ನಾಯಿ ತೊಳೆಯುವ ಕೆಲಸ; ಪ್ರತಿ ದಿನ 10 ಸಾವಿರ ಸಂಬಳ: ಇಲ್ಲಿದೆ ಹೊಸ ಬಿಸ್ನೆಸ್ ಐಡಿಯಾ
ಬಿಗ್ ಬಾಸ್ ಸೀಸನ್ 11 ರ ಕಾರ್ಯಕ್ರಮಕ್ಕೆ ರಜತ್ ಹಾಗೂ ಹನುಮಂತ ಲಮಾಣಿ ಅವರು ಎಂಟ್ರಿ ಕೊಟ್ಟ ದಿನದಿಂದಲ್ಲೂ ದೊಡ್ಮನೆಯಲ್ಲಿ ಸಿಕ್ಕಾಪಟ್ಟೆ ಕಾಮಿಡಿ ಇದೆ. ಕಾಮಿಡಿ ಕಲಾವಿದರು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದರೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಸಿಗುತ್ತದೆ. ಅಲ್ಲದೇ ಕಿಚ್ಚನ ಪಂಚಾಯಿತಿಯಲ್ಲೂ ಸಿಕ್ಕಾಪಟ್ಟೆ ಕಾಮಿಡಿ ಇದ್ದೆ ಇರುತ್ತದೆ.
ಬಿಗ್ ಬಾಸ್ ಕನ್ನಡ ಸೀಸನ್ 11' ಶೋನಲ್ಲಿ ಹನುಮಂತ ಮತ್ತು ಧನರಾಜ್ ಅವರು ಭರ್ಜರಿ ಕಾಮಿಡಿ ಮಾಡುತ್ತಿದ್ದಾರೆ. ಆದರೆ ಎಲ್ಲ ಎಪಿಸೋಡ್ನಲ್ಲಿ ಅವರು ನಗಿಸುವುದಿಲ್ಲ. ಒಂದು ವೇಳೆ ಅವರಿಬ್ಬರು ನಗಿಸಲು ನಿಂತರೆ ಡಬಲ್ ಮನರಂಜನೆ ಗ್ಯಾರಂಟಿ. ಇತ್ತ ಮನರಂಜನೆಯ ಜೊತೆಗೆ ಹನುಮಂತ ಅವರು ಒಂದು ಹೊಡ ಬಿಸ್ನೆಸ್ ಐಡಿಯಾವನ್ನ ನೀಡಿದ್ದಾರೆ. ಯಾವುದಪ್ಪ ಆ ಬಿಸ್ನೆಸ್ ಅಂದ್ರೆ ಅದು ನಾಯಿ ತೊಳೆಯುವ ಭರ್ಜರಿ ಬಿಸ್ನೆಸ್ ಐಡಿಯಾ.

ಒಂದು ನಾಯಿಗೆ ಸ್ನಾನ ಮಾಡಿಸಲು 1200 ರೂಪಾಯಿ ಸಂಬಳ. ದಿನಕ್ಕೆ 10 ನಾಯಿಯ ಮೈ ತೊಳೆದರೆ 10 ಸಾವಿರ ಸಂಬಳ ಸಿಗುತ್ತದೆ. ಇಂಥ ಒಂದು ಬೆಸ್ಟ್ ಬಿಸ್ನೆಸ್ ಐಡಿಯಾ ಬಗ್ಗೆ ಚರ್ಚೆ ಆಗಿದ್ದು ಬಿಗ್ ಬಾಸ್ ಮನೆಯ ಒಳಗೆ. ಹನುಮಂತ ಅವರ ತಲೆಗೆ ಈ ಐಡಿಯಾ ಹೊಳೆದಿದೆ. ಆದರೆ, ಈ ಐಡಿಯಾ ಕೇವಲ ಕಾಲ್ಪನಿಕ ಅಲ್ಲ, ಹನುಮಂತ ಅವರು ಹಾಕಿಕೊಂಡಿರುವ ಲೆಕ್ಕಾಚಾರದ ಪ್ರಕಾರ ಪ್ರತಿದಿನ ನಾಯಿಗೆ ಸ್ನಾನ ಮಾಡಿಸುವ ಮೂಲಕ 10 ಸಾವಿರವನ್ನ ಗಳಿಸಬಹುದು ಎಂದು ಹನುಮಂತ ಅವರು ಧನರಾಜ್ ಅವರಿಗೆ ತಿಳಿಸಿದ್ದಾರೆ.
