ಯಶ್ ಜೊತೆ ರೊಮ್ಯಾನ್ಸ್‌ಗೆ ಸಿದ್ಧಳಾದ ಟೀಂ ಇಂಡಿಯಾ ಸ್ಟಾರ್ & ಆರ್‌ಸಿಬಿ ಮಾಜಿ ಕ್ರಿಕೆಟಿಗನ ಪತ್ನಿ

ಬೆಂಗಳೂರು, ನವೆಂಬರ್, 24: ಕ್ರಿಕೆಟಿಗರು ಸಿನಿ ತಾರೆಯರನ್ನು ಅಥವಾ ಸಿನಿ ತಾರೆಯರರು ಕ್ರಿಕೆಟಿಗರನ್ನು ವಿವಾಹ ಆಗುವುದು ಹೊಸೆ ವಿಚಾರವೇನಲ್ಲ. ಸಾಮಾನ್ಯವಾಗಿ ಬಹುತೇಕ ನಟಿಯರು ಕ್ರಿಕೆಡಿಗರನ್ನು ಮದುವೆಯಾದ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿರುವ ಉದಾಹರಣೆಗಳಿವೆ. ಆದರೆ ಇದೀಗ ಇಕ್ಕೆ ತದ್ವಿರುದ್ಧವಾಗಿ ಇಂಡಿಯಾ ಕ್ರಿಕೆಟಿಗ & ಮಾಜಿ ಆರ್‌ಸಿಬಿ ಸ್ಟಾರ್ ಪತ್ನಿ ಚಿತ್ರರಂಗ ಪ್ರವೇಶಿಸಿ ಗಮನ ಸೆಳೆದಿದ್ದಾರೆ.

ಇತ್ತೀದಿನ ದಿನಗಳಲ್ಲಿ ಕಾಲಮಾನವೇ ಬದಲಾಗಿಬಿಟ್ಟಿದೆ. ಎಲ್ಲಿ ನೋಡಿದರೂ ಬರೀ ವಿಚ್ಛೇಧನ ವಿಚರಾಗಳೇ ಕೇಳಿಬರುತ್ತಿವೆ. ಅದರಲ್ಲೂ ಇಂತಹ ಘಟನೆಗಳು ಹೆಚ್ಚಾಗಿ ನಡೆಯುವುದೇ ಸಿನಿಮಾ ರಂಗ, ಉದ್ಯಮ, ಕ್ರಿಕೆಟ್‌ನಲ್ಲಿ ಹೆಸರು ಮಾಡಿದವರ ಮಧ್ಯೆಯೇ ಹೆಚ್ಚಾಗಿ ನಡೆಯುತ್ತವೆ. ಇಂತಹ ಕ್ಷೇತ್ರಗಳಿರುವವರು ಯಾವುದೋ ಒಂದು ವಿಚಾರಕ್ಕೆ ಜಗಳ ಮಾಡಿಕೊಂಡು ಕೊನೆ ವಿಚ್ಚೇಧನ ಮಟ್ಟಕ್ಕೆ ಇಳಿದಿರುವ ಉದಾಹರಣೆಗಳಿವೆ. ಇಂತಹದ್ದ ನಡುವೆ ಕೆಲವರು ವಿಚ್ಛೇಧನ ಹಂತಕ್ಕಿಳಿದು ಮತ್ತೆ ಒಂದಾದ ಘಟನೆಗಳು ನಡೆದಿವೆ.

Former RCB Cricketer s Wife Her Entry into Film Industry Know details

ಇಂತಹವರ ನಡುವೆ ಯಾವುದೇ ವೈಮನಸ್ಸು ಇಲ್ಲದೆ ಜೀವನ ಸಾಗಿಸುತ್ತಿರುವ ಹಲವು ಕ್ರಿಕೆಟ್ ಆಟಗಾರರು, ಸಿನಿ ತಾರೆಯರನ್ನು ಕಾಣಬಹುದಾಗಿದೆ. ಇನ್ನು ಇದೀಗ ಟೀಂ ಇಂಡಿಯಾ ತಂಡದ ಸ್ಟಾರ್‌ ಕ್ರಿಕೆಟಿಗ ಮತ್ತು ಮಾಜಿ ಆರ್‌ಸಿಬಿ ಸ್ಟಾರ್‌ ಸ್ಪಿನ್ನರ್ ಯಜುವೇಂದ್ರ ಚಹಾಲ್‌ ಪತ್ನಿ ಧನಶ್ರೀ ತೆಲುಗು ಸಿನಿಮಾದ ಮೂಲಕ ಸಿನಿ ಚಿತ್ರರಂಗ ಪ್ರವೇಶ ಮಾಡಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಇವರು ಸಾಮಾಜಿಕ ಜಾಲತಾಣದಲ್ಲು‌ ಮೀಡಿಯಾ ಸ್ಟಾರ್‌ ಆಗಿ ಗಮನ ಸೆಳೆದಿದ್ದಾರೆ.

