Hanumanta: ಬಿಗ್‌ಬಾಸ್‌ ವಿನ್ನರ್ ಹನುಮಂತ ಬಗ್ಗೆ ರಜತ್ ಹೇಳಿಕೆ ವೈರಲ್!

ಹನುಮಂತ ಲಮಾಣಿ ಅವರು ಬಿಗ್‌ಬಾಸ್‌ ಕನ್ನಡ ಸೀಸನ್ 11ರ ಟ್ರೋಫಿ ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಬಿಗ್‌ಬಾಸ್‌ನಲ್ಲಿ ಇಲ್ಲಿಯವರೆಗೆ ಯಾರೂ ಪಡೆಯದಷ್ಟು ಮತಗಳನ್ನು ಪಡೆಯುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದ್ದಾರೆ. ಆದರೆ, ಹನುಮಂತ ಅವರ ಬಗ್ಗೆ ಹಲವರು ಹೆಮ್ಮೆಪಡುತ್ತಿದ್ದರೆ. ಈಗಲೂ ಕೆಲವರು ಅವರ ಬಗ್ಗೆ ಕಮೆಂಟ್ ಮಾಡುವುದನ್ನು ನಿಲ್ಲಿಸಿಲ್ಲ. ಇದೀಗ ಬಿಗ್‌ಬಾಸ್‌ನ ರನ್ನರ್ ಅಪ್‌ ಆಗಿರುವ ತ್ರಿವಿಕ್ರಮ್ ಅವರ ತಾಯಿ ಅವರು ಹನುಮಂತ ಅವರ ಬಗ್ಗೆ ಹೇಳಿರುವ ವಿಡಿಯೋ ಸಹ ಭಾರೀ ವೈರಲ್‌ ಆಗಿದ್ದು ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ವೈಲ್ಡ್‌ ಕಾರ್ಡ್‌ ಮೂಲಕ ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದ ಮತ್ತೊಬ್ಬ ಸ್ಪರ್ಧಿ ರಜತ್ ಅವರು ಹನುಮಂತ ಅವರ ಬಗ್ಗೆ ಮಾತನಾಡಿದ್ದಾರೆ. ಹನುಮಂತ ಅವರು ಬಿಗ್‌ಬಾಸ್‌ ವಿನ್ನರ್ ಆಗಿರುವ ಬಗ್ಗೆ ಅವರು ಮಾತನಾಡಿದ್ದಾರೆ.

ಈ ಬಾರಿಯ ಬಿಗ್‌ಬಾಸ್‌ನಲ್ಲಿ ಹನುಮಂತ ಅವರು ಈ ಹಿಂದೆ ಯಾರು ಪಡೆಯದಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇದೀಗ ಅವರು ಟ್ರೋಫಿಯೊಂದಿಗೆ ಊರು ತಲುಪಿದ್ದು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಹನುಮಂತ ಅವರು ಬಿಗ್‌ಬಾಸ್‌ ಗೆದ್ದಿರುವುದಕ್ಕೆ ಶೇ 90ರಷ್ಟು ಜನ ಹೆಮ್ಮೆ ಹಾಗೂ ಸಂತೋಷಪಡುತ್ತಿದ್ದರೆ.

Hanumanta Rajat s Statement about Bigg Boss Winner Hanumanta Goes Viral

ಇನ್ನೂ ಶೇ 10ರಷ್ಟು ಜನ ವ್ಯಂಗ್ಯ ಹಾಗೂ ವಿರೋಧ ವ್ಯಕ್ತಪಡಿಸುವುದನ್ನು ಮುಂದುವರಿಸಿದ್ದಾರೆ. ಇದೀಗ ಹನುಮಂತ ಅವರ ಅಭಿಮಾನಿಗಳು ಹನುಮಂತ ಅವರನ್ನು ವಿರೋಧಿಸುವವರಿಗೆ ಸರಿಯಾಗಿ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆ ಹನುಮಂತ ಅವರ ಬಗ್ಗೆ ಕನ್ನಡ ಬಿಗ್‌ಬಾಸ್‌ ಸೀಸನ್ 11ರ ಸ್ಪರ್ಧಿ ರಜತ್‌ ಅವರು ಹನುಮಂತ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಇದೀಗ ರಜತ್ ವಿಡಿಯೋ ವೈರಲ್ ಆಗುತ್ತಿದೆ.

ರಜತ್ ಅವರು ಬಿಗ್‌ಬಾಸ್‌ನಲ್ಲಿ ಮನರಂಜನೆ ಹಾಗೂ ಕೋಪದಿಂದಲೇ ಸುದ್ದಿಯಾಗಿದ್ದರು. ವೈಲ್ಡ್‌ ಕಾರ್ಡ್‌ನ ಮೂಲಕ ಎಂಟ್ರಿಕೊಟ್ಟರೂ ಸಖತ್‌ ಎಂಟರ್ಟೆನ್ಮೆಂಟ್ ಕೊಟ್ಟಿದ್ದರು. ಬಿಗ್‌ಬಾಸ್‌ ಫಿನಾಲೆಗೆ ಬಂದಿದ್ದ ರಜತ್ ಅವರು ಕಪ್‌ ಗೆಲ್ಲಲಿದ್ದಾರೆ ಎಂದೇ ಹಲವರು ಭಾವಿಸಿದ್ದರು. ಆದರೆ ರಜತ್ ಅವರಿಗೆ ಕೂದಲೆಳೆಯಲ್ಲಿ ಅವಕಾಶ ತಪ್ಪಿದೆ. ಆದರೆ ರಜತ್ ಅವರು ಹೊರಗೆ ಬಂದು ಬೇರೆ ಬೇರೆ ಕಾರಣಕ್ಕೆ ಜನರ ಮನಸ್ಸು ಗೆಲ್ಲುತ್ತಿದ್ದಾರೆ. ಇದೀಗ ರಜತ್ ಅವರು ಹನುಮಂತ ಅವರ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಬಿಗ್‌ಬಾಸ್‌ ವಿನ್ನರ್ ಹನುಮಂತ ಅವರ ಬಗ್ಗೆ ರಜತ್ ಅವರು ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ. ಜನ ಹನುಮಂತ ಅವರನ್ನು ಇಷ್ಟಪಟ್ಟಿದ್ದಾರೆ. ಅವರದ್ದು ಒಳ್ಳೆಯ ಪ್ರದರ್ಶನವಾಗಿತ್ತು. ಅವರೇ ಗೆಲ್ಲಲಿದ್ದಾರೆ ಅಂತ ನನಗೆ ಮೊದಲೇ ಗೊತ್ತಾಗಿತ್ತು. ಅವರು ಅವರ ಒಳ್ಳೆಯ ಆಟದಿಂದ ಫಿನಾಲೆ ಟಿಕೆಟ್ ಸಹ ತೆಗೆದುಕೊಂಡಿದ್ದರು ಅಂತ ಹನುಮಂತ ಅವರ ಬಗ್ಗೆ ರಜತ್ ಅವರು ಹೇಳಿದ್ದಾರೆ. ರಜತ್ ಅವರ ವಿಡಿಯೋ ವೈರಲ್ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+