Sharukh Khan: ಡಂಕಿ + ಶಾರುಖ್ ಖಾನ್ = ಜಂಗಿ ಕುಸ್ತಿ!

ಟಿಕ್.. ಟಿಕ್.. ಟಿಕ್.. ಟಿಕ್.. ಬರುತಿದೆ ಕಾಲ.. ಯೆಸ್, 'ಬಾಲಿವುಡ್ ಕಾ ಬಾದ್‌ ಶಾ' ಶಾರುಖ್ ಖಾನ್ ಮತ್ತೊಮ್ಮೆ ಅಬ್ಬರಿಸಲು ಸಜ್ಜಾಗಿದ್ದಾರೆ. 'ಡಂಕಿ' ಮೂಲಕ ಗಲ್ಲಾಪೆಟ್ಟಿಗೆ ಧೂಳ್ ಧೂಳ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಈ ಕಾರಣಕ್ಕೆ ಶಾರುಖ್ ಖಾನ್‌ ಸಿನಿಮಾಗೆ ಕೋಟ್ಯಂತರ ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿದ್ದಾಗಲೇ ಶಾರುಖ್ ಖಾನ್ ಜಂಗಿ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ.

'ಡಂಕಿ' ಬಹುನಿರೀಕ್ಷಿತ ಸಿನಿಮಾಗಳ ಪೈಕಿ ಒಂದಾಗಿದ್ದು, ಶಾರುಖ್ ಖಾನ್ & ರಾಜ್ ಕುಮಾರ್ ಹಿರಾನಿ ಜೋಡಿ ಇತ್ತೀಚೆಗಷ್ಟೇ ಚಿತ್ರದ ಟೀಸರ್ ರಿಲೀಸ್ ಮಾಡಿದ್ರು. ಇನ್ನು ಅಭಿಮಾನಿಗಳಿಂದ ಟೀಸರ್‌ಗೂ ಭರ್ಜರಿ ರಿಯಾಕ್ಷನ್ ಸಿಕ್ಕಿದೆ. ಇನ್ನೇನು ಡಂಕಿ ರಿಲೀಸ್‌ಗು ಕೌಂಟ್‌ಡೌನ್ ಶುರುವಾದ ಹಿನ್ನೆಲೆ ಚಿತ್ರ ತಂಡ ಪ್ರಮೋಷನ್ ಶುರು ಮಾಡಿದೆ. ಈ ವೇಳೆ ಶಾರುಖ್ ಖಾನ್ ಫೈಟ್ ಗಮನ ಸೆಳೆದಿದೆ. ಅರೆರೆ ಹಾಗಾದರೆ ಬಾಲಿವುಡ್ ಬಾದ್ ಶಾ ಶಾರುಖ್ ದಿಢೀರ್ ಕುಸ್ತಿ ಅಖಾಡದಲ್ಲಿ ಕಾಣಿಸಿಕೊಂಡಿದ್ದು ಏಕೆ?

Explore Why Shah Rukh Khan Fans Started Discussion Over Dunki Song

ಶಾರುಖ್ ಅಭಿಮಾನಿಗಳ ಚರ್ಚೆ ಏನು?

ಯೆಸ್ ಡಂಕಿ ಕ್ರೇಜ್ ಜೋರಾಗಿದೆ. ಟೀಸರ್ ಧೂಳೆಬ್ಬಿಸಿದ ನಂತರ ಲುಟ್ ಪುಟ್ ಗಯಾ ಎಂಬ ಮೆಲೋಡಿ ಹಾಡು ಎಲ್ಲರ ಗಮನ ಸೆಳೆದಿದೆ. ಶಾರುಖ್ ಖಾನ್ ಮತ್ತು ತಾಪ್ಸಿ ಪನ್ನು ನಡುವಿನ ಪ್ರೇಮ ಗೀತೆ ಹಿಟ್ ಲೀಸ್ಟ್ ಸೇರಿದೆ. ಈಗ ಈ ಹಾಡಿನ ಒಂದು ಸಿನ್ ಎಲ್ಲೆಡೆ ವೈರಲ್ ಆಗ್ತಾ ಇದೆ. ಶಾರುಖ್ ಫ್ಯಾನ್ಸ್ ಹುಬ್ಬೇರಿಸಿದ್ದಾರೆ. ಡಂಕಿಯ ಲುಟ್ ಪುಟ್ ಗಯಾನಲ್ಲಿ, ಕುಸ್ತಿ ಅಖಾಡದಲ್ಲಿ ತಾಪ್ಸಿ ಅವರು ಶಾರುಖ್‌ ಅವರಿಗೆ ಶಾಕ್ ಕೊಡ್ತಾರೆ. ಅದೆ ರೀತಿ ಜವಾನ್ ಸಿನಿಮಾ ಹಾಡಿನಲ್ಲಿ ದೀಪಿಕಾ ಕೂಡ ಶಾರುಖ್ ಅವರನ್ನು ಎತ್ತಿ ಕುಸ್ತಿ ಆಡಿ ಶಾಕ್ ಕೊಟ್ಟಿದ್ದರು. ಹೀಗೆ ಈ 2 ಸೀನ್ಸ್ ನೋಡಿದ ಫ್ಯಾನ್ಸ್ ಕಿಂಗ್ ಖಾನ್ ಕುಸ್ತಿ ವಿಚಾರದಲ್ಲಿ ಹಿಂದೆ ಬಿದ್ದಿದ್ಯಾಕೆ? ಅಂತಾ ಚರ್ಚೆ ಶುರು ಮಾಡಿದ್ದಾರಂತೆ.

