ಹನುಮಾನ್ ಅಂಶ ಸೀಕ್ವೆಲ್ ಬರುವುದು ಪಕ್ಕಾ! ನೀಮ್ ಕರೋಲಿ ಬಾಬಾ ಅವರ ಆಧ್ಯಾತ್ಮಿಕ ಪಯಣದ ಮತ್ತಷ್ಟು ರೋಚಕ ಕಥೆ ತೆರೆಗೆ

ಆಗಸ್ಟ್ 7 ರಂದು ತೆರೆಕಂಡ ಹನುಮಾನ್ ಅಂಶ ಸಿನಿಮಾ ಸದ್ದಿಲ್ಲದೆ ಥಿಯೇಟರ್‌ಗೆ ಲಗ್ಗೆಯಿಟ್ಟರೂ, ಇದೀಗ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಯಾವುದೇ ದೊಡ್ಡ ಸ್ಟಾರ್ ನಟರಿಲ್ಲದೆ, ಕೇವಲ ಕಂಟೆಂಟ್ ಹಾಗೂ ಮೌತ್ ಟಾಕ್ ಮೂಲಕವೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ 60 ಕೋಟಿ ರೂ. ಗಡಿ ದಾಟಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ, ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಅಭಿಮಾನಿಗಳಿಗೆ ಬಹುದೊಡ್ಡ ಸಿಹಿಸುದ್ದಿಯೊಂದನ್ನ ನೀಡಿದ್ದಾರೆ.

ಅದೇ ಹನುಮಾನ್ ಅಂಶ ಚಿತ್ರದ ಮುಂದುವರಿದ ಭಾಗ, ಅಂದರೆ ಸೀಕ್ವೆಲ್ ಬರುವುದು ಖಚಿತವಾಗಿದೆ. ಭಾರತೀಯ ಚಿತ್ರರಂಗದಲ್ಲಿ ಪೌರಾಣಿಕ ಹಾಗೂ ಆಧ್ಯಾತ್ಮಿಕ ಕಥೆಗಳಿಗೆ ಯಾವಾಗಲೂ ವಿಶೇಷ ಸ್ಥಾನವಿದ್ದು, ಈ ಸಿನಿಮಾ ಕೂಡ ಅದೇ ಹಾದಿಯಲ್ಲಿ ಸಾಗಿ ಪ್ರೇಕ್ಷಕರ ಮನಗೆದ್ದಿದೆ.

Hanuman Ansh 2 Confirmed Upcoming Sequel to Explore Neem Karoli Baba s Epic Spiritual Journey

ಹನುಮಾನ್ ಅಂಶ ಸೀಕ್ವೆಲ್: 'ನೀಮ್ ಕರೋಲಿ ಬಾಬಾ' ಕಥೆಯ ಮುಂದುವರಿದ ಭಾಗ

ಚಿತ್ರದ ಕಥೆಯು ನೀಮ್ ಕರೋಲಿ ಬಾಬಾ ಅವರ ಜೀವನವನ್ನ ಆಧರಿಸಿದ್ದು, ಹನುಮಾನ್ ಅಂಶ ಸಿನಿಮಾದ ಅಂತ್ಯದಲ್ಲೇ ಮುಂದುವರಿದ ಭಾಗದ ಸುಳಿವು ನೀಡಲಾಗಿತ್ತು. ಇದೀಗ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ನೀಮ್ ಕರೋಲಿ ಬಾಬಾ ಅವರ ಜೀವನ ಚರಿತ್ರೆಯನ್ನ ಮತ್ತಷ್ಟು ಆಳವಾಗಿ ಪರಿಚಯಿಸಲು ಎರಡನೇ ಭಾಗದ ಸಿದ್ಧತೆಗಳು ಈಗಾಗಲೇ ಭರದಿಂದ ಸಾಗುತ್ತಿವೆ.

ಆಗ್ರಾದ ಮಲ್ಟಿಪ್ಲೆಕ್ಸ್ ಒಂದರಲ್ಲಿ ಇತ್ತೀಚೆಗೆ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ ನಿರ್ದೇಶಕ ವಿಶಾಲ್ ಚತುರ್ವೇದಿ, ಚಿತ್ರದ ಮುಂದಿನ ಭಾಗದ ಬಗ್ಗೆ ಹಲವು ರೋಚಕ ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಪ್ರೇಕ್ಷಕರು ನೀಡುತ್ತಿರುವ ಅದ್ಭುತ ಪ್ರತಿಕ್ರಿಯೆಯೇ ನಮ್ಮ ಈ ಮುಂದಿನ ಯೋಜನೆಗೆ ದೊಡ್ಡ ಪ್ರೇರಣೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ನೀಮ್ ಕರೋಲಿ ಬಾಬಾ ಆಧ್ಯಾತ್ಮಿಕ ಪಯಣವೇ ಚಿತ್ರದ ಕಥಾಹಂದರ

ಮುಂಬರುವ ಸೀಕ್ವೆಲ್‌ನಲ್ಲಿ ನೀಮ್ ಕರೋಲಿ ಬಾಬಾ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದ ವಿವಿಧ ಸ್ಥಳಗಳಿಗೆ ಪ್ರೇಕ್ಷಕರನ್ನ ಕರೆದೊಯ್ಯಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ. ಕಥೆಯು ಮೊದಲಿಗೆ ಬಾಬಾ ಅವರ ಜನ್ಮಸ್ಥಳವಾದ ಫಿರೋಜಾಬಾದ್ ಜೊತೆಗಿನ ಅವರ ನಂಟನ್ನು ಚಿತ್ರದಲ್ಲಿ ಅದ್ಭುತವಾಗಿ ಕಟ್ಟಿಕೊಡಲಿದೆ.

