500 ಸಿನಿಮಾದಲ್ಲಿ ನಟಿಸಿದ ಹಿರಿಯ ನಟನ ಮೇಲೆ ಮಗನಿಂದಲೇ ದೂರು ದಾಖಲು!
Mohanbabu vs Manoj: ತೆಲುಗು ಚಿತ್ರರಂಗದ ಪ್ರಮುಖ ನಟರೊಬ್ಬರ ಮೇಲೆ ಅವರ ಮಗನೇ ದೂರು ದಾಖಲು ಮಾಡಿದ್ದು, ಈ ಕೌಟುಂಬಿಕ ಜಗಳ ಬೀದಿಗೆ ಬಿದ್ದಂತಾಗಿದೆ. ತೆಲುಗು ಚಿತ್ರರಂಗದ ಮೇರು ನಟ ಮೋಹನ್ ಬಾಬು ಅವರ ಮೇಲೆ ಅವರ ಮಗನೇ ದೂರು ದಾಖಲು ಮಾಡಿದ್ದಾರೆ.
ಮೋಹನ್ ಬಾಬು ಅವರ ಮಗ ಸಹ ನಟನಾಗಿ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಮೋಹನ್ ಬಾಬು ಅವರ ಪುತ್ರಿ ಹಾಗೂ ಇಬ್ಬರು ಪುತ್ರರು ಸಿನಿಮಾ ರಂಗದಲ್ಲಿ ಗುರುತಿಸಿಕೊಂಡು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇವರ ಕುಟುಂಬದಲ್ಲಿನ ವಿಚಾರ ತಂದೆಯ ಮೇಲೆ ಮಗ ದೂರು ನೀಡುವ ಮೂಲಕ ಬೀದಿಗೆ ಬಂದಂತಾಗಿದೆ.

ಮೋಹನ್ ಬಾಬು ಅವರ ಕುಟುಂಬವು ಟಾಲಿವುಡ್‌ನಲ್ಲಿ (ತೆಲುಗು ಚಿತ್ರರಂಗದಲ್ಲಿ) ಮಂಚು ಫ್ಯಾಮಿಲಿ ಅಂತಲೇ ಫೇಮಸ್. ಬಾಬು ಅವರು ಹಲವು ಪೌರಾಣಿಕ ಸಿನಿಮಾಗಳಲ್ಲಿ ನಟಿಸಿದ್ದು ಸಿಕ್ಕಾಪಟ್ಟೆ ಫೇಮಸ್ ಹಾಗೂ ಹಿರಿಯ ನಟ. ಅವರ ಮೂವರು ಮಕ್ಕಳು ಸಹ ತೆಲುಗು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಪದ್ಮ ಶ್ರೀ ಹಾಗೂ ಜೀವಮಾನ ಸಾಧನೆಯ ಪ್ರಶಸ್ತಿಗಳಿಗೆ ಇವರು ಪಾತ್ರರಾಗಿದ್ದಾರೆ.
500ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಖ್ಯಾತಿ ಇವರಿಗೆ ಇದೆ. ಅದು ಸಹ ಇದರಲ್ಲಿ ಲೀಡ್ ಕ್ಯಾರೆಕ್ಟರ್‌ಗಳ ಸಂಖ್ಯೆಯೇ ಹೆಚ್ಚು. ತೆಲುಗು ಚಿತ್ರರಂಗದಲ್ಲಿ ಇವರು ಪೌರಾಣಿಕ ಪಾತ್ರ ಹಾಗೂ ಗಂಭೀರ ಅಭಿನಯದಿಂದ ಫೇಮಸ್ ಆಗಿದ್ದಾರೆ. ಆದರೆ, ಇದೀಗ ಅವರ ಮಗನೇ ಅವರ ಮೇಲೆ ತಿರುಗಿ ಬಿದ್ದಾರೆ. ಅವರು ಸಹ ತೆಲುಗು ಚಿತ್ರರಂಗದ ಪ್ರಮುಖ ನಟ.

