Leelavathi: ನಟಿ ಲೀಲಾವತಿ ಅಭಿನಯಿಸಿದ್ದ ಸಿನಿಮಾಗಳು ಯಾವುವು?
ಲೀಲಾವತಿ ಅವರು ಕನ್ನಡ ಸಿನಿಮಾ ರಂಗದ ಕೋಟ್ಯಂತರ ಅಭಿಮಾನಿಗಳನ್ನ ಅಗಲಿದ್ದಾರೆ. ಇದರ ಜೊತೆಗೆ ನೂರಾರು ಚಿತ್ರಗಳ ಮೂಲಕ ಕನ್ನಡಿಗರಿಗೆ ತಮ್ಮ ನೆನಪನ್ನ ಕೂಡ ಉಳಿಸಿ ಹೋಗಿದ್ದಾರೆ. ಕನ್ನಡ ಸೇರಿ ಮಲಯಾಳಂ, ತಮಿಳು & ತೆಲುಗು ಭಾಷೆಗಳಲ್ಲಿಯೂ ಮಿಂಚಿದ್ದ ನಟಿ ಕೋಟ್ಯಂತರ ಅಭಿಮಾನಿ ಬಳಗವನ್ನು ಈಗ ಬಿಟ್ಟು ಮರೆಯಾಗಿದ್ದಾರೆ. 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಲೀಲಾವತಿ ಅವರು, ಕನ್ನಡದಲ್ಲಿ ಮಾಡಿದ್ದ ಸಿನಿಮಾಗಳ ಸಂಪೂರ್ಣ ಪಟ್ಟಿ ಇಲ್ಲಿದೆ.
ನಟಿ ಲೀಲಾವತಿ ಅವರು ಜನಿಸಿದ್ದು 1937ರ ಡಿ. 24 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಕಡು ಬಡತನದಲ್ಲಿ ಹುಟ್ಟಿದ್ದ ಲೀಲಾವತಿ ಅವರು, ನಾನಾ ಸಮಸ್ಯೆ ಎದುರಿಸಿದ್ದರು. ನಟಿ ಲೀಲಾವತಿ ಓದಿದ್ದು 2ನೇ ತರಗತಿವರೆಗೆ. ಹಲವು ಸಮಸ್ಯೆ ಕಾರಣಕ್ಕೆ ಮುಂದಕ್ಕೆ ಶಾಲೆಗೆ ಹೋಗಲು ಸಾಧ್ಯ ಆಗಲಿಲ್ಲ. ಹೀಗಾಗಿಯೆ ಮನೆ ಕೆಲಸಕ್ಕೆ ಹೋಗಿ ಜೀವನವನ್ನ ಸಾಗಿಸಬೇಕಾದ ಸ್ಥಿತಿ ಬಂದಿತ್ತು. ಹೀಗಿದ್ದಾಗ ಅವರ ಭಾಗ್ಯದ ಬಾಗಿಲು ತೆರೆದಿತ್ತು, ನಟನೆ ಅವಕಾಶಗಳು ಅವರನ್ನು ಕೈಬೀಸಿ ಕರೆದಿದ್ದವು.