ಉತ್ತಮ ಡ್ಯಾನ್ಸರ್‌ ಆಗಿರುವ ಧನುಶ್ರೀ ಅವರು ತಮ್ಮ ನೃತ್ದ ವಿಡಿಯೋಗಳನ್ನು ಇನ್ಸ್ಟಾಗ್ರಾಂ,ಯೂಟ್ಯೂಬ್‌​ನಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಅವರಿಗೆ ಅಭಿಮಾನಿಗಳ ಬಳಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಕೆಲವು ರಿಯಾಲಿಟಿ ಶೋಗಳಲ್ಲೂ ಧನಶ್ರೀ ಅವರು ಭಾಗವಹಿಸಿದ್ದಾರೆ. ಇದೀಗ ನೃತ್ಯವನ್ನೇ ಪ್ರಮುಖ ಆಗಿಸಿಕೊಂಡಿದ್ದು, ಆಕಾಶಂ ದಾಟಿ ವಸ್ತಾವಾ ಸಿನಿಮಾಗೆ ನಾಯಕಿಯಾಗಿ ಟಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ.

ಖ್ಯಾತ ಡ್ಯಾನ್ಸ್‌ ಮಾಸ್ಟರ್‌ ಯಶ್‌ ಈ ಸಿನಿಮಾದಲ್ಲಿ ನಾಯಕರಾಗಿ ನಟನೆ ಮಾಡುತ್ತಿದ್ದು, ದಿಲ್‌ ರಾಜು ಪ್ರೊಡಕ್ಷನ್‌ ಹೌಸ್‌ ಬ್ಯಾನರ್ ಅಡಿಯಲ್ಲಿ ಹರ್ಷಿತ್‌ ರೆಡ್ಡಿ ಮತ್ತು ಹನ್ಸಿತಾ ರೆಡ್ಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಶಶಿಕೂಮಾರ್ ಮುತ್ತುಲೂರಿ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ.

ಈ ಚಿತ್ರದ ಕೆಲವು ದೃಶ್ಯಗಳನ್ನು ಮುಂಬೈನಲ್ಲಿ ಚಿತ್ರೀಕರಣ ಮಾಡಲಾಗಿದೆ ಇನ್ನುಳಿದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಲಿದೆ. ಇನ್ನು ಸಿನಿಮಾದಲ್ಲಿ ಧನುಶ್ರೀ ಜೊತೆಗೆ ಮತ್ತೊಬ್ಬ ನಟಿ ಸೀತಾ ಕಪೂರ್‌ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿರಿ ಇದೆ. ಅದೇನೇ ಇರಲಿ ಇದೀಗ ಅಣಿಮಾನಿಗಳು ಸ್ಟಾರ್‌ ಕ್ರಿಕೆಟಿಗನ ಪತ್ನಿಯನ್ನು ತೆರೆ ಮೇಲೆ ನೋಡಲು ತುದಿಗಾಲಲ್ಲಿ ಬಕಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಕ್ರಿಕೆಟಿಗರು ವಿವಾಹವಾದ ಸಿನಿ ತಾರೆಯರು ಮತ್ತೆ ಚಿತ್ರರಂಗಕ್ಕೆ ಪ್ರವೇಶ ಮಾಡುವುದು ಕಡಿಮೆ. ಇದರ ಬಡುವೆಯೂ ಆರ್‌ಸಿಬಿ ಮಾಜಿ ಸ್ಟಾರ್ ಬೌಲರ್ ಅವರ ಪತ್ನಿ ಮತ್ತೆ ನಿನಿ ರಂಗಕ್ಕೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಇದನ್ನು ನೋಡಲು ಅಭಿಮಾನಿಗಳು ಕಾತದರದಿಂದ ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+