ನಾನು ವರ್ಜಿನ್ ಅಪ್ಪ ಎಂದ ಕನ್ನಡ ಪ್ರಸಿದ್ಧ ನಟ!

ಸಿನಿಮಾರಂಗದಲ್ಲಿ ನಟಿಯರು ಮಾತ್ರವಲ್ಲ ಕೆಲವೊಮ್ಮೆ ನಟರು ಕೊಡುವ ಹೇಳಿಕೆಗಳು ಸಹ ವೈರಲ್ ಆಗುವುದು ಇದೆ. ಕೆಲವೊಮ್ಮೆ ನಟರು ಕೊಡುವ ಹೇಳಿಕೆಗಳು ಟ್ರೋಲ್ ಹಾಗೂ ಕಾಮಿಡಿ ರೂಪದಲ್ಲಿ ಜನ ಬಳಸುವುದು ಇದೆ. ಇದೀಗ ಕನ್ನಡ ಪ್ರಸಿದ್ಧ ನಟರೊಬ್ಬರು ಹೇಳಿರುವ ನಾನು ವರ್ಜಿನ್ ಅಪ್ಪನಾದೆ ಎನ್ನುವ ಮಾತು ವೈರಲ್ ಆಗುತ್ತಿದೆ. ಇತ್ತೀಚೆಗೆ ನಟಿ ಭಾವನಾ ಅವರು ಐವಿಎಫ್‌ನ ಮೂಲಕ ಅವಳಿ ಮಕ್ಕಳಿಗೆ ತಾಯಿ ಆಗಿದ್ದಾರೆ. ಈ ವಿಚಾರವೇ ಭಾರೀ ಚರ್ಚೆ ಆಗುತ್ತಿರುವಾಗ ಕನ್ನಡದ ಪ್ರಸಿದ್ಧ ಹಾಗೂ ಈಗ ಪ್ರವರ್ಧಮಾನಕ್ಕೆ ಬರುತ್ತಿರುವ ನಟರೊಬ್ಬರ ಮಾತು ಭಾರೀ ಕುತೂಹಲ ಮೂಡಿಸಿದೆ. ಈ ರೀತಿ ನೋಡಿದರೆ, ಈ ನಟ ವಿವಾದಾತ್ಮಕ ಹೇಳಿಕೆಯನ್ನೇನು ಕೊಟ್ಟಿಲ್ಲ. ಬದುಕು ಬಂದಂತೆ ಸ್ವೀಕರಿಸುತ್ತೇನೆ ಎಂದಷ್ಟೇ ಹೇಳಿದ್ದಾರೆ.

ಕನ್ನಡ ಸಿನಿಮಾರಂಗದಲ್ಲಿ ಸಣ್ಣ ಸಣ್ಣ ಪಾತ್ರಗಳಿಂದಲೇ ಖ್ಯಾತಿ ಗಳಿಸಿರುವ ನಟ ಇತ್ತೀಚೆಗೆ ಕೊಟ್ಟಿರುವ ಹೇಳಿಕೆಯೊಂದು ಭಾರೀ ವೈರಲ್ ಆಗಿದೆ. ಹೌದು ಸ್ಯಾಂಡಲ್‌ವುಡ್‌ನಲ್ಲಿ ಸಣ್ಣ ಪಾತ್ರಗಳು ಹಾಗೂ ಮುಖ್ಯಭೂಮಿಕೆಯಲ್ಲೂ ಕಾಣಿಸಿಕೊಂಡಿರುವ ಮತ್ತು ಮುಖ್ಯವಾಗಿ ಸಹಜ ಅಭಿನಯದಿಂದಲೇ ಗಮನ ಸೆಳೆದಿರುವ ನಟ ಗೋಪಾಲಕೃಷ್ಣ ದೇಶಪಾಂಡೆ ಅವರು ನಾನು ವರ್ಜಿನ್ ಅಪ್ಪ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಕಾರಣ ಅವರಿಗೆ ಸಿಕ್ಕ ಪಾತ್ರಗಳು. ಯಾವ ಕಾರಣಕ್ಕೆ ಅವರು ತಮ್ಮನ್ನು ವರ್ಜಿನ್ ಅಪ್ಪ ಅಂತ ಕರೆದುಕೊಂಡಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ವಿವರಣೆ ಏನು ಅಂತ ನೋಡೋಣ.