ಸಾಲು ಸಾಲು ಸಿನಿಮಾಗಳಲ್ಲಿ ನಟನೆ
1958ರಲ್ಲಿ ಮಾಂಗಲ್ಯ ಯೋಗ ಮೊದಲ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ನಟಿ ಲೀಲಾವತಿ ಅವರು, ಭಕ್ತ ಪ್ರಹ್ಲಾದ ಕನ್ನಡ, 1959ರಲ್ಲಿ ರಾಜ ಮಲಯ ಸಿಂಹ ಚಿತ್ರದ ಮೂಲಕ ವೃತ್ತಿ ಜೀವನದಲ್ಲಿ ಮುಂದೆ ಸಾಗಿದರು. ಅದೇ ವರ್ಷ ಅಬ್ಬಾ ಆ ಹುಡುಗಿ ಚಿತ್ರ ಕೂಡ ಬಿಡುಗಡೆ ಆಗಿತ್ತು. 1959ರಲ್ಲೇ ಧರ್ಮ ವಿಜಯ, 1960ರಲ್ಲಿ ದಶವತಾರ, ರಣಧೀರ ಕಂಠೀರವ, ರಾಣಿ ಹೊನ್ನಮ್ಮ, 1961ರಲ್ಲಿ ಕೈವಾರ ಮಹಾತ್ಮೆ ಮತ್ತು ಕಣ್ತೆರೆದು ನೋಡು, ಕಿತ್ತೂರು ಚೆನ್ನಮ್ಮ ಸಿನಿಮಾಗಳಲ್ಲಿ ನಟಿಸಿದ್ದರು.
ನೂರಾರು ಹಿಟ್ ಸಿನಿಮಾಗಳು
ಮುಂದೆ ಗಾಳಿ ಗೋಪುರ, ಕರುಣೆಯೇ ಕುಟುಂಬದ ಕಣ್ಣು, ಭೂದಾನ ಸೇರಿ ಮನ ಮೆಚ್ಚಿದ ಮಡದಿ, ನಂದಾ ದೀಪಾ, ಪಟ್ಟಿನಥರ್ (ತಮಿಳು), ರಾಣಿ ಚೆನ್ನಮ್ಮ, ರತ್ನ ಮಂಜರಿ ಮತ್ತು ಸುಮತಾಂಗಿ (ತಮಿಳು, ವಲರ್ ಪಿರಾಯಿ (ತಮಿಳು), ವಿಧಿ ವಿಲಾಸ, ಕುಲವಧು ಸೇರಿದಂತೆ ಕನ್ಯಾರತ್ನ, ಕಲಿತರೂ ಹೆಣ್ಣೆ, ಬೇವು ಬೆಲ್ಲ, ಜೀವನ ತರಂಗ, ಮಲ್ಲಿ ಮದುವೆ ಮತ್ತು ಮನ ಮೆಚ್ಚಿದ ಮಡದಿ, ಸಂತ ತುಕರಾಮ, ವಾಲ್ಮಿಕಿ, ವೀರ ಕೇಸರಿ, ಮರ್ಮಯೋಗಿ (ತೆಲುಗು), ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಚಂದ್ರಹಾಸ ಹಾಗೂ ಇದೆ ಮಹಾಸುದಿನ, ಮದುವೆ ಮಾಡಿ ನೋಡು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ವರನಟ ಡಾ.ರಾಜ್ ಜೊತೆ ನಟನೆ
ನಟಿ ಲೀಲಾವತಿ ಅವರು ಡಾ.ರಾಜ್‌ಕುಮಾರ್‌ರ ಜೊತೆ ಹತ್ತಾರು ಸಿನಿಮಾದಲ್ಲಿ ನಟಿಸಿದ್ರು. ವೀರ ಕೇಸರಿ, ಭಕ್ತ ಕುಂಬಾರ, ನಾ ನಿನ್ನ ಮರೆಯಲಾರೆ, ಜ್ವಾಲಾಮುಖಿ ಹಾಗೂ ಅಬ್ಬಾ ಆ ಹುಡುಗಿ, ರಣಧೀರ ಕಂಠೀರವ, ಕರುಣೆಯೇ ಕುಟುಂಬದ ಕಣ್ಣು, ಕಲಿತರು ಹೆಣ್ಣೆ, ನಂದಾ ದೀಪಾ, ಸಂತ ತುಕರಾಂ, ವಾಲ್ಮಿಕಿ, ಮಹಾಸತಿ ಅನುಸೂಯ, ಸಿಪಾಯಿ ರಾಮು, ಶ್ರಾವಣ ಬಂತು, ಮೂರುವರೆ ವಜ್ರಗಳು, ಜಗಜ್ಯೋತಿ ಬಸವೇಶ್ವರ, ರಾಣಿ ಹೊನ್ನಮ್ಮ, ಕೈವಾರ ಮಹಾತ್ಮೆ, ಕಿತ್ತೂರು ಚೆನ್ನಮ್ಮ, ಗಾಳಿ ಗೋಪುರ, ಮನ ಮೆಚ್ಚಿದ ಮಡದಿ, ಚಂದ್ರಹಾಸ.

ಮದುವೆ ಮಾಡಿ ನೋಡು, ಮೋಹಿನಿ ಭಸ್ಮಾಸುರ, ದಶಾವತಾರ, ಭೂಧಾನ ಮತ್ತು ಧರ್ಮ ವಿಜಯ, ಕಣ್ತೇರೆದು ನೋಡು, ವಿಧಿ ವಿಲಾಸ, ಜೀವನ ತರಂಗ, ಕನ್ಯಾ ರತ್ನ, ಕುಲವಧು, ಮಲ್ಲಿ ಮದುವೆ, ಶಿವರಾತ್ರಿ ಮಹಾತ್ಮೆ, ತುಂಬಿದ ಕೊಡ, ಇದೇ ಮಹಾಸುದಿನ ಸಿನಿಮಾಗಳು & ನಾಗಾಪೂಜಾ, ವಾತ್ಸಲ್ಯ, ಪ್ರೇಮಮಯಿ, ತೂಗುದೀಪ, ಗಂಗೇ ಗೌರಿ, ಭಾಗ್ಯ ದೇವತೆ, ಉಯ್ಯಾಲೆ, ದೂರದ ಬೆಟ್ಟ, ವಸಂತ ಗೀತಾ, ಎರಡು ನಕ್ಷತ್ರಗಳು ಚಿತ್ರಗಳಲ್ಲಿ ನಟಿಸಿದ್ದರು.












Click it and Unblock the Notifications