Kiccha Sudeep: ಶತಕೋಟಿ ಒಡೆಯ ಸುದೀಪ್! ಅಭಿನಯ ಚಕ್ರವರ್ತಿ ಬಳಿ ಇರುವ ಆಸ್ತಿ ಎಷ್ಟು ಕೋಟಿ?

ಕಿಚ್ಚ ಸುದೀಪ್, ಸ್ಯಾಂಡಲ್‌ವುಡ್‌ನ ಸೂಪರ್ ಸ್ಟಾರ್. ಅಭಿನಯ ಚಕ್ರವರ್ತಿ, ಬಾದ್‌ಶಾ ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ಸುದೀಪ್‌ ಆಸ್ತಿ ಎಷ್ಟು ಎನ್ನುವ ಕುತೂಹಲ ಇದ್ದೇ ಇರುತ್ತದೆ. ಅದರ ಬಗ್ಗೆ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.

ಸುದೀಪ್ ಅವರ ಆಸ್ತಿ ಮೌಲ್ಯ ಅಂದಾಜು 125 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿರುವ ಸುದೀಪ್ ಅವರ ಒಡೆತನದ ಮನೆ 20 ಕೋಟಿ ರೂಪಾಯಿ ಬೆಲೆ ಬಾಳುತ್ತದೆ, ಇದರ ಜೊತೆ ಅವರ ಬಳಿ ಐಷಾರಾಮಿ ಕಾರುಗಳು ಕೂಡ ಇವೆ. ಲ್ಯಾಂಬೋರ್ಘಿನಿ ಅವೆಂಟಡಾರ್ ಮತ್ತು ಹಮ್ಮರ್ ಎಚ್‌3ಯಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

Inside Kiccha Sudeep s Luxurious Lifestyle Cars Home and Net Worth

ಐಷಾರಾಮಿ ಮನೆ

ಸುದೀಪ್ ಅವರ ನಿವಾಸ ಅವರ ಮನೆ ಸಿಕ್ಕಾಪಟ್ಟೆ ಐಷಾರಾಮಿಯಾಗಿದೆ. 20 ಕೋಟಿ ಬೆಲೆ ಬಾಳುವ ಮನೆಯನ್ನು ಹೊಂದಿದ್ದು, ಸುದೀಪ್-ಪ್ರಿಯಾ ಅವರ ಅಭಿರುಷಿಗೆ ತಕ್ಕಂತೆ ಮನೆಯನ್ನು ನಿರ್ಮಿಸಲಾಗಿದೆ. ಅಲ್ಲದೆ ಸುದೀಪ್ ಅವರಿಗಾಗಿಯೇ ವಿಶೇಷ ಅಡುಗೆ ಮನೆಯನ್ನು ವಿನ್ಯಾಸ ಮಾಡಲಾಗಿದ್ದು, ಅಲ್ಲಿ ನೆಚ್ಚಿನ ಅಡುಗೆಗಳನ್ನು ಮಾಡುತ್ತಾರೆ. ರಿಯಾಲಿಟಿ ಶೋಗಳನ್ನು ನೋಡುವವರಿಗೆ ಸುದೀಪ್ ಉತ್ತಮವಾಗಿ ಅಡುಗೆ ಮಾಡುತ್ತಾರೆ ಎನ್ನುವ ವಿಚಾರ ಗೊತ್ತಿದೆ.

ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ

ಉತ್ತಮ ಆದಾಯವನ್ನು ಹೊಂದಿರುವ ಸುದೀಪ್ ಹಲವು ಕ್ಷೇತ್ರಗಳಲ್ಲಿ ಹೂಡಿಕೆ ಕೂಡ ಮಾಡಿದ್ದಾರೆ. ಅತಿಥಿ ಗೃಹಗಳು, ಬೆಂಗಳೂರಿನಲ್ಲಿ ಜಮೀನು ಮತ್ತು ಮುಂಬೈನಲ್ಲಿ ಫಾರ್ಮ್‌ಹೌಸ್ ಹೊಂದಿದ್ದಾರೆ ಎಂದು ನ್ಯೂಸ್‌ ಫಸ್ಟ್ ವರದಿ ಮಾಡಿದೆ. ಇದನ್ನು ಹೊರತುಪಡಿಸಿ ರಿಯಲ್‌ ಎಸ್ಟೇಟ್‌ನಲ್ಲಿ ಕೂಡ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ನಿರ್ಮಾಣ ಸಂಸ್ಥೆ

ನಾಯಕನಾಗಿ ಯಶಸ್ವಿಯಾದ ಅವರು ಬಳಿಕ ಸಿನಿಮಾ ನಿರ್ಮಾಣಕ್ಕೂ ಕೈಹಾಕಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಎನ್ನುವ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ.

ಜಾಹೀರಾತಿನಲ್ಲೂ ಆದಾಯ

ಸಿನಿಮಾ ಹೊರತಾಗಿಯೂ ಸುದೀಪ್‌ಗೆ ಆದಾಯ ತಂದುಕೊಡುವ ಮತ್ತೊಂದು ಕ್ಷೇತ್ರ ಜಾಹೀರಾತು. ಥಮ್ಸ್ ಅಪ್, ಡೆನ್ವೆರ್ ಸೇರಿದಂತೆ ಹಲವು ಉತ್ಪನ್ನಗಳಿಗೆ ಸಂಬಂಧಿಸಿದ ಜಾಹೀರಾತಿನಲ್ಲಿ ಕೂಡ ಸುದೀಪ್ ನಟಿಸಿದ್ದಾರೆ. ಇದೆಲ್ಲದರಿಂದ ಅವರು ಸುಮಾರು 5 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಎನ್ನಲಾಗಿದೆ.

ಸುದೀಪ್‌ ಬಳಿ ಐಷಾರಾಮಿ ಕಾರುಗಳು

ಸುದೀಪ್‌ ಅವರಿಗೆ ಕಾರುಗಳ ಬಗ್ಗೆ ಸಖತ್ ಕ್ರೇಜ್ ಇದೆ. ಐಷಾರಾಮಿ ಕಾರುಗಳನ್ನು ಹೊಂದುವುದು ಅವರ ನೆಚ್ಚಿನ ಹವ್ಯಾಸ ಕೂಡ ಆಗಿದೆ. ಲಂಬೋರ್ಗಿನಿ ಅವೆಂಟಡಾರ್ ಮತ್ತು ಹಮ್ಮರ್ ಎಚ್‌3 ಕಾರುಗಳನ್ನು ಅವರನ್ನು ಹೊಂದಿದ್ದಾರೆ.

ಮ್ಯಾಕ್ಸ್‌ ಬಗ್ಗೆ ಅಪಾರ ನಿರೀಕ್ಷೆ!

ವಿಕ್ರಾಂತ್ ರೋಣ ಬಳಿಕ ಸುದೀಪ್ ಅವರ ಯಾವ ಸಿನಿಮಾ ಕೂಡ ಬಿಡುಗಡೆಯಾಗಿಲ್ಲ. ಸದ್ಯ ಅವರ ಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಪೂರ್ತಿಯಾಗಿದ್ದು, ಆಗಸ್ಟ್ ಇಲ್ಲ ಸೆಪ್ಟಂಬರ್ ವೇಳೆಗೆ ತೆರೆಗೆ ಬರುವ ಸಾಧ್ಯತೆ ಇದೆ. ಈ ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದ್ದು ಬಾಕ್ಸ್‌ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ನಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+