ಮೋಹನ್ ಬಾಬು ಅವರ ಕಿರಿಯ ಮಗ ಹಾಗೂ ನಟ ಮಂಜು ಮನೋಜ್ ಅವರು ಮೋಹನ್ ಬಾಬು ವಿರುದ್ಧವೇ ದೂರು ಕೊಟ್ಟಿದ್ದಾರೆ. ಮೋಹನ್ ಬಾಬು ಅವರು ನನ್ನ ಮೇಲೆ, ನನ್ನ ಪತ್ನಿ ಹಾಗೂ ಮಕ್ಕಳ ಮೇಲೂ ದಾಳಿ ಮಾಡಿದ್ದಾರೆ ಎಂದು ಮಂಚು ದೂರಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೋಹನ್ ಬಾಬು ಅವರು ಗಾಯವಾಗುವಂತೆ ಹೊಡೆದಿದ್ದಾರೆ ಎಂದಿದ್ದು. ಇದು ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದೆ. ತೆಲುಗು ಚಿತ್ರರಂಗದಲ್ಲಿ ಅಗ್ರಗಣ್ಯರಾಗಿ ಮಿಂಚಿದ್ದ ಇಂದಿಗೂ ಫೇಮ್ ಇರುವ ನಟ ಈ ರೀತಿ ಮಾಡಿದ್ದಾರೆ ಎನ್ನುವುದು ವಿವಾದಕ್ಕೆ ಕಾರಣವಾಗಿದೆ.
ಆಸ್ತಿ ವಿಚಾರವಾಗಿ ಜಗಳ: ಇನ್ನು ಮಂಚು ಕುಟುಂಬ (ಮಂಚು ಭಕ್ತವತ್ಸಲಂ ನಾಯ್ಡು ಅಂದರೆ ನಟ, ನಿರ್ಮಾಪಕ ಮೋಹನ್ ಬಾಬು) ಅವರ ಕುಟುಂಬದಲ್ಲಿ ಕಳೆದ ಕೆಲವು ವರ್ಷಗಳಿಂದ ಆಸ್ತಿ ವಿಚಾರವಾಗಿ ಜಗಳ ಆಗುತ್ತಿದೆ ಎನ್ನಲಾಗುತ್ತಿದೆ. ಇದೀಗ ಮಂಚು ಅವರು ಅವರ ತಂದೆಯ ವಿರುದ್ಧ ದೂರು ದಾಖಲಿಸಿದ್ದಾರೆ.
ಕೆಲವು ತಿಂಗಳು ಮುಂಚೆ ಅವರ ಸಹೋದರ ಹಾಗೂ ತೆಲುಗು ಚಿತ್ರರಂಗದ ನಟ ಮಂಚು ವಿಷ್ಣು ಅವರ ವಿರುದ್ಧವೂ ಕಂಪ್ಲೇಂಟ್ ಮಾಡಿದ್ದರು. ಇನ್ನು ಮಂಚು ಕುಟುಂಬಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಇದೆ. ಇದೇ ಕಾರಣಕ್ಕಾಗಿ ಕುಟುಂಬದಲ್ಲಿ ಆಗಾಗ ಜಗಳವಾಗುತ್ತಿದೆ ಎಂದು ಹೇಳಲಾಗಿದೆ.
ಪ್ರತಿ ದೂರು ದಾಖಲು: ನಟ ಹಾಗೂ ಮಗ ದೂರು ದಾಖಲಿಸುತ್ತಿದ್ದಂತೆಯೇ ಹಿರಿಯ ನಟ ಮೋಹನ್ ಬಾಬು ಅವರು ಸಹ ಮಗ ಮಂಚು ಮನೋಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಆ ದೂರಿನಲ್ಲಿ ಮನೋಜ್ ನನ್ನ ಮೇಲೆ ಹಲ್ಲೆ ಮಾಡಿದ್ದಾಎಎ ಎಂದು ಹೇಳಿದ್ದಾರೆ. ಹೀಗಾಗಿ ಪ್ರತಿ ದೂರು ದಾಖಲಾಗಿದೆ.












Click it and Unblock the Notifications