Hanumantha Lamani: 'ಹಳ್ಳಿಯಲ್ಲಿ ಹಾಡು ಹಾಡಿ ಕುರಿ ಕಾಯೋದೇ ಬೆಸ್ಟ್'
ಗಾಯಕ ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇರುವಾಗಲೂ ಫೇಮಸ್ ಹೊರ ಬಂದ ಮೇಲೂ ಫೇಮಸ್ ಆಗಿದ್ದಾರೆ. ಅವರ ಮಾತು ಅವರ ಸರಳ ಜೀವನ ಲಕ್ಷಾಂತರ ಜನರ ಹೃದಯದ ಬಾಗಿಲು ತಟ್ಟಿದೆ. ಹನುಮಂತ ಹಾಡಿನ ಮೂಲಕ ಜಯಪ್ರಿಯತೆ ಗಳಿಸಿ ಈಗ ಆಟದಲ್ಲೂ ಸೈ ಎನಿಸಿಕೊಂಡಿದ್ದಾರೆ. ಆದರೆ ಬಿಗ್‌ಬಾಸ್ ಮನೆಯಲ್ಲಿ ಒಬ್ಬ ಸರಳ ಹಾಗೂ ಮುಗ್ಧ ಈ ಮಟ್ಟಕ್ಕೆ ಬಂದಿರುವುದು ಸುಲಭದ ಮಾತಲ್ಲ. ಅದೆಷ್ಟು ಕಷ್ಟದ ಹಾದಿ ಅನ್ನೋದನ್ನು ಹನುಮಂತ ಒಂದೇ ಮಾತಲ್ಲಿ ಹೇಳುತ್ತಾರೆ. ಹಾಗಾದರೆ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಹನುಮಂತ ಏನು ಮಾಡುತ್ತಿದ್ದಾರೆ? ಅವರ ಮುಂದಿನ ಪಯಣ ಎಲ್ಲಿಗೆ? ಎಲ್ಲವನ್ನೂ ತಿಳಿಯೋಣ.
ಕುರಿಗಾಯಿ ಹನುಮಂತ ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗೆದ್ದು ಸಿಕ್ಕಪಾಟ್ಟೆ ಸದ್ದು ಮಾಡುತ್ತಿದ್ದಾರೆ. ಹನುಮಂತ ಗೆದ್ದ ಬಳಿಕ ಸಾಕಷ್ಟು ಸಂದರ್ಶನವೊಂದರಲ್ಲಿ ಮಾತನಾಡಿದ ಹನುಮಂತ ತಮ್ಮ ಮುಂದಿನ ಪಯಣದ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಹನುಮಂತ ಹೇಳಿದ್ದೇನು? ಮುಂದೇನು ಮಾಡಲಿದ್ದಾರೆ ಹನುಮಂತ? ಹನುಮಂತನಿಗೆ ಯಾವ ಕೆಲಸ ಸುಲಭ?

ಕುರಿ ಕಾಯೋದೇ ಬೆಸ್ಟ್ ಎಂದ ಹನುಮಂತ
ಸಂದರ್ಶನವೊಂದರಲ್ಲಿ ಮಾತನಾಡಿದ ಹನುಮಂತ, 'ಕುರಿ ಕಾಯೋದು ಬೇಸ್ಟ್ ಅನಿಸುತ್ತೆ. ಕುರಿ ಕಾಯುವಾಗ ಯಾರೂ ಕೂಡ ಬರ್ತಿರಲಿಲ್ಲ. ಕರಿತಿರಲಿಲ್ಲ. ಆರಾಮಾಗಿ ಇದ್ದೆ. ಈಗ ಬೆನ್ನು ಹತ್ತಿರೋದು ನೋಡಿದ್ರೆ ಅರಾಮಿದ್ದೆ ನಾನು ಅನಿಸುತ್ತದೆ' ಎಂದು ಹನುಮಂತ ಹೇಳಿದ್ದಾರೆ.
ಇನ್ನೂ ಬಿಗ್‌ಬಾಸ್ ಮನೆ ಬಗ್ಗೆ ಮಾತನಾಡಿದ ಹನುಮಂತು, 'ಬಿಗ್‌ಬಾಸ್ ಮನೆ ಅಲ್ಲ ದೇವರ ಗುಡಿ. ನಾನು ಮೂರು ತಿಂಗಳು ಎಲ್ಲರೊಂದಿಗೆ ಹೊಂದಿಕೊಂಡು ಇದ್ದೆ. ಈಗ ಅದು ತುಂಬಾ ನೆನಪಿಗೆ ಬರುತ್ತದೆ. ತುಂಬಾ ಮಿಸ್ ಮಾಡಿಕೊಂಡಿದ್ದೇನೆ ನಾನು ಅದನ್ನು' ಎಂದು ಹೇಳಿದ್ದಾರೆ.
