ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ!

ಇನ್ನೇನು ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅಭಿನಯದ 'ಕಾಟೇರ' ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಈ ಮೂಲಕ ನಟ ದರ್ಶನ್ ಕನ್ನಡ ಸಿನಿ ಪ್ರೇಕ್ಷಕರ ರಂಜಿಸಲು ಬರುತ್ತಿದ್ದಾರೆ. 457 ಥಿಯೇಟರ್‌ಗಳಲ್ಲಿ 'ಕಾಟೇರ' ಸಿನಿಮಾ ರಿಲೀಸ್ ಆಗುತ್ತಿದೆ. ಡಿ.29ರಿಂದ ಅದ್ಧೂರಿಯಾಗಿ ರಿಲೀಸ್ ಆಗಲಿದ್ದು, ಸಂಭ್ರಮಾಚರಣೆಗೆ ಫ್ಯಾನ್ಸ್ ಸಿದ್ಧವಾಗಿದ್ದಾರೆ. ಈಗಾಗಲೇ ಸುಮಾರು 1 ಲಕ್ಷ 'ಕಾಟೇರ' ಸಿನಿಮಾ ಟಿಕೆಟ್‌ಗಳು ಮುಂಗಡವಾಗಿ ಬುಕ್ ಆಗಿವೆ ಎನ್ನಲಾಗಿದೆ.

ದರ್ಶನ್ ಅವರು 2023ರ ಅಂತ್ಯದಲ್ಲಿ, ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ಕೊಡಲು ಸಜ್ಜಾಗಿದ್ದಾರೆ. ಈ ಮೂಲಕ 2024ರ ಆರಂಭಕ್ಕೂ ಮೊದಲು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಕಾಟೇರ ಸಿನಿಮಾದ ಹಲವು ಶೋಗಳು ಬೆಳ್ಳಂ ಬೆಳಗ್ಗೆ ಶುರು ಆಗ್ತಿವೆ. ಹೀಗೆ ಬೆಳಗ್ಗೆಯಿಂದಲೇ ಕಾಟೇರ ಅಬ್ಬರ ಶುರುವಾಗಲಿದೆ. ಇದೇ ಕಾರಣಕ್ಕೆ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಈಗ ಅಬ್ಬರದಿಂದ ಸಾಗಿದೆ. ಪರಭಾಷೆ ಸಿನಿಮಾಗಳ ಹಾವಳಿ ನಡುವೆ ಕನ್ನಡ ಸಿನಿಮಾ ಇದೀಗ ಅಬ್ಬರಿಸಲು ಸಜ್ಜಾಗಿದೆ. ಹಾಗಾದ್ರೆ ಕರ್ನಾಟಕದ ಯಾವೆಲ್ಲಾ ಥಿಯೇಟರ್‌ನಲ್ಲಿ 'ಕಾಟೇರ'ದ ಅಬ್ಬರ ಶುರುವಾಗುತ್ತೆ? ಮುಂದೆ ಓದಿ.

Explore The Sandalwood Movie Kaatera Theater Details

'ಕ್ರಾಂತಿ' ಬಳಿಕ 'ಕಾಟೇರ' ಸದ್ದು!

ಈ ವರ್ಷವೇ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎರಡೆರಡು ಸಿನಿಮಾಗಳು ರಿಲೀಸ್ ಆಗುತ್ತಿವೆ. ಈಗಾಗಲೇ ರಿಲೀಸ್ ಆಗಿದ್ದ 'ಕ್ರಾಂತಿ' ಹಲವು ದಾಖಲೆ ಸೃಷ್ಟಿ ಮಾಡಿದೆ. ಇದೇ ರೀತಿ ಈಗ 'ಕಾಟೇರ' ಕೂಡ ಸದ್ದು ಮಾಡಲು ಸಜ್ಜಾಗಿದ್ದು. ಹಲವು ತಿಂಗಳಿಂದಲೂ ನಟ ದರ್ಶನ್ ಅವರ ಫ್ಯಾನ್ಸ್ ಈ ಸಿನಿಮಾ ಎಂಟ್ರಿಗೆ ಕಾಯುತ್ತಿದ್ದರು. ಹಾಗೇ ಸಿನಿಮಾ ತಂಡವು ಕೂಡ ಅಬ್ಬರದಿಂದ ಕೆಲಸಗಳನ್ನು ಮುಗಿಸಿದ್ದು, ಹೊಸ ವರ್ಷಕ್ಕೆ ಮೊದಲು ಅದ್ಧೂರಿಯಾಗಿ ರಿಲೀಸ್ ಮಾಡುತ್ತಿದೆ.

ಬಾಕ್ಸ್ ಆಫಿಸ್‌ನಲ್ಲಿ ಹೊಸ ದಾಖಲೆ?

ಈಗಾಗಲೇ ಹಲವು ಹಾಡುಗಳು & ಟ್ರೇಲರ್ ಮೂಲಕ 'ಕಾಟೇರ' ಸದ್ದು ಜೋರಾಗುತ್ತಿದೆ. ಹೀಗಾಗಿ ಗಲ್ಲಾಪೆಟ್ಟಿಗೆ ಅಖಾಡದಲ್ಲಿ ಕೂಡ ಅಬ್ಬರದ ಕಲೆಕ್ಷನ್ ಮಾಡುವ ಮುನ್ಸೂಚನೆಯ ಕೂಡ ಕೊಟ್ಟಿದೆ 'ಕಾಟೇರ' ಸಿನಿಮಾ. ಕರ್ನಾಟಕದ ಮೂಲೆ ಮೂಲೆಯಲ್ಲೂ ನಟ ದರ್ಶನ್ ಅವರ ಈ ಸಿನಿಮಾ ಸದ್ದು ಮಾಡು ಸಿದ್ಧವಾಗಿದೆ. ಹಳೇ ಮೈಸೂರು, ದಕ್ಷಿಣ ಕರ್ನಾಟಕ ಸೇರಿದಂತೆ ಮಧ್ಯ ಕರ್ನಾಟಕ ಹಾಗೂ ಉತ್ತರ ಕರ್ನಾಟಕದ ನೂರಾರು ಚಿತ್ರಮಂದಿರ ಇದೇ ಸಮಯಕ್ಕಾಗಿ ಕಾಯುತ್ತಿವೆ. ಕಾಟೇರ ಅಬ್ಬರ ಶುರುವಾಗಲು ಕೌಂಟ್‌ಡೌನ್ ಶುರುವಾಗಿದೆ.

ಒಟ್ನಲ್ಲಿ ಹೊಸ ವರ್ಷಕ್ಕೂ ಮೊದಲು, ನಟ ದರ್ಶನ್ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಮೇಲೆ ಸರ್ಪ್ರೈಸ್ ಸಿಗುತ್ತಿದೆ. ಈಗಾಗಲೇ ಬಹುತೇಕ ಥಿಯೇಟರ್‌ಗಳಲ್ಲಿ, ಟಿಕೆಟ್ ಬುಕಿಂಗ್ ಶುರುವಾಗಿ ಟಿಕೆಟ್‌ಗಳು ಕೂಡ ಸೋಲ್ಡ್ ಔಟ್ ಆಗಿವೆ. ಸಿನಿಮಾ ನೋಡೋದಕ್ಕೆ, ಅಭಿಮಾನಿ ಬಳಗ ಕಾಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+