ಅಪ್ಪು ಹೇಳಿದ ಆ ಒಂದು ಮಾತಿಗೆ ಕನ್ನಡ ಕಲಿಯುತ್ತಿದ್ದೇನೆ: ನಟಿ ಪ್ರಿಯಾ ಆನಂದ್
ಕನ್ನಡದಿಂದಲೇ ಸಿನಿಮಾರಂಗ ಪ್ರವೇಶಿಸಿ, ದೊಡ್ಡ ಸ್ಟಾರ್ ಆದವರು ಕನ್ನಡವನ್ನು ಕಡೆಗಣಿಸುತ್ತಿದ್ದಾರೆ ಎಂದು ಕನ್ನಡಿಗರು ಆಗಾಗ ಬೇಸರ ಹೊರ ಹಾಕುತ್ತಿರುತ್ತಾರೆ. ಆದರೆ ಬೇರೆ ಭಾಷೆಯ ಕಲಾವಿದರು ಆಸೆ ಪಟ್ಟು ಕನ್ನಡ ಕಲಿಯುವುದು ವಿರಳ. ಹೀಗಿರುವಾಗ ಬಹುಭಾಷಾ ನಟಿ ಪ್ರಿಯಾ ಆನಂದ್ ಕನ್ನಡದಲ್ಲಿ ಮಾಡಿದ್ದು ಬೆರಳೆಣಿಕೆಯಷ್ಟು ಸಿನಿಮಾಗಳೇ ಆದರೂ ಕನ್ನಡವನ್ನು ಸುಲಲಿತವಾಗಿ ಮಾತನಾಡುತ್ತಿದ್ದಾರೆ. ನಾನು ಕನ್ನಡ ಕಲಿಯಲು ನಟ ಪುನೀತ್ ರಾಜ್ಕುಮಾರ್ ಅವರೇ ಕಾರಣ ಎಂದೂ ಅಚ್ಚರಿ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ ಪ್ರಿಯಾ.
ಪ್ರಿಯಾ ಆನಂದ್ ಅವರು ಪುನೀತ್ ನಟನೆಯ ರಾಜಕುಮಾರ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಭರ್ಜರಿ ಹಿಟ್ ಕೂಡ ಆಗಿತ್ತು. ಬಳಿಕ ಕನ್ನಡದ ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಸದ್ಯ ಬಹುಭಾಷೆಯ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಕನ್ನಡವನ್ನು ಇಷ್ಟು ಬೇಗ ಸುಲಲಿತವಾಗಿ ಮಾತನಾಡಲು ಕಲಿತಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣವೇನೆಂದು ಅವರೇ ಬಾಯ್ಬಿಟ್ಟಿದ್ದಾರೆ.

