Darshan Thoogudeepa: ದರ್ಶನ್‌ ಸ್ವಾಗತಕ್ಕೆ ಸಜ್ಜಾದ ಅಭಿಮಾನಿಗಳು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಸಮಾಧಾನ ಸಿಗುವ ಸುದ್ದಿ ಸಿಕ್ಕಿದೆ. ಹೈಕೋರ್ಟ್‌ನಲ್ಲಿ ಇಂದು ಅವರ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 30ಕ್ಕೆ ಆದೇಶ ಕಾಯ್ದಿರಿಸಿದೆ. ಈ ಬೆನ್ನಲ್ಲೇ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ದರ್ಶನ್‌ ಸ್ವಾಗತಕ್ಕೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ದರ್ಶನ್‌ಗೆ ಬೆನ್ನು ನೋವು ಹೆಚ್ಚಾಗಿರುವ ಕಾರಣ ಅವರಿಗೆ ವೈದ್ಯಕೀಯ ಕಾರಣದಿಂದ ಮಧ್ಯಂತರ ಜಾಮೀನು ನೀಡಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಮನವಿ ಮಾಡಿದ್ದಾರೆ. ದರ್ಶನ್ ಪರ ವಕೀಲರ ವಾದ ಕೇಳಿರುವ ಹೈಕೋರ್ಟ್ ಏಕಸದಸ್ಯ ಪೀಠ, ಎಷ್ಟು ದಿನ ಮಧ್ಯಂತರ ಜಾಮೀನು ಬೇಕು ಎಂದು ಕೇಳಿದ್ದು, ಜಾಮೀನು ಸಿಗುವ ವಿಶ್ವಾಸ ಹೆಚ್ಚಿಸಿದೆ.

Fans waiting give grand welcome darshan release from ballari jail

ದರ್ಶನ್‌ರನ್ನು ಬೆಂಗಳೂರಿಗೆ ಕರೆಸಿ ವೈದ್ಯಕೀಯ ಮಂಡಳಿಯಿಂದ ಅವರ ಆರೋಗ್ಯ ತಪಾಸಣೆ ನಡೆಸಿ, ಎಷ್ಟು ದಿನ ಬೇಕು ಎಂದು ವರದಿ ಪಡೆದು ಮಧ್ಯಂತರ ಜಾಮೀನು ನೀಡುವ ಸಾಧ್ಯತೆ ಕೂಡ ಇದೆ. ಇಲ್ಲವಾದಲ್ಲಿ ದರ್ಶನ್ ಪರ ವಕೀಲರ ವಾದವನ್ನು ಪುರಸ್ಕರಿಸಿ ಚಿಕಿತ್ಸೆ ಪಡೆಯಲು ಮಧ್ಯಂತರ ಜಾಮೀನು ನೀಡುವ ಸಾಧ್ಯತೆ ಕೂಡ ಇದೆ.

ಮೈಸೂರಿಗೆ ದರ್ಶನ್ ತೂಗುದೀಪ

ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರ್ಧರಿಸಿದ್ದು, ಬೆಂಗಳೂರಿನಲ್ಲಿ ಏನಾದರೂ ತಪಾಸಣೆಯಾದ ಬಳಿಕ ಜಾಮೀನು ಸಿಕ್ಕರೆ ತಕ್ಷಣ ಮೈಸೂರಿಗೆ ತೆರಳಲಿದ್ದಾರೆ. ದರ್ಶನ್‌ರ ತವರು ಕೂಡ ಮೈಸೂರೇ ಆಗಿರುವುದರಿಂದ ದರ್ಶನ್‌ ಅಭಿಮಾನಿಗಳು ಇನ್ನೂ ಖುಷಿಯಾಗಿದ್ದಾರೆ. ಮಂಡ್ಯ, ಮೈಸೂರು ಭಾಗದಲ್ಲಿ ದರ್ಶನ್‌ಗೆ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳಿದ್ದು, ನೆಚ್ಚಿನ ನಟನಿಗೆ ಸ್ವಾಗತ ಸಿಕ್ಕರೆ ಅದ್ದೂರಿಯಾಗಿ ಸ್ವಾಗತ ಕೋರಲು ಸಜ್ಜಾಗಿದ್ದಾರೆ.

ದರ್ಶನ್ ಒಪ್ಪುವುದು ಅನುಮಾನ

ಅಭಿಮಾನಿಗಳೇನೋ ದರ್ಶನ್‌ರನ್ನು ಸ್ವಾಗತಿಸಲು ಉತ್ಸಾಹದಿಂದಲೇ ಕಾಯುತ್ತಿದ್ದಾರೆ. ಆದರೆ ಅಭಿಮಾನಿಗಳ ಆಸೆ ಈಡೇರುತ್ತಾ ಎನ್ನುವ ಅನುಮಾನ ಕೂಡ ಇದೆ. ದರ್ಶನ್‌ ಈಗಾಗಲೇ ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದು ನಡೆಯಲು ಕೂಡ ಕಷ್ಟಪಡುತ್ತಿದ್ದಾರೆ. ಈಗಿರುವಾಗ ವೈದ್ಯಕೀಯ ಕಾರಣದಿಂದ ಜಾಮೀನು ಸಿಕ್ಕರೆ, ಅವರು ಸಂಭ್ರಮಾಚರಣೆ ನಡೆಸಿದರು ಕಾನೂನಾತ್ಮಕ ಸಮಸ್ಯೆಗಳು ಕೂಡ ಎದುರಾಗುವ ಸಾಧ್ಯತೆ ಇದೆ.

ಜಾಮೀನು ಸಿಗುತ್ತಿದ್ದಂತೆ ಚಿಕಿತ್ಸೆ ಪಡೆದು ಬೆನ್ನು ನೋವು ಕಡಿಮೆ ಮಾಡಿಕೊಳ್ಳುವ ಆಲೋಚನೆ ದರ್ಶನ್‌ರದ್ದು. ಜಾಮೀನಿನ ಮೇಲೆ ಹೊರಗಿರುವ ಸಂದರ್ಭದಲ್ಲಿ ಬೆಂಗಳೂರಿಗೆ ಬರುವುದಿಲ್ಲ ಎಂದು ಕೂಡ ಅವರ ವಕೀಲರು ತಿಳಿಸಿದ್ದಾರೆ. ದರ್ಶನ್‌ಗೆ ಜಾಮೀನು ಸಿಕ್ಕರೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿ ವಿಶ್ರಾಂತಿ ಪಡೆಯಬೇಕಾಗುತ್ತದೆ.

ನಮ್ ಬಾಸ್ ಹೊರಗೆ ಬರಲಿ ಹಬ್ಬ ಮಾಡ್ತೀವಿ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಈಗ ಅವಕಾಶ ಸಿಗದೇ ಇರುವುದು ಬೇಸರ ತರಿಸಿದೆ. ದರ್ಶನ್‌ರನ್ನು ಮೆರವಣಿಗೆ ಮಾಡಲು ಸಾಧ್ಯವಾಗದೇ ಇದ್ದರೂ, ಅಭಿಮಾನಿಗಳ ಸಂಭ್ರಮ ಮಾತ್ರ ಹೆಚ್ಚಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+