Gold Suresh: ಅದೆಲ್ಲ ಸುಳ್ಳು! ನಾನು ಹೊರಬರಲು ಇದೇ ಕಾರಣ ಎಂದ ಗೋಲ್ಡ್ ಸುರೇಶ್

ಬಿಗ್ ಬಾಸ್ ಕನ್ನಡ 11ನೇ ಆವೃತ್ತಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಸ್ಪರ್ಧಿ ಗೋಲ್ಡ್ ಸುರೇಶ್ ದಿಢೀರ್ ಎಂದು ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದರು. ವೈಯಕ್ತಿಕ ಕಾರಣದಿಂದ ಅವರು ಮನೆಯಿಂದ ಹೊರಬಂದಿದ್ದರೂ ನಿಜಕ್ಕೂ ಏನಾಗಿದೆ ಎನ್ನುವುದು ಬಹಿರಂಗವಾಗಿರಲಿಲ್ಲ. ತಂದೆಗೆ ಹುಷಾರಿಲ್ಲ, ವ್ಯವಹಾರದಲ್ಲಿ ನಷ್ಟವಾಗಿದೆ, ಮೈತುಂಬಾ ಸಾಲ ಮಾಡಿಕೊಂಡಿದ್ದಾರೆ ಎನ್ನುವ ವದಂತಿಗಳು ಹರಿದಾಡಿದ್ದವು.

ನನಗೇನೂ ಆಗಿಲ್ಲ ಚನ್ನಾಗಿದ್ದೇನೆ ಎಂದು ಗೋಲ್ಡ್ ಸುರೇಶ್ ತಂದೆ ಸ್ಪಷ್ಟನೆ ನೀಡಿದ್ದರು. ಆದರೆ ಗೋಲ್ಡ್ ಸುರೇಶ್ ನಿಜಕ್ಕೂ ಹೊರಬಂದಿದ್ದೇಕೆ ಎನ್ನುವ ಸಂಗತಿ ಇದೀಗ ಹೊರಬಿದ್ದಿದೆ. ಸ್ವತಃ ಗೋಲ್ಡ್ ಸುರೇಶ್ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

gold suresh reveals reason leaving bigg boss

ಗೋಲ್ಡ್ ಸುರೇಶ್ ಹೇಳಿದ್ದೇನು?

ಕಲರ್ಸ್ ಕನ್ನಡ ವಾಹಿನಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದಿರುವ ಗೋಲ್ಡ್ ಸುರೇಶ್ ತಾನು ಶೋನಿಂದ ಹೊರ ಬರಲು ಕಾರಣವೇನು ಎಂದು ಬಹಿರಂಗಪಡಿಸಿದ್ದಾರೆ. ಕಲರ್ಸ್ ಕನ್ನಡ ನನಗೆ ಬಿಗ್‌ ಬಾಸ್‌ನಲ್ಲಿ ಅವಕಾಶ ಕೊಟ್ಟಿದ್ದು ರೋಮಾಂಚನವಾಗಿತ್ತು. ಅವಕಾಶ ಸಿಕ್ಕಿದ್ದಕ್ಕೆ ನನಗೆ ತುಂಬಾ ಖುಷಿಯಾಗಿದೆ. ಬಿಗ್ ಬಾಸ್ ಮನೆಗೆ ಹೋಗಿ ಉತ್ತಮವಾಗಿ ಆಡಿದೆ ಎಂದು ಹೇಳಿದರು.

ನನ್ನ ವ್ಯವಹಾರಗಳನ್ನು ನಾನೇ ಮೊದಲಿನಿಂದಲೂ ನೋಡಿಕೊಳ್ಳುತ್ತಿದ್ದೆ. ಬಿಗ್ ಬಾಸ್ ಮನೆಗೆ ಬರುವಾಗ ನನ್ನ ವ್ಯವಹಾರಗಳನ್ನು ನೋಡಿಕೊಳ್ಳಲು ನನ್ನ ಹೆಂಡತಿಗೆ ವಹಿಸಿದ್ದೆ. ಆದರೆ ಅವರಿಗೆ ವ್ಯವಹಾರದ ಒತ್ತಡವನ್ನು ನಿಭಾಯಿಸಲು ಆಗಲಿಲ್ಲ. ಅವರಿಗೆ ಕಷ್ಟವಾದ ಕಾರಣ ನಾನು ಅನಿವಾರ್ಯವಾಗಿ ಹೊರಬರಬೇಕಾಯಿತು ಎಂದು ಹೇಳಿದ್ದಾರೆ.

ನಾನು ಯಾರನ್ನೂ ದೂಷಿಸುವುದಿಲ್ಲ, ವ್ಯವಹಾರದಲ್ಲಿ ತೊಂದರೆಯಾಗುತ್ತಿದೆ ಎಂದು ಹೊರಬಂದೆ. ಈಗ ಎಲ್ಲಾ ಸರಿ ಹೋಗಿದೆ, ನಾನು ಚನ್ನಾಗಿದ್ದೇನೆ ಯಾವ ತೊಂದರೆಯೂ ಇಲ್ಲ. ನನ್ನ ಬಗ್ಗೆ ಹಲವು ರೀತಿಯ ಸುದ್ದಿಗಳು ಬರುತ್ತಿವೆ ಆದರೆ ನಿಜ ಇಷ್ಟೇ ಎಂದಿದ್ದಾರೆ.

ಬಿಗ್ ಬಾಸ್ ಮನೆಗೆ ತುಂಬಾ ಕಲಿಸಿದೆ, ನನಗೆ ಅವಕಾಶ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದ. ನನಗೆ ವೋಟ್ ಮಾಡಿದ ಮಹಾಜನತೆಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ನಾನು ಬಿಗ್ ಬಾಸ್ ಮನೆಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಸ್ಪರ್ಧಿಗಳಾದ ಹನುಮಂತು, ಧನರಾಜ್, ಗೌತಮಿ ಸೇರಿದಂತೆ ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರ ಜೊತೆ ಉತ್ತಮ ನೆನಪುಗಳಿವೆ. ನಾನು ರೈತನ ಮಗ, ಬಿಗ್ ಬಾಸ್ ಮನೆಯಲ್ಲಿನ ಟಾಸ್ಕ್‌ಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಈಗ ಸ್ವಲ್ಪ ಆರೋಗ್ಯ ಸಮಸ್ಯೆ ಕೂಡ ಇದೆ ಆದಷ್ಟು ಬೇಗ ಸರಿ ಹೋಗುತ್ತೇನೆ. ಮತ್ತೆ ಅವಕಾಶ ಸಿಕ್ಕರೆ ಬಿಗ್ ಬಾಸ್ ಮನೆಗೆ ಹೋಗುತ್ತೇನೆ.

ನನ್ನ ಹೆಂಡತಿಗೆ ಕಷ್ಟವಾಗುತ್ತಿದೆ ಎನ್ನುವ ಕಾರಣಕ್ಕೆ ಮಾತ್ರ ನಾನು ಶೋನಿಂದ ಹೊರಬಂದಿದ್ದೇನೆ ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ. ಯಾವುದೇ ವದಂತಿಗಳನ್ನು ನಂಬಬೇಡಿ. ನನ್ನ ವ್ಯವಹಾರ ಚನ್ನಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+