ಕನ್ನಡದ ವಿನೋದ್ ಪ್ರಭಾಕರ್ ನಟನೆಯ "ಬಲರಾಮನ ದಿನಗಳು" ಸಿನಿಮಾದಲ್ಲಿ ಪ್ರಿಯಾ ಆನಂದ್ ನಾಯಕಿಯಾಗಿದ್ದು, ಇದೇ ಕಾರ್ಯಕ್ರಮದಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಕೂಡ ಆಗಿದೆ. ನಾನು ಅಪ್ಪುಗೋಸ್ಕರ ಕನ್ನಡ ಕಲಿಯುತ್ತಿದ್ದೇನೆ ಎಂದು ಪ್ರಿಯಾ ಹೇಳಿದ್ದಾರೆ. 'ಎಲ್ಲರಿಗೂ ನಮಸ್ಕಾರ, ನಾನು ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುವೆ. ನಾನು ನನ್ನ ಕೆರಿಯರ್ ಶುರು ಮಾಡಿದ್ದು ತಮಿಳು ಚಿತ್ರರಂಗದಿಂದ, ಈಗ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ತಂದಿದೆ' ಎಂದಿದ್ದಾರೆ.
'ಕನ್ನಡ ಚೆನ್ನಾಗಿ ಅರ್ಥ ಆಗುತ್ತೆ'
'ನಾನು ಆಸ್ಟ್ರೇಲಿಯಾದಲ್ಲಿ ಮೊದಲ ಬಾರಿಗೆ ಪುನೀತ್ ಅವರನ್ನ ರಾಜಕುಮಾರ ಸಿನಿಮಾ ಶೂಟಿಂಗ್ ವೇಳೆ ಭೇಟಿಯಾದೆ. ಆಗ ಅವರು ನನಗೆ ಒಂದು ಮಾತು ಹೇಳಿದ್ರು. ನೀವು ಜಾಸ್ತಿ ಕನ್ನಡ ಸಿನಿಮಾ ಮಾಡಬೇಕು. ಹೆಚ್ಚಾಗಿ ಕನ್ನಡ ಮಾತನಾಡಬೇಕು ಎಂದಿದ್ದರು. ಅದಕ್ಕಾಗಿ ನಾನು ಕನ್ನಡ ಕಲಿತೆ ಎಂದಿದ್ದಾರೆ. ಅಪ್ಪು ಅವರನ್ನು ನಾನು ತುಂಬಾ ಮಿಸ್ ಮಾಡ್ತೀನಿ. ನನಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತೆ. ಆದರೆ ಮಾತನಾಡೋಕೆ ಮನೆಯಲ್ಲಿ ಯಾರೂ ಇಲ್ಲ. ನೀವೆಲ್ಲ ನನ್ನೊಂದಿಗೆ ಕನ್ನಡದಲ್ಲೇ ಮಾತನಾಡಿ. ನನ್ನ ಕನ್ನಡದಲ್ಲಿ ತುಂಬಾ ತಪ್ಪುಗಳಿವೆ ಕ್ಷಮಿಸಿ' ಎಂದಿದ್ದಾರೆ ಪ್ರಿಯಾ ಆನಂದ್.

'ವಿನೋದ್ ಪ್ರಭಾಕರ್ ನನ್ನ ನೆಚ್ಚಿನ ಸಹನಟರಲ್ಲಿ ನೀವೂ ಒಬ್ಬರು. ಉಳಿದ ಕಲಾವಿದರು ಹೇಳುವ ಪ್ರಕಾರ ವಿನೋದ್ಗೆ ಸಿನಿಮಾ ಅಂದ್ರೆ ಹುಚ್ಚು. ಇಂತಹ ನಟನ ಜೊತೆ ಕೆಲಸ ಮಾಡಿದ್ದರಿಂದ ನಾನು ಕೂಡ ಹೆಚ್ಚು ಕಲಿತೆ. ಅದಕ್ಕೆ ವಿನೋದ್ ಅವರಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಪ್ರಿಯಾ ಆನಂದ್ ಅವರು ಕನ್ನಡದಲ್ಲಿ ಮಾತನಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಮಾತೃಭಾಷೆ ಕನ್ನಡ ಅಲ್ಲದಿದ್ದರೂ ಇಷ್ಟು ಮುದ್ದಾಗಿ ಮಾತನಾಡುತ್ತಿದ್ದಾರೆ. ಇವರು ನಿಜಕ್ಕೂ ಕನ್ನಡ ಭಾಷಾಭಿಮಾನಿಗಳಿಗೆ ಮಾದರಿ ಎಂದು ಕೊಂಡಾಡುತ್ತಿದ್ದಾರೆ.
ಪ್ರಿಯಾ ಆನಂದ್ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆದ ನಂತರ ಅವರು 2008ರಲ್ಲಿ ಮಾಡೆಲಿಂಗ್ ವೃತ್ತಿಜೀವನ ಪ್ರಾರಂಭಿಸಿದರು. ನಟಿ ಮತ್ತು ರೂಪದರ್ಶಿಯಾಗಿ ಅವರು ಪ್ರಧಾನವಾಗಿ ತಮಿಳು ಚಲನಚಿತ್ರಗಳ ಮೂಲಕ ತಮ್ಮ ಸಿನಿ ಜರ್ನಿ ಶುರು ಮಾಡಿದರು. ಬಳಿಕ ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ತಮಿಳು ಚಿತ್ರ ವಾಮನನ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಒಂದು ವರ್ಷದ ನಂತರ ಲೀಡರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡ ಹಾಗು ಬಾಲಿವುಡ್ನಲ್ಲೂ ಅವರು ಮಿಂಚುತ್ತಿದ್ದಾರೆ.
-
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ












Click it and Unblock the Notifications