ನಮ್‌ ಡಿಬಾಸ್‌ ಮಾಡಿ ಬಿಟ್ಟಿರೋದನ್ನ ಸುದೀಪ್‌ ಕಾಪಿ ಮಾಡ್ತಾವ್ರೆ..! ಫ್ಯಾನ್ಸ್‌ ನಡುವೆ ವಾರ್‌

ಸ್ಯಾಂಡಲ್‌ವುಡ್‌ ನಟರಾದ ಕಿಚ್ಚ ಸುದೀಪ್‌ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ನಡುವೆ ಯಾವುದೋ ವಿಚಾರಕ್ಕೆ ವೈಮನಸ್ಸಿರುವುದು ನಿಜ. ಆದರೆ ಇದನ್ನು ಅವರ ಅಭಿಮಾನಿಗಳು ನೆಕ್ಸ್ಟ್‌ ಲೆವೆಲ್‌ಗೆ ತೆಗೆದುಕೊಂಡು ಹೋಗುತ್ತಲೇ ಇದ್ದಾರೆ. ನಟರು ತಮ್ಮ ಪಾಡಿಗಿದ್ದರೂ, ಅಭಿಮಾನಿಗಳು ಮಾತ್ರ ನಮ್‌ ಬಾಸು, ನಮ್‌ ಬಾಸು ಎಂದು ಬಡಿದಾಡಿಕೊಳ್ಳುತ್ತಲೇ ಇದ್ದಾರೆ. ಈಗ ಸುದೀಪ್‌ ಹಾಗೂ ದರ್ಶನ್‌ ಅಭಿಮಾನಿಗಳ ನಡುವೆ ಮತ್ತೊಂದು ವಿಚಾರಕ್ಕೆ ಟಾಕ್‌ ವಾರ್‌ ಶುರು ಮಾಡಿದ್ದಾರೆ.

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ದರ್ಶನ್‌ ಹಾಗೂ ಸುದೀಪ್‌ ಫ್ಯಾನ್ಸ್‌ ನಡುವೆ ಕೆಲವು ವಿಚಾರಗಳಿಗೆ ಜಗಳ ನಡೆಯುತ್ತಲೇ ಇದೆ. ಸದ್ಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಮಾಕ್ಸ್‌ ಸಿನಿಮಾ ಸಖತ್‌ ಸೌಂಡ್‌ ಮಾಡುತ್ತಿದ್ದು, ಈ ಚಿತ್ರದ ಪೋಸ್ಟರ್‌ ವಿಚಾರಕ್ಕೆ ದರ್ಶನ್‌ ಅಭಿಮಾನಿಗಳು ಗಲಾಟೆಗೆ ಇಳಿದಿದ್ದಾರೆ.

Fight Between Actor Darshan Thoogudeepa And Actor Sudeep Fans Over Poster Issue

ಹೌದು ಮ್ಯಾಕ್ಸ್‌ ಸಿನಿಮಾದ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ದರ್ಶನ್‌ ಫ್ಯಾನ್ಸ್‌ ಕೂಡ ಕಾಲೆಳೆಯುವುದು ಜೋರಾಗಿದೆ. ಇಷ್ಟಕ್ಕೂ ಗಲಾಟೆಗೆ ಕಾರಣವಾಗಿರೋದು ಮ್ಯಾಕ್ಸ್‌ ಚಿತ್ರದಲ್ಲಿ ಸುದೀಪ್‌ ಕೊಟ್ಟಿರುವ ಪೋಸ್‌. ಹೌದು ಸುದೀಪ್‌ ಕೈಯಲ್ಲಿ ಗನ್‌ ಹಿಡಿದು ನಿಂತಿರುವ ಲುಕ್‌ ಪೋಸ್ಟರ್‌ನಲ್ಲಿದ್ದು, ಇದನ್ನು ನಮ್ಮ ದರ್ಶನ್‌ ಮೊದಲೇ ಮಾಡಿಬಿಟ್ಟಿರೋದು ಎಂದು ಕೊಂಕು ಮಾತನಾಡುತ್ತಿದ್ದಾರೆ.