Famous Kannada actor Gopalkrishna Deshpande as I am Virgin Dad

ಗೋಪಾಲಕೃಷ್ಣ ದೇಶಪಾಂಡೆ ಅವರು, ನಾನು ಕಿರುತೆರೆಯ ವರ್ಜಿನ್ ಅಪ್ಪ ಎಂದು ಕರೆದುಕೊಂಡಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣವೂ ಮಜವಾಗಿದೆ. 29ನೇ ವಯಸ್ಸಿನಲ್ಲಿಯೇ ಸೀರಿಯಲ್‌ಗಳಲ್ಲಿ ತಂದೆಯ ಪಾತ್ರ ಮಾಡಿದ್ದು. ಆ ಸೀರಿಯಲ್‌ನಲ್ಲಿ 29ನೇ ವಯಸ್ಸಿಗೇ ಮಗಳು-ಅಳಿಯನನ್ನು ಕಂಡಿದ್ದೆಲ್ಲವೂ ಈ ರೀತಿ ಕರೆದುಕೊಳ್ಳುವುದಕ್ಕೆ ಕಾರಣ. ಗೋಪಾಲಕೃಷ್ಣ ದೇಶಪಾಂಡೆ ಅವರು ಸಹಜ ಅಭಿನಯದಿಂದಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು ಮಾಡುವ ಸಣ್ಣ ಪಾತ್ರಗಳು ಸಹ ಜನರ ಮೇಲೆ ಪ್ರಭಾವ ಬೀರಿರುವುದು ಇದೆ.

ಕನ್ನಡದಲ್ಲಿ ಶಾಖಾಹಾರಿ, 777 ಚಾರ್ಲಿ, ಸಪ್ತ ಸಾಗರದಾಜೆ ಎಲ್ಲೋ ಸೈಡ್ ಎ & ಬಿ, ಗರುಡ ಗಮನ ವೃಷಭ ವಾಹನ ಸಿನಿಮಾಗಳಲ್ಲಿ ಅವರು ಮಿಂಚಿದ್ದಾರೆ. ಸಿನಿಮಾಗೆ ಬರುವ ಮುಂಚೆ ಅವರು ಕಿರುತೆರೆಯಲ್ಲೂ ಅಭಿನಯಿಸಿದ್ದರು. ಪುಟ್ಟ ಗೌರಿ ಸೀರಿಯಲ್‌ನಲ್ಲಿ ಅವರು ಕಥಾ ನಾಯಕಿಯ ತಂದೆ ಪಾತ್ರ ಮಾಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುವಾಗ ನಾನು ಎರಡ್ಮೂರು ವರ್ಷ ಸೀರಿಯಲ್‌ಗಳಲ್ಲಿ ನಟಿಸಿದ್ದೆ. ಆ ದಿನಗಳನ್ನು ನಾನು ತುಂಬಾ ಎಂಜಾಯ್ ಮಾಡಿದ್ದೆ. 29ನೇ ವಯುಸ್ಸಿಗೇ ನನಗೆ ಜವಾಬ್ದಾರಿಯುತ ಪಾತ್ರ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ.

ನಾನು ಮದುವೆ ಆಗುವುದಕ್ಕೆ ಹೋದಾಗ ಅಷ್ಟು ದೊಡ್ಡ ವ್ಯಕ್ತಿಗೆ ನಮ್ಮ ಮಗಳನ್ನು ಕೊಡಲ್ಲ ಎಂದಿದ್ದರು. ಹೀಗಾಗಿ ನಾನು ಕಿರುತೆರೆಯ ವರ್ಜಿನ್ ಅಪ್ಪ ಅಂತ ಹೇಳಿಕೊಂಡು ನಕ್ಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+