ಆನಂತರ ಕಥೆಯು ಆಗ್ರಾ, ಮಥುರಾ ಸೇರಿದಂತೆ ಅವರ ಆಧ್ಯಾತ್ಮಿಕ ಪಯಣದ ಹಾದಿಯಲ್ಲಿ ಬರುವ ಪ್ರಮುಖ ಸ್ಥಳಗಳ ಸುತ್ತ ಸಾಗಲಿದೆ. ಮೊದಲ ಭಾಗದಲ್ಲಿ ಹೇಳಲಾಗದ ಬಾಬಾ ಅವರ ಜೀವನದ ಇನ್ನೂ ಅನೇಕ ಪ್ರಮುಖ ಘಟ್ಟಗಳನ್ನ ಎರಡನೇ ಭಾಗದಲ್ಲಿ ತೋರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಅವರ ಆಧ್ಯಾತ್ಮಿಕ ಶಕ್ತಿ, ಸಮಾಜಕ್ಕೆ ನೀಡಿದ ಕೊಡುಗೆಗಳು ಹಾಗೂ ಭಕ್ತರೊಂದಿಗಿನ ಒಡನಾಟದ ಕುರಿತು ಮತ್ತಷ್ಟು ಬೆಳಕು ಚೆಲ್ಲುವ ಉದ್ದೇಶವನ್ನ ಚಿತ್ರತಂಡ ಹೊಂದಿದೆ ಎಂದು ವಿಶಾಲ್ ವಿವರಿಸಿದ್ದಾರೆ.

ಮೂರು ಭಾಗಗಳಲ್ಲಿ ಬರಲಿದೆ ಹನುಮಾನ್ ಅಂಶ ಟ್ರೈಲಾಜಿ

2026ರ ಫೆಬ್ರವರಿ 20ರಂದು ಈ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್ ಘೋಷಣೆಯಾದಾಗಲೇ, ಇದೊಂದು ಟ್ರೈಲಾಜಿ ಅಂದರೆ ಮೂರು ಭಾಗಗಳ ಸರಣಿ ಎಂದು ಚಿತ್ರತಂಡ ಸ್ಪಷ್ಟಪಡಿಸಿತ್ತು. ಅದರಂತೆ, ಪ್ರಸ್ತುತ ಬಿಡುಗಡೆಯಾಗಿರುವ ಹನುಮಾನ್ ಅಂಶ ಕೇವಲ ಒಂದು ದೊಡ್ಡ ಕಥೆಯ ಮೊದಲ ಅಧ್ಯಾಯವಷ್ಟೇ.

ಈ ಸಿನಿಮಾದ ಕಥೆಯು ನಿರ್ದೇಶಕ ವಿಶಾಲ್ ಚತುರ್ವೇದಿ ಅವರೇ ಸ್ವತಃ ಬರೆದಿರುವ 'ಡಿವೈನ್ ಡಿಟೂರ್' ಎಂಬ ಪುಸ್ತಕದಿಂದ ಪ್ರೇರಿತವಾಗಿದೆ. ಈ ಪುಸ್ತಕದ ಆಧಾರದ ಮೇಲೆ ನೀಮ್ ಕರೋಲಿ ಬಾಬಾ ಅವರ ಸಂಪೂರ್ಣ ಜೀವನ ಚರಿತ್ರೆಯನ್ನು ಮೂರು ಭಾಗಗಳಲ್ಲಿ ಬೆಳ್ಳಿತೆರೆಯ ಮೇಲೆ ತರುವ ಯೋಜನೆ ರೂಪಿಸಲಾಗಿದೆ. ಪ್ರತಿಯೊಂದು ಭಾಗವೂ ಬಾಬಾ ಅವರ ಜೀವನದ ವಿಭಿನ್ನ ಮಜಲುಗಳನ್ನ ಅನಾವರಣಗೊಳಿಸಲಿದೆ.

ಹನುಮಾನ್ ಅಂಶ ಬಾಕ್ಸ್ ಆಫೀಸ್ ಕಲೆಕ್ಷನ್

ಇಂದಿನ ದಿನಗಳಲ್ಲಿ ಯಾವುದೇ ಕಮರ್ಷಿಯಲ್ ಅಂಶಗಳಿಲ್ಲದಿದ್ದರೂ, ಕೇವಲ ಕಂಟೆಂಟ್ ಹಾಗೂ ಪ್ರೇಕ್ಷಕರ ವಿಮರ್ಶೆಯಿಂದಲೇ ಹಿಂದಿ ಭಾಷೆಯ ಈ ಹನುಮಾನ್ ಅಂಶ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಲೂಟಿ ಮಾಡುತ್ತಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಅದ್ಭುತ ಪ್ರತಿಕ್ರಿಯೆ ನೀಡುತ್ತಿರುವುದು ಚಿತ್ರದ ಗಳಿಕೆಗೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ.

ಬಾಕ್ಸ್ ಆಫೀಸ್ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿಗಳ ಪ್ರಕಾರ, ಈ ಸಿನಿಮಾ ಇದುವರೆಗೆ ಭಾರತದಲ್ಲಿ 63.82 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಹಾಗೆಯೇ, ಭಾರತದಲ್ಲಿಯೇ ಒಟ್ಟು 54.13 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.

ಒಟ್ಟಿನಲ್ಲಿ, ನೀಮ್ ಕರೋಲಿ ಬಾಬಾ ಅವರ ಜೀವನ ಚರಿತ್ರೆ ಪ್ರೇಕ್ಷಕರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ಸೀಕ್ವೆಲ್ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+