ಸೋನಾಲ್‌ಗೆ ತರುಣ್ ಸುಧೀರ್ ತುಂಬಾ ಇಷ್ಟವಾಗಿದ್ದು ಯಾಕೆ ಗೊತ್ತಾ..? ಇಲ್ಲಿದೆ ಕಾರಣ
ಬೆಂಗಳೂರು, ಆಗಸ್ಟ್ 06: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಬೆಂಗಳೂರಿನ ಮೈಸೂರು ರೋಡ್‌ನಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಇದೇ ಆಗಸ್ಟ್ 11 ರಂದು ತರುಣ್ ಸುಧೀರ್ - ಸೋನಾಲ್ ಮಂಥೆರೊ ಮದುವೆ ಅದ್ಧೂರಿಯಾಗಿ ನಡೆಯಲಿದೆ. ತಮ್ಮ ಪ್ರೀತಿ ಮತ್ತು ಮದುವೆಯ ಬಗ್ಗೆ ತರುಣ್- ಸೋನಾಲ್ ಜೋಡಿ ಈಗಾಗಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಈ ವೇಳೆ ಒಬ್ಬರ ಬಗ್ಗೆ ಮತ್ತೊಬ್ಬರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ತರುಣ್ ಸುಧೀರ್ ಅವರು ಯಾಕೆ ಇಷ್ಟವಾದರು ಎನ್ನುವ ಪ್ರಶ್ನೆಗೆ ಉತ್ತರಿಸಿದ ನಟಿ ಸೋನಾಲ್, ನಾನು ಎಲ್ಲೇ ಮದುವೆ ಆಮಂತ್ರಣ ಕೊಡಲು ಹೋದರೂ ನೀವು ತುಂಬಾ ಲಕ್ಕಿ ಅಂತಾರೆ. ಅವರು ಜಂಟಲ್‌ಮೆನ್. ಒಂದು ಹುಡುಗಿಗೆ ನನ್ನ ಹುಡುಗ ಹೀಗೆ ಇರಬೇಕು ಎನ್ನುವ ಆಸೆ ಇರುತ್ತದೆ ಗೊತ್ತಾ..? ಇವರಿಗೆ ಆ ಎಲ್ಲಾ ಗುಣಗಳು ಇದೆ. ಇವರು ಆ ಎಲ್ಲಾ ಗುಣಗಳು ಇರುವವರು. ಅಹಂಕಾರ ಎನ್ನುವುದಿಲ್ಲ. ಎಲ್ಲರ ಜೊತೆ ತುಂಬಾ ವಿನಯದಿಂದ ನಡೆದುಕೊಳ್ಳುತ್ತಾರೆ ಎಂದರು.

ಅವರು ಹೇಳಿದ ಹಾಗೇ ನಾನು ಸ್ವಲ್ಪ ಆಲೋಚನೆ ಮಾಡುವುದು ಕಮ್ಮಿ. ನನಗೆ ಇವರಂತೆ ಯಾರಾದರೂ ಬೇಕಿತ್ತು. ಗೈಡ್ ಮಾಡುವವರು ಬೇಕಿತ್ತು. Male Ego ಎನ್ನುವುದಿಲ್ಲ. ತುಂಬಾ ಶುದ್ಧವಾದ ಮನಸ್ಸು ಅವರ ಬಗ್ಗೆ ಹೇಳಲು ದೊಡ್ಡ ಪಟ್ಟಿಯೇ ಇದೆ. ಒಟ್ಟಾರೆ ಅವರು ಜಂಟಲ್‌ಮೆನ್. ತರುಣ್ ಅವರನ್ನು ಪಡೆಯಲು ನಾನು ತುಂಬಾ ಅದೃಷ್ಟ ಮಾಡಿದ್ದೆ ಎಂದು ತರುಣ್ ಸುಧೀರ್ ಅವರ ಬಗ್ಗೆ ಸೋನಾಲ್ ಮೆಚ್ಚುಗೆಯ ಮಾತುಗಳನ್ನಾಡಿದರು.
ಇನ್ನು ಸೋನಾಲ್ ಅವರ ಅಡುಗೆ ಆಸಕ್ತಿ ಬಗ್ಗೆ ಮಾತನಾಡಿದ ತರುಣ್, ಇವರು ತುಂಬಾ ಅದ್ಭುತವಾಗಿ ಅಡುಗೆ ಮಾಡುತ್ತಾರೆ. ರುಚಿಯಾದ ಅಡುಗೆ ಮಾಡುತ್ತಾರೆ. ಅವರು ಜಾಸ್ತಿ ತಿನ್ನಲ್ಲ. ತುಂಬಾ ಕಡಿಮೆ ತಿನ್ನುತ್ತಾರೆ. ಆದರೆ ಅಡುಗೆ ಮಾಡಿ ಎಲ್ಲರಿಗೂ ಬಡಿಸಲು ತುಂಬಾ ಇಷ್ಟ ಅವರಿಗೆ. ಹೊಸ ಹೊಸದು ಕಲಿತು ಮಾಡುತ್ತಿರುತ್ತಾರೆ.

ನಾನು ನೋಡಿದ ಮಟ್ಟಿಗೆ ಅವರಿಗೆ ಅಡುಗೆಯಲ್ಲಿ ತುಂಬಾ ಆಸಕ್ತಿ ಇದೆ. ನಾನು ಯಾವಾಗ ಕಾಲ್ ಮಾಡಿ ಎಲ್ಲಿದ್ದೀರಾ ಅಂದರೆ ಅಡುಗೆ ಮನೆಯಲ್ಲೇ ಇದ್ದೀನಿ ಅಂತಾ ಯಾವಾಗಲೂ ಹೇಳುತ್ತಾರೆ. 90% ನಾನು ಕಾಲ್ ಮಾಡಿದಾಗ ಅವರು ಅಡುಗೆ ಮನೆಯಲ್ಲೇ ಇರುತ್ತಾರೆ. ಸೋನಾಲ್ ಅವರಿಗೆ ಅಡುಗೆ ಮಾಡುವುದು ಅಂದರೆ ತುಂಬಾ ಇಷ್ಟ ಎಂದರು.
ಇನ್ನು ತಮ್ಮ ಮದುವೆ ಬಗ್ಗೆ ಮಾತನಾಡಿದ ನಟಿ ಸೊನಾಲ್, ನಾನು ಅಷ್ಟೆಲ್ಲಾ ಯೋಚನೆ ಮಾಡುವುದಿಲ್ಲ. ಮದುವೆಗೆ ಏನೇ ತಯಾರಿ ಇದ್ದರೂ ಇಬ್ಬರು ಜೊತೆಯಲ್ಲಿ ಕುಳಿತು ಮಾಡಿರುವುದು. ಆ ರೀತಿ ಪ್ಲ್ಯಾನ್ ಏನೂ ಇರಲಿಲ್ಲ. ಮೊದಲು ಏನೂ ಇರಲಿಲ್ಲ. ಈಗಲೂ ಈ ರೀತಿನೇ ಆಗಬೇಕು ಅಂತೇನೂ ಇರಲಿಲ್ಲ. ನನಗಿಂತ ಇವರು ಚೆನ್ನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನನ್ನ ಕುಟುಂಬದವರು ಮಂಗಳೂರಿನಲ್ಲೇ ಇದ್ದ ಕಾರಣ ಅಲ್ಲಿಯೂ ಒಂದು ಕಾರ್ಯಕ್ರಮ ಇರುತ್ತದೆ ಎಂದು ಹೇಳಿದರು.












Click it and Unblock the Notifications