ಐಶ್ವರ್ಯಾ ಸಿಂಧೋಗಿ ಅವರ ಮನೆಯಲ್ಲಿ ಸಿಂಬಾ ಎಂಬ ಶ್ವಾನ ಸಾಕಿದ್ದಾರೆ. ಆ ಶ್ವಾನವನ್ನು ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್ 27ರ ಸಂಚಿಕೆಯಲ್ಲಿ ಐಶ್ವರ್ಯ ಅವರು ಸಿಂಬಾ ಬಗ್ಗೆ ಮಾತನಾಡಿದ್ದಾರೆ. ಆಗ ಧನರಾಜ್ ಮತ್ತು ಹನುಮಂತ ಅವರು ಹಲವು ಪ್ರಶ್ನೆ ಕೇಳಿದ್ದಾರೆ. ನಾಯಿಗೆ ಸ್ನಾನ ಮಾಡಿಸುತ್ತೀರಾ ಎಂಬ ಪ್ರಶ್ನೆಯನ್ನ ಐಶ್ವರ್ಯ ಅವರಿಗೆ ಕೇಳಿದ್ದಾರೆ. ಈ ಪ್ರಶ್ನೆಗೆ ಐಶ್ವರ್ಯಾ ಸಿಂಧೋಗಿ ಅವರು ಒಂದು ಅಚ್ಚರಿಯ ಉತ್ತರ ನೀಡಿದರು. 'ನನಗೆ ಟೈಮ್ ಇರುವುದಿಲ್ಲ. ಸಿಂಬಾಗೆ ಸ್ನಾನ ಮಾಡಿಸಲು ಹೊರಗಡೆಯಿಂದ ಜನ ಬರುತ್ತಾರೆ. ಒಮ್ಮೆ ಸ್ನಾನ ಮಾಡಿಸಲು 1200 ರೂಪಾಯಿ ನೀಡಬೇಕು' ಎಂದು ಐಶ್ವರ್ಯಾ ಹೇಳಿದರು.
ಐಶ್ವರ್ಯಾ ಸಿಂಧೋಗಿ ಅವರ ಈ ಹೇಳಿಕೆ ಹನುಮಂತಗೆ ಸಾಕಷ್ಟು ಅಚ್ಚರಿಗೆ ಕಾರಣವಾಗಿಗೆ. 1200 ರೂಪಾಯಿಗೆ ಒಂದು ನಾಯಿಗೆ ಸ್ನಾನ ಮಾಡಿಸಲು 1200 ರೂಪಾಯಿ ಕೊಡುವ ವಿಷಯ ಕೇಳಿ ಹನುಮಂತ ಅವರಿಗೆ ಅಚ್ಚರಿ ಆಯಿತು. ಆಗ ಅವರು ಒಂದು ಬಿಸ್ನೆಸ್ ಐಡಿಯಾದ ಬಗ್ಗೆ ಮಾತನಾಡಿದರು. ತಾವು ಕೂಡ ನಾಯಿ ತೊಳೆಯುವ ಕೆಲಸ ಮಾಡಬಹುದು. ನಾಯಿ ತೊಳೆಯುತ್ತೇವೆ ಅಂತ ರಸ್ತೆಯಲ್ಲಿ ಕೂಗುತ್ತಾ ಹೋದರೆ ಆಯಿತು. ಒಂದು ನಾಯಿ ತೊಳೆಯಲು 1200, ಹಾಗೇ 10 ನಾಯಿ ತೊಳದರೆ 10 ಸಾವಿರ ಸಿಗುತ್ತದೆ ಎಂದು ಹನುಮಂತ ಅವರು ಸ್ಕೆಚ್ ಹಾಕಿದ್ದಾರೆ. ಮದುವೆ ಆಗುವಾಗ 'ಹುಡುಗ ಏನು ಕೆಲಸ ಮಾಡುತ್ತಾನೆ' ಅಂತ ಹುಡುಗಿ ಕಡೆಯವರು ಕೇಳಿದರೆ, 'ನಾಯಿ ತೊಳೆಯುತ್ತಾನೆ' ಎನ್ನಬಹುದು ಅಂತ ಧನರಾಜ್ ಅವರು ಕಾಮಿಡಿ ಮಾಡಿದ್ದಾರೆ.
ಒಂದು ನಾಯಿಗೆ ಸ್ನಾನ ಮಾಡಿಸಲು 1200 ರೂಪಾಯಿ ಸಂಬಳ. ದಿನಕ್ಕೆ 10 ನಾಯಿಯ ಮೈ ತೊಳೆದರೆ 10 ಸಾವಿರ ಸಂಬಳ ಸಿಗುತ್ತದೆ. ಇಂಥ ಒಂದು ಬೆಸ್ಟ್ ಬಿಸ್ನೆಸ್ ಐಡಿಯಾ ಬಗ್ಗೆ ಚರ್ಚೆ ಆಗಿದ್ದು ಬಿಗ್ ಬಾಸ್ ಮನೆಯ ಒಳಗೆ. ಹನುಮಂತ ಅವರ ತಲೆಗೆ ಈ ಐಡಿಯಾ ಹೊಳೆದಿದೆ. ಈ ಸಂಭಾಷಣೆ ಸಖತ್ ಫನ್ ಆಗಿದೆ.












Click it and Unblock the Notifications