ರಾಹುಲ್‌ ಗಾಂಧಿಯನ್ನು ಡಿಟ್ಟೋ ಕಾಪಿ ಮಾಡಿದ ಡಾಲಿಗೆ ಶಬ್ಬಾಷ್‌ಗಿರಿ ನೀಡಿದ ಅಭಿಮಾನಿಗಳು!

ಡಾಲಿ ಧನಂಜಯ್ ಅವರನ್ನ ಈಗ ಅಭಿಮಾನಿಗಳು, ರಾಹುಲ್ ಗಾಂಧಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಅದರಲ್ಲೂ ಡಾಲಿ ಧನಂಜಯ್ ಅವರ ಹುಟ್ಟುಹಬ್ಬದ ದಿನವೇ ಈ ರೀತಿ ಫ್ಯಾನ್ಸ್ ಪೋಸ್ಟ್ ಮಾಡುತ್ತಿರುವುದು ಗಮನ ಸೆಳೆದಿದೆ. ಹಾಗಾದ್ರೆ 'ಟಗರು' ಖ್ಯಾತಿಯ ಡಾಲಿ ಧನಂಜಯ್‌ನ ಜನ ಯಾಕೆ ರಾಹುಲ್ ಗಾಂಧಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ? ಇದರ ಹಿಂದಿನ ಕಾರಣ ಏನು? ಇಂಟರ್ನೆಟ್‌ನಲ್ಲಿ ಇದೀಗ ವೈರಲ್ ಆಗುತ್ತಿರುವ ಡಾಲಿ ಧನಂಜಯ್ ಅವರ 'ಆ' ವಿಡಿಯೋ ಯಾವುದು? ಬನ್ನಿ ತಿಳಿಯೋಣ.

ಕನ್ನಡ ಸಿನಿಮಾ ರಂಗದಲ್ಲಿ ಯುವ ಪ್ರತಿಭೆಯಾಗಿ ಎಂಟ್ರಿ ಕೊಟ್ಟಿದ್ದ ಡಾಲಿ ಧನಂಜಯ್ ಈಗ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಶಿವಣ್ಣ ಜೊತೆಗಿನ 'ಟಗರು' ಸಿನಿಮಾ ಮೂಲಕವೇ ಡಾಲಿ ರಾತ್ರೋರಾತ್ರಿ ಸ್ಟಾರ್ ಆಗಿಬಿಟ್ಟರು. ಅದಕ್ಕೂ ಮೊದಲು ಧನಂಜಯ್ ಹತ್ತಾರು ಸಿನಿಮಾ ಮಾಡಿದ್ದರೂ ಅದು ವರ್ಕೌಟ್ ಆಗಿರಲಿಲ್ಲ. ಇಂತಿಪ್ಪ ಡಾಲಿ ಧನಂಜಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ, ಹೀಗಾಗಿ ಕರ್ನಾಟಕ ಮಾತ್ರವಲ್ಲದೆ ದೇಶಾದ್ಯಂತ ಡಾಲಿ ಅಭಿಮಾನಿಗಳು ಇದೀಗ ವಿಶ್ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ಡಾಲಿ ಧನಂಜಯ್ ಅವರನ್ನು ಜನರು ರಾಹುಲ್ ಗಾಂಧಿಗೆ ಹೋಲಿಕೆ ಮಾಡುತ್ತಿದ್ದಾರೆ. ಹಾಗಾದರೆ ಈ ರೀತಿ ವೈರಲ್ ಆಗಿದ್ದು ಏಕೆ ನಟ ಡಾಲಿ ಧನಂಜಯ್? ಮುಂದೆ ಓದಿ.

Fans Are Saying This About Daali Dhananjay New Movie Teaser

ನಟರಾಕ್ಷಸ ಡಾಲಿ ಸದ್ದು ಜೋರು!

ಡಾಲಿ ಧನಂಜಯ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿ ಇದ್ದು, ಹೀಗಿದ್ದಾಗಲೇ ಧನಂಜಯ್ ಅವರ ಮುಂದಿನ ಸಿನಿಮಾ 'ಜಿಂಗೋ' ಟೀಸರ್ ಕೂಡ ರಿಲೀಸ್ ಆಗಿದೆ. ಹೀಗೆ ರಿಲೀಸ್ ಆಗಿರುವ 'ಜಿಂಗೋ' ಟೀಸರ್ ನೋಡಿ ಜನರು ಇದೀಗ ಡಾಲಿ ಧನಂಜಯ್ ಅವರನ್ನ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ. ಹಾಗಿದ್ರೆ ದಿಢೀರ್ ಹೀಗೆ ಹೋಲಿಕೆ ಮಾಡಲು ಕಾರಣ ಏನು? ಅಂತಹದ್ದು ಏನಿದೆ ಟೀಸರ್‌ನಲ್ಲಿ? ಡಾಲಿ ಧನಂಜಯ್ ಮಳೆಯಲ್ಲಿ ಮಿಂಚು ಹರಿಸಿರುವ ಭಾಷಣದ ಟೀಸರ್ ಕಥೆ ಇಲ್ಲಿದೆ, ಬನ್ನಿ ತಿಳಿಯೋಣ.

ಡಾಲಿ ಭಾಷಣ ರಾಹುಲ್ ರೀತಿ ಇತ್ತಾ?

ರಾಹುಲ್ ಗಾಂಧಿ ಅವರು ಕೆಲವು ತಿಂಗಳ ಹಿಂದೆ ಭರ್ಜರಿ ಮಳೆ ಸುರಿಯುತ್ತಿದ್ದರೂ, ತಮ್ಮ ಭಾಷಣ ನಿಲ್ಲಿಸಿರಲಿಲ್ಲ. ಸ್ಟೇಜ್ ಮೇಲೆ ನಿಂತು ರಾಹುಲ್ ಗಾಂಧಿ ಮಳೆಯಲ್ಲೇ ಭಾಷಣವನ್ನ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಅದೇ ರೀತಿ ಇದೀಗ 'ಜಿಂಗೋ' ಟೀಸರ್ ನೋಡಿದ ಜನರು ಅದೇ ಫೀಲ್ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿಯೇ ಇದೀಗ ಸೋಷಿಯಲ್ ಮೀಡಿಯಾ ತುಂಬಾ ಈ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಅಲ್ಲದೆ ಡಾಲಿ ಧನಂಜಯ್ ಅವರನ್ನ ರಾಹುಲ್ ಗಾಂಧಿ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ ಅಭಿಮಾನಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+