ಸ್ಟಾರ್‌ಗಳ ದಂಡೇ ನಟನೆ ಮಾಡಿದೆ

ಅಷ್ಟಕ್ಕೂ 'ಡಂಕಿ' ಸಿನಿಮಾಗೆ ಡಿಫರೆಂಟ್ ಆಗಿ ಕಥೆ ಹೆಣೆದಿದ್ದಾರೆ ರಾಜ್‌ಕುಮಾರ್ ಹಿರಾನಿ. ಭಾರತದ ಪಂಜಾಬ್‌ & ಸುತ್ತಮುತ್ತಲಿನ ಪ್ರದೇಶದಿಂದ ಕಾನೂನು ಬಾಹಿರವಾಗಿ ಕೆನಡಾ ಹಾಗೂ ಅಮೆರಿಕಗೆ ತೆರಳುವವರನ್ನ ಕೇಂದ್ರಿಕರಿಸಿ ಸಿನಿಮಾ ಮಾಡಲಾಗಿದೆ. ವಿದೇಶ, ಪ್ರೀತಿ, ಸ್ನೇಹ, ತಾಯ್ನಾಡು ಇಂತಹದ್ದೇ ಎಳೆ ಆಧರಿಸಿ ರಾಜ್ ಕುಮಾರ್ ಹಿರಾನಿ, ಅಭಿಜಿತ್ ಜೋಶಿ & ಕನಿಕಾ ಧಿಲ್ಲೋನ್ 'ಡಂಕಿ'ಗೆ ಕಥೆ ಹೆಣೆದಿದ್ದಾರೆ. ಶಾರುಖ್ ಖಾನ್ ಜೊತೆಗೆ ಸ್ಟಾರ್ಸ್ ದಂಡೇ ಸಿನಿಮಾಗೆ ಸಾಥ್ ನೀಡಿದೆ.

Explore Why Shah Rukh Khan Fans Started Discussion Over Dunki Song

ಇನ್ನೇನು 'ಡಂಕಿ' ಸಿನಿಮಾ ತೆರೆಗೆ ಬರಲು ಅಂತಿಮ ಸಿದ್ಧತೆ ನಡೆಸಿದ್ದು, ಕಮಾಲ್ ಮಾಡೋಕೆ ಸಜ್ಜಾಗಿದೆ. ನಾಯಕನಾಗಿ ಶಾರುಖ್ ಖಾನ್ ನಟಿಸಿದ್ದರೆ, ತಾಪ್ಸಿ ಪನ್ನು, ಬೋಮನ್ ಇರಾನಿ, ವಿಕ್ಕಿ ಕೌಶಲ್, ಅನಿಲ್ ಗ್ರೋವರ್ & ವಿಕ್ರಮ್ ಕೊಚ್ಚರ್ ನಟಿಸಿದ್ದಾರೆ. ಸಿನಿಮಾ ಡಿಸೆಂಬರ್ 22 ಕ್ಕೆ ಜಗತ್ತಿನಾದ್ಯಂತ ಸಿನಿಮಾ ರಿಲೀಸ್ ಆಗಲಿದೆ. ಈ ಮೂಲಕ ಭಾರತೀಯ ಸಿನಿಮಾ ಅಖಾಡ ಮತ್ತೊಂದು ಇಂಡಸ್ಟ್ರಿ ಹಿಟ್ ಸಿನಿಮಾಗೆ ಸಿದ್ಧವಾಗಿದೆ ಅಂತಿದ್ದಾರೆ ಶಾರುಖ್ ಖಾನ್ ಅವರ ಅಭಿಮಾನಿಗಳು. ಹೀಗಾಗಿ ಡಿಸೆಂಬರ್ 22 ಕ್ಕೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಹಾಗೆ ಹೊಸ ವರ್ಷಕ್ಕೆ ಶಾರುಖ್ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ಕೂಡ ಸಿಗಲಿದೆ. ಚಿತ್ರ ತಂಡದ ಶ್ರಮ ಕೂಡ ಹೆಚ್ಚಾಗಿದ್ದು 'ಡಂಕಿ' ಸಿನಿಮಾ ತೆರೆಗೆ ತರಲು ಬೇಕಾದ ತಯಾರಿ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+