ಉಚಿತ ವೀರ್ಯ ದಾನ ಆಫರ್ ಕೊಟ್ಟ 100 ಮಕ್ಕಳ ತಂದೆ, ಬಿಲೆನಿಯರ್ ಟೆಲಿಗ್ರಾಂ ಸಿಇಒ!
Sperm Donation: ವಿಶ್ವದಲ್ಲಿ ಶ್ರೀಮಂತರು ಒಂದಿಲ್ಲೊಂದು ಕಾರಣಕ್ಕೆ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅಗರ್ಭ ಶ್ರೀಮಂತರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಜಗತ್ತು ಈ ಹಿಂದೆ ಎಂದೂ ಕೇಳದ, ಕೇಳಲು ಸಾಧ್ಯವೂ ಇಲ್ಲದ ಕೆಲಸವನ್ನು ಮಾಡುತ್ತಾರೆ. ಇದೀಗ ಟೆಲಿಗ್ರಾಮ್ ಸಿಇಒ ಮತ್ತು ರಷ್ಯಾದ ಬಿಲಿಯನೇರ್ (ಅಗರ್ಭ ಶ್ರೀಮಂತ) ಪಾವೆಲ್ ಡುರೊವ್ ಉಚಿತ ವೀರ್ಯ ದಾನ ಮಾಡುವುದು ಹಾಗೂ ವಿಟ್ರೋ ಫರ್ಟಿಲೈಸೇಶನ್ (IVF) ಮೂಲಕ ಮಕ್ಕಳನ್ನು ಪಡೆಯುವ ವಿಷಯದಲ್ಲಿ ವಿಶ್ವದಾದ್ಯಂತ ಸುದ್ದಿಯಲ್ಲಿ ಇದ್ದಾರೆ.
ಪಾವೆಲ್ ಡುರೊವ್ ಈಗಾಗಲೇ 100 ಮಕ್ಕಳ ತಂದೆ! ಹೌದು, ಪಾವೆಲ್ ಡುರೊವ್ ವೀರ್ಯ ದಾನ ಮಾಡುವ ಮೂಲಕ ವಿಟ್ರೋ ಫರ್ಟಿಲೈಸೇಶನ್ ವಿಧಾನದಿಂದ (ಕೃತಕವಾಗಿ ತಾಯಿ ಆಗುವ ಅಥವಾ ಆರ್ಟಿಫಿಷಿಯಲ್ ವಿಧಾನ (ಸಂಭೋಗವಿಲ್ಲದೆ ಸಂತಾನ)ದ ಮೂಲಕ) ನೂರು ಜನ ಮಕ್ಕಳಿಗೆ ಡುರೊವ್ ತಂದೆಯಾಗಿದ್ದಾರೆ.

ಮೆಸೇಜಿಂಗ್ ಆ್ಯಪ್ ಟೆಲಿಗ್ರಾಂನ ಸಿಇಒ ಪಾವೆಲ್ ಡುರೊವ್ ಅವರು ಇದೀಗ ಈ ಹೊಸ ವಿಷಯಕ್ಕೆ ಭಾರೀ ಚರ್ಚೆಯಲ್ಲಿ ಇದ್ದಾರೆ. ಟೆಲಿಗ್ರಾಂ ಭಾರತ, ಉಕ್ರೇನ್, ರಷ್ಯಾ ಹಾಗೂ ಸೋವಿಯತ್ ಯುನಿಯನ್ ದೇಶಗಳಲ್ಲಿ ಅತಿ ಹೆಚ್ಚು ಬಳಕೆಯಲ್ಲಿ ಇದೆ.
ಈ ಆ್ಯಪ್ ಅನ್ನು ಶತಕೋಟಿಗೂ ಹೆಚ್ಚು ಜನ ಬಳಸುತ್ತಿದ್ದಾರೆ. ಆದರೆ ಡುರೊವ್ (ಜೈವಿಕ/Biological parent) ವೀರ್ಯದಾನದ ವಿಷಯದಲ್ಲಿ ಭಾರೀ ಚರ್ಚೆಯಲ್ಲಿ ಇದ್ದಾರೆ.

