Yuva Movie: ಯುವ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ?
ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಯುವರಾಜ್ ಅದ್ಧೂರಿಯಾಗಿ ಸಿಲ್ವರ್ ಸ್ಕ್ರೀನ್ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಯುವರಾಜ್ ಅಭಿನಯದ ಮೊದಲ ಸಿನಿಮಾ 'ಯುವ' ಮೊದಲನೇ ದಿನ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅದರಲ್ಲೂ ದೊಡ್ಮನೆ 3ನೇ ತಲೆಮಾರು ದೊಡ್ಡ ಮಟ್ಟದ ಸಕ್ಸಸ್ ಪಡೆದಿಲ್ಲ ಎಂಬ ಕೊರಗನ್ನು ಕೂಡ, ಯುವರಾಜ್ ಒಬ್ಬರೇ ನಿಂತು ಸರಿ ಮಾಡಿದ್ದಾರೆ. ಯುವ ಅವರು ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ್ದಾರೆ. ಯುವ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ?
ಇಂದು ನೂರಾರು ಸಿನಿಮಾ ಮಂದಿರದಲ್ಲಿ, ಕರ್ನಾಟಕದ ಮೂಲೆ ಮೂಲೆಯಲ್ಲೂ ಯುವ ಅವರ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿತ್ತು. ಮುಗಿಲೆತ್ತರಕ್ಕೆ ನಿಂತಿದ್ದ ಕಟೌಟ್‌ಗಳನ್ನ ಅಭಿಮಾನಿಗಳು ಸಿನಿಮಾ ಮಂದಿರದ ಎದುರು ಹಾಕಿದ್ದರು. ಹೀಗೆ ಕಟೌಟ್‌ಗೆ ಪೂಜೆ ಮತ್ತು ಹಾಲಿನ ಅಭಿಷೇಕ ಮಾಡುವ ಮೂಲಕ ಆರಂಭವಾದ ಯುವ ರಾಜ್‌ಕುಮಾರ್ ಅವರ ಈ ವಿಜಯದ ಯಾತ್ರೆ, ಸಿನಿಮಾ ಮುಗಿಯುವ ಹೊತ್ತಿಗೆ ಹೊಸ ಇತಿಹಾಸ ಬರೆದಿದೆ. 'ಯುವ' ಸಿನಿಮಾ ಮೊದಲ ದಿನವೇ ಬಹುತೇಕ ಸಿನಿಮಾ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನವನ್ನು ಕಂಡಿದೆ. ಹಾಗಾದರೆ ಯುವ ಸಿನಿಮಾ ಮೊದಲ ದಿನ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

7ರಿಂದ 8 ಕೋಟಿ ರೂಪಾಯಿ ಕಲೆಕ್ಷನ್?
ಥಿಯೇಟರ್ ಮಾಲೀಕರು ಹೇಳುತ್ತಿರುವ ಪ್ರಕಾರ ಯುವ ಸಿನಿಮಾದ ಬಹುತೇಕ ಶೋಗಳು, ಈಗಾಗಲೇ ಸೋಲ್ಡ್ ಔಟ್ ಆಗಿ ಟಿಕೆಟ್ ಬಾಕಿ ಉಳಿದಿಲ್ಲವಂತೆ. ಅದ್ರಲ್ಲೂ ನಾಳೆ ಶನಿವಾರ ಮತ್ತು ನಾಡಿದ್ದು ಭಾನುವಾರ ಆಗಿರುವ ಕಾರಣ 'ಯುವ' ಸಿನಿಮಾಗೆ ಡಿಮ್ಯಾಂಡ್ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎನ್ನಲಾಗಿದೆ. ಈ ಮೂಲಕ ಯುವ ಸಿನಿಮಾ ಮೊದಲ ದಿನವೇ ಬರೋಬ್ಬರಿ 7ರಿಂದ 8 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರಬಹುದು ಅಂತಾ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇನ್ನೂ ಹೊರ ಬಿದ್ದಿಲ್ಲ.
10 ಕೋಟಿ ರೂಪಾಯಿಗೂ ಹೆಚ್ಚು..?
ಮತ್ತೊಂದು ಕಡೆ ಯುವರಾಜ್ ಅವರ ಅಭಿಮಾನಿಗಳು ಈ ಸಿನಿಮಾ ಮೊದಲನೇ ದಿನ 10 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿರಬಹುದು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಈಗ ಪೋಸ್ಟ್ ಹಾಕುತ್ತಿದ್ದಾರೆ. ಹೀಗೆ, ಯುವ ಸಿನಿಮಾ ರಿಲೀಸ್ ಆದ ಮೊದಲ ದಿನ ಅಷ್ಟೊಂದು ಕೋಟಿ ಗಳಿಸಿದೆ, ಇಷ್ಟು ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂಬ ಮಾತುಗಳ ನಡುವೆ ಅಧಿಕೃತ ಹೇಳಿಕೆ ಮಾತ್ರ ಇನ್ನೂ ಹೊರಬಿದ್ದಿಲ್ಲ. ಹೀಗಾಗಿ ಯುವ ಸಿನಿಮಾದ ಮೊದಲನೇ ದಿನದ ಕಲೆಕ್ಷನ್ ಬಗ್ಗೆ ಸಖತ್ ಚರ್ಚೆ ಕೂಡ ಶುರುವಾಗಿದೆ.
ಮಾಹಿತಿಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ
'ಹೊಂಬಾಳೆ ಫಿಲ್ಮ್ಸ್' ಯುವ ಅವರ ಮೊದಲ ಸಿನಿಮಾಗೆ ಬಂಡವಾಳ ಹೂಡಿದೆ. ಮೊದಲ ಸಿನಿಮಾಗೆ ಯುವ ಸಾಕಷ್ಟು ಕಷ್ಟಪಟ್ಟಿದ್ದಾರೆ. ಅದರಲ್ಲೂ ಸಂತೋಷ್ ಆನಂದ್ ರಾಮ್ ಮತ್ತೆ ದೊಡ್ಮನೆ ನಟನಿಗೆ ನಿರ್ದೇಶನ ಮಾಡಿದ್ದಾರೆ. ಹೀಗೆ ಸಿನಿಮಾ ಸಿಕ್ಕಾಪಟ್ಟೆ ಕುತೂಹಲ ಕೆರಳಿಸಿತ್ತು ಇದೀಗ ಆ ಕುತೂಹಲ ನಿಜವಾಗಿದೆ. ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಈಗ ಯುವ ಅವರ ಗುಣಗಾನ ಮಾಡುತ್ತಿದ್ದಾರೆ. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿವೆ. ಈ ಮೂಲಕ ಯುವ ಸಿನಿಮಾ ಮೊದಲ ದಿನವೇ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಮಾತು ಓಡಾಡುತ್ತಿದ್ದು, ಅಧಿಕೃತ ಹೇಳಿಕೆಗೆ ಫ್ಯಾನ್ಸ್ ಕಾಯುತ್ತಿದ್ದಾರೆ.
ಥಿಯೇಟರ್ ಸಂಖ್ಯೆ ಏರಿಕೆ?
ಯುವ ರಾಜ್‌ಕುಮಾರ್ ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದರು. ಈಗ ಅವರ ನಿರೀಕ್ಷೆಗಳು ನಿಜವಾಗಿದ್ದು, ಯುವ ಮೊದಲ ಎಂಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಹೀಗಾಗಿ ಈಗ ಎಲ್ಲೆಲ್ಲೂ ಯುವ ಸಿನಿಮಾ ಬಗ್ಗೆಯೇ ಮಾತು ಕೇಳಿಬರುತ್ತಿದೆ. ಹಾಗೇ ಅಭಿಮಾನಿಗಳು ಸಿನಿಮಾ ನೋಡಿ ಖುಷಿಯಾಗಿದ್ದಾರೆ. ಇನ್ನು ಶನಿವಾರ & ಭಾನುವಾರ ಅಭಿಮಾನಿ ಬಳಗದ ಎಂಟ್ರಿ ಮತ್ತಷ್ಟು ಭರ್ಜರಿಯಾಗಿ ಇರಲಿದೆ ಎನ್ನಲಾಗಿದ್ದು. ಹಾಗೇ ಥಿಯೇಟರ್‌ಗಳು ತುಂಬಿ ತುಳುಕುತ್ತಿರುವ ಹಿನ್ನೆಲೆ ಥಿಯೇಟರ್ ಮಾಲೀಕರು ಕೂಡ ಖುಷಿಯಾಗಿದ್ದಾರೆ. ಈಗಾಗಲೇ ಈ ಹಿನ್ನೆಲೆ ಮತ್ತಷ್ಟು ಥಿಯೇಟರ್‌ಗಳ ಸಂಖ್ಯೆ ಏರಿಕೆ ಆಗುವ ಸಾಧ್ಯತೆ ಕೂಡ ದಟ್ಟವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹವಾ!
ಯುವ ರಾಜ್‌ಕುಮಾರ್ ಹೋಲಿಕೆಯಲ್ಲಿ ಕೂಡ ಪುನೀತ್ ಅವರನ್ನು ನೆನಪು ಮಾಡುತ್ತಾರೆ. ಹಾಗೇ ಯುವ ಮಾಡುವ ಸ್ಟಂಟ್ & ಡಾನ್ಸ್ ಕೂಡ ಪುನೀತ್ ರಾಜ್‌ಕುಮಾರ್ ಅವರ ನೆನಪು ಮರುಕಳಿಸುತ್ತೆ. ಹೀಗಿದ್ದಾಗ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿ ಯುವ ಅವರನ್ನು ಫ್ಯಾನ್ಸ್ ಹೊಗಳುತ್ತಿದ್ದಾರೆ. ಸಿನಿಮಾ ನೋಡಿ ಎಂಜಾಯ್ ಮಾಡಿದ್ದಾರೆ. ಹಾಗೇ ಗಲ್ಲಾಪೆಟ್ಟಿಗೆ ತುಂಬಾ ಈ ಸಿನಿಮಾ ಒಳ್ಳೆಯ ಕಾಸು ಕೂಡ ಮಾಡಿದೆ.
ಐತಿಹಾಸಿಕ ಸಿನಿಮಾ ಯಾವಾಗ ಬರುತ್ತೆ?
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಹಿಂದೆಯೇ ಯುವ ರಾಜ್‌ಕುಮಾರ್ ಅವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಬಹುದಿತ್ತು. ಇದಕ್ಕಾಗಿ, ಐತಿಹಾಸಿಕ ಸಿನಿಮಾ ಕಥೆ ಕೂಡ ರೆಡಿಯಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಆ ಸಿನಿಮಾ ತೆರೆಗೆ ಬರಲೇ ಇಲ್ಲ. ಹೀಗಾಗಿ ಆ ಸಿನಿಮಾ ಪ್ರಾಜೆಕ್ಟ್ ಬಿಟ್ಟು ಯುವ ಸಿನಿಮಾ ಒಪ್ಪಿಕೊಂಡಿದ್ದ ದೊಡ್ಡನೆ ಮೊಮ್ಮಗ ಯುವರಾಜ್ ಇದೀಗ ಅಬ್ಬರಿಸುದ್ದಾರೆ.












Click it and Unblock the Notifications