Goat cinema controversy: ಬೆಂಗಳೂರಿನಲ್ಲಿ ಈ‌ ಕಾರಣಕ್ಕೆ ವಿರೋಧ, ಏನದು ?

Goat cinema controversy: ತಮಿಳಿನ 'ದಳಪತಿ' ವಿಜಯ್ ನಟನೆಯ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' (GOAT) ಚಿತ್ರವು ಇದೇ 5ರಿಂದ ತೆರೆಕಂಡಿದೆ. ಈ ಚಿತ್ರಕ್ಕೆ ಕರ್ನಾಟಕದಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಕನ್ನಡಿಗರು ಈ ಒಂದು ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಿಳು ಸೇರಿದಂತೆ ಪರಭಾಷ ಚಿತ್ರಗಳನ್ನು ಕನ್ನಡಿಗರು ನೋಡುವುದು ಉಳಿದ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು. ಅಂದರೆ, ಬೇರೆ ರಾಜ್ಯಗಳಲ್ಲಿ ಪರಭಾಷೆಯ ಚಿತ್ರಗಳು ಬಿಡುಗಡೆಯಾದರೂ ಕರ್ನಾಟಕದಂತೆ ಟ್ರ್ಯಾಕ್ಷನ್‌ ಪಡೆದುಕೊಳ್ಳುವುದಿಲ್ಲ.

ಸಾಮಾನ್ಯವಾಗಿ ಆಯಾ ರಾಜ್ಯದಲ್ಲಿ ಆಯಾ ರಾಜ್ಯದ ಭಾಷೆಯ ಚಿತ್ರಗಳೇ ಹೆಚ್ಚು ನೋಡುತ್ತಾರೆ. ಕರ್ನಾಟಕದಲ್ಲಿ ಇದು ತುಸು ಭಿನ್ನ. ಇನ್ನು ಬೆಂಗಳೂರಿನಲ್ಲಿ ಎಲ್ಲಾ ಭಾಷಿಕರು ಇರುವುದರಿಂದ ಇಲ್ಲಿ ಎಲ್ಲಾ ಭಾಷೆಯ (ದಕ್ಷಿಣ ಭಾರತ ಮತ್ತು ಉತ್ತರ ಭಾರತದ) ಚಿತ್ರಗಳು ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಾಣುವುದು ಸಹ ಇದೆ. ಆದರೆ, ತಮಿಳು ನಟ ವಿಜಯ್‌ ಅವರ 'The Greatest of All Time' ಸಿನಿಮಾ ಕರ್ನಾಟಕದ ಬೆಂಗಳೂರಿನ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದಕ್ಕೆ ಹಾಗೂ ಕನ್ನಡದ ಸಿನಿಮಾಗಳಿಗೆ ಪ್ರಾಮುಖ್ಯತೆ ಸಿಗದೆ ಇರುವುದಕ್ಕೆ ವಿರೋಧ ವ್ಯಕ್ತವಾಗಿದೆ.

Goat film Kannadigas are upset about what

ಟಿಕೆಟ್ ಸೋಲ್ಡ್‌ ಔಟ್‌ಗೆ ಬೇಸರ: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗಿಂತ ತಮಿಳು ಸಿನಿಮಾಗಳೇ ಹೆಚ್ಚಾದವೇ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಕನ್ನಡದ ನಿರ್ದೇಶಕ ರವೀಂದ್ರ ವೆಂಶಿ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದಕ್ಕೆ ಹಲವರು ದನಿಗೂಡಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿರುವ ರವೀಂದ್ರ ವೆಂಶಿ ಅವರು, ವೀರಭದ್ರೇಶ್ವರ, ನವರಂಗ್, ಸಿನ ಫೈಲ್, ಪ್ರಸನ್ನ, ವಿಕ್ಟರಿ,ವೆಂಕಟೇಶ್ವರ,ಬೃಂದಾ ಹಾಗೂ ಶ್ರೀನಿವಾಸ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಈಗಾಗಲೇ ಬೆಳಗಿನ ಜಾವ 4 ಗಂಟೆಯ ಪ್ರದರ್ಶನದ ಟಿಕೆಟ್‌ಗಳು ಸೋಲ್ಡ್ ಔಟ್ ಆದ ಚಿತ್ರಮಂದಿರಗಳ ಸಂಖ್ಯೆ. ಅವುಗಳ ಟಿಕೆಟ್ ಬೆಲೆ ಕಡಿಮೆಯಿಲ್ಲ. ತೀರಾ ಕಡಿಮೆ ಎನ್ನುವುದಾದರೆ, 250ರೂಪಾಯಿಯಿಂದ 2000 ಸಾವಿರ ರೂಪಾಯಿಯ ವರೆಗೆ ಹೆಚ್ಚಿನ ದರ ಇದೆ. ಇನ್ನೂ ಕೆಲವುಕಡೆ ಬೆಳಿಗ್ಗೆ 7.30 ರ ಪ್ರದರ್ಶನಗಳೂ ಸೋಲ್ಡ್ ಔಟ್ ಆಗಿದೆ. ಆದರೆ, ಕನ್ನಡ ಚಿತ್ರಗಳಿಗೆ ಈ ರೀತಿಯ ಬೇಡಿಕೆ ಇಲ್ಲ ಎನ್ನುವಂತಹ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಇದಕ್ಕೆ ಹಲವು ಕನ್ನಡಿಗರು ದನಿ ಗೂಡಿಸಿದ್ದಾರೆ.

ಸಿನಿಮಾದಲ್ಲಿನ ಅದ್ಧೂರಿತನ ಮತ್ತು ಸ್ಟಾರ್ ಪವರ್ - ಬೆಂಗಳೂರಿನ ಮೂಲೆ ಮೂಲೆಯಲ್ಲಿನ ಚಿತ್ರಮಂದಿರಗಳಲ್ಲಿನ ಬೆಳಗಿನ ಜಾವದ ಟಿಕೆ ಟ್‌ಗಳು ಸೋಲ್ಡ್ ಆಗುವಂತೆ ಮಾಡಿವೆ. ಬೇಸರದ ವಿಷಯವೆಂದರೆ - ಚೆನ್ನೈನಲ್ಲಿ ಮೊದಲ ಪ್ರದರ್ಶನ ಪ್ರಾರಂಭವಾಗುತ್ತಿರುವುದೇ ಬೆಳಿಗ್ಗೆ 9.30ಕ್ಕೆ. ಚೆನ್ನೈಗಿಂತ ಬೆಂಗಳೂರಿನಲ್ಲಿ ತಮಿಳು ಸಿನಿಮಾಗೆ ಈ ರೀತಿ ಕ್ರೆಜ್‌ ಸೃಷ್ಟಿಯಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ 'ಗೋಟ್' ಬಾಚಿಕೊಂಡ ಮೊತ್ತವೆಷ್ಟು ?

ಗೋಟ್‌ ಸಿನಿಮಾದ ವಿತಕರಿಗೆ ಕರ್ನಾಟಕದಿಂದ ಭಾರೀ ಮೊತ್ತವೇ ಸಿಕ್ಕಿದೆ. ಈ ಸಿನಿಮಾ ಕರ್ನಾಟಕದಲ್ಲಿ ದಾಖಲೆಐ ಮೊತ್ತವನ್ನು ಬಾಚಿಕೊಂಡಿದೆ. ಒಂದು ಅಂದಾಜಿನ ಪ್ರಕಾರ 8.50 ರಿಂದ 9 ಕೋಟಿ ರೂಪಾಯಿ ಮೊತ್ತ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಟಿಕೆಟ್‌ ಮೊತ್ತವೂ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+