ಪಾವೆಲ್ ಡುರೊವ್ ಈಗಾಗಲೇ ಯಾರು ಐವಿಎಫ್‌ನ ಮೂಲಕ ಮಕ್ಕಳು ಪಡೆಯಲು ಇಚ್ಛಿಸುತ್ತಾರೋ ಆ ಮಹಿಳೆಯರಿಗೆ ಉಚಿತವಾಗಿ ವೀರ್ಯ ನೀಡುತ್ತಿದ್ದಾನೆ. ಇದೀಗ ಚಿಕಿತ್ಸೆಯ ವೆಚ್ಚವನ್ನು ತಾನೇ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ಈ ವರ್ಷ ಜುಲೈನಲ್ಲಿ 12 ದೇಶಗಳಲ್ಲಿ ನೂರಕ್ಕೂ ಹೆಚ್ಚು ಜೈವಿಕ ಮಕ್ಕಳನ್ನು ಹೊಂದಿರುವುದಾಗಿ ಡುರೊವ್ ಹೇಳಿದ್ದ.
ಇದೀಗ ಅಲ್ಟ್ರಾವಿಟಾ ಫರ್ಟಿಲಿಟಿ ಕ್ಲಿನಿಕ್ ಎನ್ನುವ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಐವಿಎಫ್ ತಂತ್ರಾಂಶದ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಉಚಿತ ವೀರ್ಯ ಹಾಗೂ ಚಿಕಿತ್ಸೆ ವೆಚ್ಚವನ್ನೂ ಭರಿಸುವುದಾಗಿ ಭರವಸೆ ನೀಡಿದ್ದಾನೆ. ನಿಮಗೆ ಒಂದು ಅನನ್ಯ ಅವಕಾಶವನ್ನು ನೀಡಲು ನಾವು ಸಂತೋಷಪಡುತ್ತೇವೆ! ಈ ಬಗ್ಗೆ ಆ ಆಸ್ಪತ್ರೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಜಾಹೀರಾತು ನೀಡಲಾಗಿದೆ.

ಅತ್ಯಂತ ಪ್ರಸಿದ್ಧ ಮತ್ತು ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರಾದ ಪಾವೆಲ್ ಡುರೊವ್ ಅವರ ವೀರ್ಯವನ್ನು ಬಳಸಿಕೊಂಡು ನಮ್ಮ ಕ್ಲಿನಿಕ್‌ನಲ್ಲಿ ಮಾತ್ರ ನೀವು ಉಚಿತವಾಗಿ IVF ಗೆ ಒಳಗಾಗಬಹುದು ಎನ್ನುವ ಜಾಹೀರಾತೊಂದು ಇದೀಗ ಭಾರೀ ಸದ್ದು ಮಾಡುತ್ತಿದೆ.
12 ದೇಶದಲ್ಲಿ ಇದ್ದಾರೆ ಪಾವೆಲ್ ಡುರೊವ್ ಮಕ್ಕಳು: ಪಾವೆಲ್ ಡುರೊವ್‌ನ (Biological parent) ಈಗಾಗಲೇ ವಿಶ್ವದ 12 ದೇಶಗಳಲ್ಲಿ 100 ಮಕ್ಕಳ ತಂದೆಯಾಗಿದ್ದಾನೆ. ಈ ಮಕ್ಕಳು ಯಾರು ಸಹಜ ಲೈಂಗಿಕ ಕ್ರಿಯೆಯಿಂದ ಜನಿಸಿಲ್ಲ. ವಿಟ್ರೋ ಫರ್ಟಿಲೈಸೇಶನ್ ಎನ್ನುವ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಇಚ್ಛಿಸುವ ಮಹಿಳೆಯರಿಗೆ ಡುರೊವ್ ತನ್ನ ವೀರ್ಯವನ್ನು ದಾನ ಮಾಡುತ್ತಿದ್ದಾನೆ.
{video1}
ಈ ಮೂಲಕ ಆತ ವಿಶ್ವದ 12 ರಾಷ್ಟ್ರಗಳಲ್ಲಿ 100 ಮಕ್ಕಳಿಗೆ ಪರೋಕ್ಷವಾಗಿ ತಂದೆಯಾಗಿದ್ದಾನೆ. ಈತ ವೀರ್ಯಕ್ಕಾಗಿ ಹಲವು ಮಹಿಳೆಯರು ಮನವಿ ಸಲ್ಲಿಸಿದ್ದಾರೆ ಎನ್ನುವ ಮಾತೂ ಇದೆ.
ನಾನು 15 ವರ್ಷಗಳ ಹಿಂದೆ ವೀರ್ಯ ದಾನ ಮಾಡಲು ಪ್ರಾರಂಭಿಸಿದ್ದೆ. ನನ್ನ ಗೆಳೆಯನೊಬ್ಬ ನನ್ನ ಬಳಿ ವಿಚಿತ್ರವಾದ ಸಹಾಯವೊಂದನ್ನು ಕೇಳಿದ್ದ. ಅವರ ಪತ್ನಿ ಫಲವತ್ತತ್ತೆ ಸಮಸ್ಯೆಯಿಂದ ಬಳಲುತ್ತಿದ್ದರು. ಜೈವಿಕ ತಂದೆಯಾಗಿ ನೀನು ವೀರ್ಯ ದಾನ ಮಾಡು ಅಂತ ಮನವಿ ಮಾಡು ಎಂದು ಕೇಳಿದ್ದರು. ಅಲ್ಲಿಂದ ನಾನು ವೀರ್ಯ ದಾನ ಮಾಡುತ್ತಿದ್ದೇನೆ ಎಂದು ಈಚೆಗೆ ಸೋಷಿಯಲ್ ಮೀಡಿಯಾದಲ್ಲಿ ಡುರೊವ್ ಬರೆದುಕೊಂಡಿದ್ದ.
ಇದೀಗ ಈ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ.












Click it and Unblock the Notifications