First Night With Devva: ಮೂವಿ ಸಾಂಗ್ ಪೋಸ್ಟ್ ಸೋನುಗೌಡ & ಕಿಪಿ ಕೀರ್ತಿ ಲಿಂಕ್‌ಗೆ ಪ್ರಥಮ್ ಟ್ರೋಲ್!
First Night With Devva: ನಟ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಮಾಡಿರುವ ಟ್ವೀಟ್‌ವೊಂದು ಭಾರೀ ಟ್ರೋಲ್‌ಗೆ ಕಾರಣವಾಗಿದೆ. ಪ್ರಥಮ್ ಹೇಳುವ ಮಾತು ಅಥವಾ ಕೆಲವೊಂದು ಪೋಸ್ಟ್‌ಗಳು ಈ ಹಿಂದೆಯೂ ಭಾರೀ ಚರ್ಚೆಗೆ ಕಾರಣವಾಗಿರುವುದು ಇದೆ. ಆದರೆ, ಇದೀಗ ಅವರು ಮಾಡಿರುವ ಸಿನಿಮಾ ಪ್ರಮೋಷನ್ ಟ್ವೀಟ್ ಭಾರೀ ಚರ್ಚೆ ಆಗುತ್ತಿದ್ದು. ಪ್ರಥಮ್ ಅವರು ಈ ರೀತಿ ಪೋಸ್ಟ್ ಮಾಡಬಾರದಿತ್ತು ಅಂತ ಹೇಳುತ್ತಿದ್ದಾರೆ. ಇದೊಂದು ರೀತಿ ಬಾಡಿಶೇಮಿಂಗ್‌ನಂತಿದೆ ಅಂತಲೂ ತುಂಬಾ ಜನ ಅಭಿಪ್ರಾಯಪಟ್ಟಿದ್ದಾರೆ. ಇಷ್ಟಕ್ಕೂ ಪ್ರಥಮ್ ಮಾಡಿರುವ ಪೋಸ್ಟ್ ಏನು, ಯಾವ ಕಾರಣಕ್ಕೆ ಇದು ಟ್ರೋಲ್ ಆಗುತ್ತಿದೆ ಎನ್ನುವ ವಿವರ ಇಲ್ಲಿದೆ.
ಪ್ರಥಮ್ ಅವರು ಅವರ First Night With Devva ಎನ್ನುವ ಸಿನಿಮಾದ ಪ್ರಮೋಷನ್‌ಗೆ ಸಂಬಂಧಿಸಿದಂತೆ ಪೋಸ್ಟ್‌ವೊಂದು ಮಾಡಿದ್ದು ಭಾರೀ ಚರ್ಚೆ ಆಗುತ್ತಿದೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಜನ ಟೀಕೆ ಮಾಡುವುದಕ್ಕೆ ಪ್ರಾರಂಭಿಸಿದ್ದಾರೆ. ಸಂತೋಷ್ ಕುಮಾರ್ ಎಲ್.ಎಂ ಎನ್ನುವವರು, Dear Pratham, "ಒಳ್ಳೆ ಹುಡುಗ" ಅನ್ನೋ ಪಟ್ಟವನ್ನು ಸಂಪಾದಿಸಬೇಕು. ಮತ್ತು ಉಸಿರಿರುವತನಕ ನಿರಂತರ ಕಾಪಾಡಿಕೊಳ್ಳಬೇಕು ಹೆಸರಿನ ಮುಂದೆ "ಒಳ್ಳೆ ಹುಡುಗ" ಅಂತ ಸೇರಿಸಿಕೊಳ್ಳುವುದರಿಂದ ಒಳ್ಳೆಯವರಾಗುವುದಿಲ್ಲ. ಈ ಒಂದು ಪೋಸ್ಟ್ ಸಾಕು ನಿಮ್ಮ ಮನಸ್ಥಿತಿ ಏನು ಅಂತ ತಿಳಿದುಕೊಳ್ಳೋಕೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಶ್ರೀ ಎನ್ನುವವರು ಇನ್ನೊಬ್ಬರನ್ನು ಅಪಹಾಸ್ಯ ಮಾಡುವುದು ಹಾಸ್ಯ ಹೇಗಾದೀತೂ ಅಂತ ತಿಳಿದಿಲ್ವಾ ಈ ಬುದ್ಧಿವಂತನಿಗೆ ಎಂದು ಪ್ರಶ್ನೆ ಮಾಡಿದ್ದಾರೆ. ಹಲವರು ಈ ಪೋಸ್ಟ್ ಹಾಗೂ ಪ್ರಥಮ್ ಮನಸ್ಥಿತಿಯನ್ನು ಪ್ರಶ್ನೆ ಮಾಡಿದ್ದಾರೆ.
