುರವೇ ಹೈಲೈಟ್ ಆಗಿದ್ದು, ರಹಸ್ಯ ನಿಶ್ಚಿತಾರ್ಥದ ಬಗ್ಗೆ ಚರ್ಚೆಯನ್ನು ತೀವ್ರಗೊಳಿಸಿದೆ. ಆದರೆ ಇಲ್ಲಿಯವರೆಗೆ, ಸ್ಯಾಮ್ ತಮ್ಮ ವೈಯಕ್ತಿಕ ಸಂಬಂಧದ ಬಗ್ಗೆ ಎಲ್ಲಿಯೂ ಹೇಳಿಕೊಂಡಿಲ್ಲ.
ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಆಧಾರದ ಮೇಲೆ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಧಿಮೋರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಬಲವಾದ ಊಹಾಪೋಹಗಳು ಮತ್ತು ಅಭಿಮಾನಿಗಳ ಗುಸುಗುಸು ಇದ್ದರೂ, ಇನ್ನೂ ಯಾವುದೇ ಘೋಷಣೆ ಹೊರಬಿದ್ದಿಲ್ಲ. ಅದೇನೇ ಇರಲಿ ಸ್ಯಾಮ್‌ಗೆ ಅನ್ಯಾಯವಾಗಿದೆ. ಡಿವೋರ್ಸ್ ಬಳಿಕ ನಾಗಚೈತನ್ಯಾ ಹೊಸ ಜೀವನ ಕಂಡುಕೊಂಡಿದ್ದಾರೆ. ಸಮಂತಾ ಕೂಡ ಎರಡನೇ ಮದುವೆಯಾದರೆ ನಿಜಕ್ಕೂ ಖುಷಿಯ ವಿಚಾರ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್.












Click it and Unblock the Notifications