ಮ್ಯಾಕ್ಸ್‌ ಸಿನಿಮಾ ಬಗ್ಗೆ ನವೆಂಬರ್‌ 27ರಂದು ಮಹತ್ವದ ಘೋಷಣೆ ಮಾಡುವುದಾಗಿ ಚಿತ್ರತಂಡವು ಪೋಸ್ಟರ್‌ ರಿಲೀಸ್‌ ಮಾಡಿದೆ. ಇದರಲ್ಲಿ ಸುದೀಪ್‌ ಗನ್‌ ಹಿಡಿದಿರುವ ಪೋಸ್‌ ಬಗ್ಗೆ ದರ್ಶನ್‌ ಅಭಿಮಾನಿಗಳು ಕಾಮೆಂಟ್‌ ಮಾಡುತ್ತಿದ್ದಾರೆ. ಅಪ್ಪ ಜಮಾನದಲ್ಲಿ ಮಾಡಿ ಬಿಟ್ಟಿರೋದನ್ನ ಸುದೀಪ್‌ ಈಗ ಕಾಪಿ ಮಾಡ್ತಾವ್ರೆ ಎಂದು ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಅಲ್ಲದೆ ನಮ್ಮ ಡಿಬಾಸ್‌ ಇಂತಹ ಗನ್‌ ಅನ್ನು ಐರಾವತದಲ್ಲೇ ಹಿಡಿದು ಬಿಸಾಡಿದ್ದರು. ಈ ಪೋಸ್‌ ಕೂಡ ಐರಾವತ ಸಿನಿಮಾದಲ್ಲಿ ದರ್ಶನ್‌ ಕೊಟ್ಟಿದ್ದಾರೆ. ಈಗ ಮ್ಯಾಕ್ಸ್‌ನಲ್ಲಿ ನಿಮ್ಮ ಬಾಸ್‌ ಸುದೀಪ್‌ ಅವರು ಕೂಡ ದರ್ಶನ್‌ ಅವರನ್ನೇ ಕಾಪಿ ಮಾಡ್ತಾವ್ರೆ ಎಂದು ದರ್ಶನ್‌ ಅಭಿಮಾನಿಗಳು ಅಣಕಿಸಿದ್ದಾರೆ. ಐರಾವತ ಸಿನಿಮಾದ ದರ್ಶನ್‌ ಪೋಸ್ಟರ್‌ ಹಾಗೂ ಮ್ಯಾಕ್ಸ್‌ ಸಿನಿಮಾದ ಸುದೀಪ್‌ ಪೋಸ್ಟರ್‌ಗಳನ್ನು ಕೊಲ್ಯಾಜ್‌ ಮಾಡಿ. ಸರಿಯಾಗಿ ಕಣ್‌ ಬಿಟ್ಟು ನೋಡ್ರೋ ಎಂದು ಸುದೀಪ್‌ ಅಭಿಮಾನಿಗಳನ್ನು ಗೇಲಿ ಮಾಡಿದ್ದಾರೆ.

Fight Between Actor Darshan Thoogudeepa And Actor Sudeep Fans Over Poster Issue

ಇದಕ್ಕೆ ಕಿಚ್ಚನ ಅಭಿಮಾನಿಗಳು ಕೂಡ ಕೌಂಟರ್‌ ನೀಡಿದ್ದಾರೆ. ಮೆಜೆಸ್ಟಿಕ್ ಸಿನಿಮಾವನ್ನು ಭಿಕ್ಷೆಯಾಗಿ ಕೊಟ್ಟ ಕಿಚ್ಚ ಸುದೀಪ್ ಅವರು 2010ರಲ್ಲೇ ಈ ಲುಕ್‌ ಅನ್ನು ವೀರಪರಂಪರೆ ಸಿನಿಮಾದಲ್ಲಿ ಕೊಟ್ಟಿದ್ದಾರೆ ಕಣ್ರೋ ಎಂದು ಪೋಸ್ಟರ್‌ ಹಂಚಿಕೊಂಡಿದ್ದಾರೆ. ಅಲ್ಲದೆ ದರ್ಶನ್‌ ಅವರ ಆಪರೇಷನ್‌ ವಿಚಾರವನ್ನು ಸುದೀಪ್‌ ಅಭಿಮಾನಿಗಳು ಎಳೆದು ತಂದಿದ್ದಾರೆ.

ಆಪರೇಷನ್ ಹೆಸರಲ್ಲಿ ದರ್ಶನ್‌ ನಾಟಕ ಆಡ್ತಾವ್ರೆ, ಈ ಬಗ್ಗೆ ಹೋಂ ಮಿನಿಸ್ಟರ್‌ ಜಿ.ಪರಮೇಶ್ವರ್‌ ಕೂಡ ಹೇಳಿದ್ದಾರೆ. ನಿಮ್‌ ಬಾಸ್‌ಗೆ ಸರಿಯಾಗಿ ರುಬ್ಬೋಕೆ ರೆಡಿ ಮಾಡ್ಕಂಡವ್ರೇ..ಎಂದು ಕೌಂಟರ್‌ ಕೊಟ್ಟಿದ್ದಾರೆ. ಇಬ್ಬರೂ ನಟರ ನಡುವೆ ಪೋಸ್ಟರ್‌ ವಿಚಾರವಾಗಿ ಜಗಳ ತಾರಕ್ಕೇರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+