ಪ್ರಥಮ್ ಮಾಡಿರುವ ಪೋಸ್ಟ್ ಏನು ?
ಯಾರು ನಮ್ಮ ಸಿನಿಮಾ first night with devva film song ನೋಡಲ್ವೋ ಅವ್ರಿಗೆ ಸೋನುಗೌಡ, ಕಿಪಿ ಕೀರ್ತಿ ಥರ ಹೆಂಡ್ತಿ ಸಿಕ್ಲಿ. ಹುಡ್ಗಿ ಆಗಿದ್ರೆ ನಿಮ್ಗೆ ಕಾಫಿನಾಡ ಚಂದು,ದೀಪಕ್ ಥರ ಗಂಡ ಸಿಕ್ಲಿ..! ಇದ್ಯಾವುದೂ ಆಗ್ಬಾರ್ದು ಅಂದ್ರೆ ನಮ್ಮ #Firstnight_with_devva song ನೋಡಿ..ಈಗ್ಲೇ ಶೇರ್,
Comment ಮಾಡಿ🤔 ಅಂತ ಅವರು ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪ್ರಥಮ್ ಕನ್ನಡ ಚಿತ್ರರಂಗದ ನಿರ್ದೇಶಕ ಮತ್ತು ನಟ. ಅವರು ಬಿಗ್ ಬಾಸ್ ಕನ್ನಡ ಸೀಸನ್ 4 ವಿಜೇತರಾಗಿದ್ದರು. "ದೇವ್ರನ್ನೆ ಬುಡು ಗುರು" ಚಿತ್ರವನ್ನು ನಿರ್ದೇಶಿಸಿದ್ದಾರೆ.
ಯಾರು ನಮ್ಮ ಸಿನಿಮಾ first night with devva film song ನೋಡಲ್ವೋ ಅವ್ರಿಗೆ ಸೋನುಗೌಡ,ಕಿಪಿ ಕೀರ್ತಿ ಥರ ಹೆಂಡ್ತಿ ಸಿಕ್ಲಿ,
— Olle Hudga Pratham (@OPratham) July 10, 2025
ಹುಡ್ಗಿ ಆಗಿದ್ರೆ ನಿಮ್ಗೆ ಕಾಫ಼ಿನಾಡ ಚಂದು,ದೀಪಕ್ ಥರ ಗಂಡ ಸಿಕ್ಲಿ..!
ಇದ್ಯಾವುದೂ ಆಗ್ಬಾರ್ದು ಅಂದ್ರೆ ನಮ್ಮ #Firstnight_with_devva song ನೋಡಿ..ಈಗ್ಲೇ ಶೇರ್,
Comment ಮಾಡಿ🤔https://t.co/FOJ8rEQkpj
ಇವರಿಗಿಂತ ಅವರೇ ವಾಸಿ: ಇನ್ನು ನಟ ಪ್ರಥಮ್ ಅವರ ಪೋಸ್ಟ್‌ಗೆ ಟೀಕೆ ವ್ಯಕ್ತವಾಗುತ್ತಿದ್ದು. ಇವರಿಗಿಂತ ಸೋನುಗೌಡ, ಕಿಪಿ ಕೀರ್ತಿ ಅವರೇ ವಾಸಿ. ಕಾಫಿನಾಡ ಚಂದು,ದೀಪಕ್ ಅವರೆಲ್ಲರೂ ಇನ್ನೊಬ್ಬರ ಬಗ್ಗೆ ಹಾಸ್ಯ ಮಾಡಲ್ಲ. ಈ ರೀತಿ ಬಾಡಿ ಶೇಮಿಂಗ್ ಮಾಡುವುದು ಕೆಟ್ಟ ಸಂಸ್ಕೃತಿ ಇದು ನಿಲ್ಲಬೇಕು ಎಂದು ಹಲವರು ಒತ್ತಾಯಿಸಿದ್ದಾರೆ.












Click it and Unblock the Notifications