ಬಿಗ್‌ಬಾಸ್ ನಾನಲ್ಲ ಕರ್ನಾಟಕ ಜನತೆ ಗೆದ್ದಿದ್ದು- ಹನುಮಂತ ಮುತ್ತಿನಂತ ಮಾತು
ಜೊತೆಗೆ ಬಿಗ್‌ಬಾಸ್ ಗೆಲುವಿನ ಬಗ್ಗೆ ಮುತ್ತಿನಂತ ಮಾತನ್ನು ಹೇಳಿದ ಹನುಮಂತ, 'ಇದು ನನ್ನ ಗೆಲುವು ಅಲ್ಲ. ಕರ್ನಾಟಕದ ಜನತೆಯ ಗೆಲುವು. ಅವರು ಓಟ್ ಮಾಡಿದ್ದಕ್ಕೆ ನಾನು ಗೆದ್ದೆ. ಆದರೆ ನಿಜವಾಗಲೂ ಗೆದ್ದಿದ್ದು ಕರ್ನಾಟಕದ ಜನತೆ' ಎಂದಿದ್ದಾರೆ ಹನುಮಂತ. ನಾನು ಶನಿವಾರ ಪೂಜಿಸುವ ಹನುಮಂತ ದೇವರ ಆಶೀರ್ವಾದ, ಊರು ಜನರ ಆಶೀರ್ವಾದಿಂದ ನಾನು ಗೆದ್ದೆ. ಶಿಶುನಾಳ ಶರೀಫ ತತ್ವಪದಗಳನ್ನು ಹಾಡುತ್ತಾ ಶನಿವಾರ ದೇವರ ಗುಡಿಗೆ ಹೋಗುತ್ತಿದ್ದೆ. ಅದು ಈಗ ನನ್ನನ್ನು ಇಲ್ಲಿವರೆಗೂ ತಂದು ನಿಲ್ಲಿಸಿದೆ. ಬಿಗ್‌ಬಾಸ್ ಮನೆಗೆ ಹೋಗಿ ಬಂದಿದ್ದಕ್ಕೆ ಖುಷಿ ಆಗಿದೆ ಎಂದಿದ್ದಾರೆ.
ಮದುವೆಗೆ ಎಲ್ಲರನ್ನೂ ಕರೆಯುತ್ತೇನೆ ಬನ್ನಿ- ಹನುಮಂತ
ಇನ್ನೂ ಬಿಗ್‌ಬಾಸ್ ಮನೆಯಲ್ಲಿ ಹನುಮಂತನ ಮದುವೆ ಬಗ್ಗೆ ಭಾರೀ ಚರ್ಚೆ ಶುರುವಾಗಿತ್ತು. ಹನುಮಂತನಿಗೆ ಪ್ರೇಯಸಿ ಇದ್ದಾಳೆ ಅನ್ನೋದು ಕೂಡ ಹೇಳಲಾಗುತ್ತಿತ್ತು. ಆದರೆ ಮದುವೆ ಬಗ್ಗೆ ಕೇಳಿದಾಗ ಹನುಮಂತ ಹೇಳಿದ್ದು ಹೀಗೆ- 'ಮದುವೆ ಮಾಡಲು ಅಮ್ಮ ಅಪ್ಪಗಾ ಹೇಳಿದಿನಿ. ಅವರು ಯಾರ್ ನೊಡ್ತಾರಾ ಅವರನ್ನೇ ನಾನು ಮದುವೆ ಆಗ್ತೀನಿ. ನಿಮಗೂ ಮದುವೆ ಕರೆಯುತ್ತೇನೆ ಎಲ್ಲರೂ ಬನ್ನಿ' ಎಂದು ಹನುಮಂತ ಹೇಳಿದ್ದಾರೆ. ಒಟ್ಟಿನಲ್ಲಿ ವಿನ್ನರ್ ಹನುಮಂತ ಬಿಗ್‌ಬಾಸ್ ಮನೆಯಲ್ಲಿ ಇರುವಾಗ ಫೇಮಸ್ ಆಗಿದ್ದರು ಮನೆಯಿಂದ ಹೊರ ಬಂದ ಮೇಲೂ ಫೇಮಸ್ ಆಗಿದ್ದು ಸುಳ್ಳಲ್ಲ.












Click it and Unblock the Notifications