ʼನಾ ನಿನ್ನ ಬಿಡಲಾರೆʼ ಸೀರಿಯಲ್‌ನಲ್ಲಿ ರೋಚಕ ತಿರುವು: ಶರತ್-ದುರ್ಗಾ ಮದುವೆ, ಹಿತಾ ಸಂಭ್ರಮ!

ಕನ್ನಡ ಧಾರಾವಾಹಿಗಳಲ್ಲಿ ಭಿನ್ನ ಕಥೆಯನ್ನು ಹೊಂದಿರುವ ಹಾಗೂ ಪ್ರತಿದಿನವೂ ಹೊಸ ತಿರುವುಗಳನ್ನು ಒಳಗೊಂಡಿರುವ ನಾ ನಿನ್ನ ಬಿಡಲಾರೆ ಇದೀಗ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ. ಈ ಸೀರಿಯಲ್‌ನ ಪ್ರೇಕ್ಷಕರ ನಿರೀಕ್ಷೆಯಂತೆಯೇ ಶರತ್ ಮತ್ತು ದುರ್ಗಾ ಅವರು ಅನಿರೀಕ್ಷಿತ ಬೆಳವಣಿಗೆಯಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸುತ್ತಿದ್ದಾರೆ. ಇದು ಬಹು ದಿನಗಳಿಂದ ಸೀರಿಯಲ್ ವೀಕ್ಷಿಸುತ್ತಿದ್ದ ವೀಕ್ಷಕರ ನಿರೀಕ್ಷೆಯೇ ಆಗಿತ್ತು. ಇಬ್ಬರು ಒಂದಾಗಬೇಕು ಆಗ ಕಥೆ ಒಳ್ಳೆಯ ತಿರುವು ಪಡೆದುಕೊಳ್ಳಲಿದೆ ಎಂದು ಸೀರಿಯಲ್‌ನ ವೀಕ್ಷಕರು ಸಹ ನಿರೀಕ್ಷೆ ಮಾಡುತ್ತಿದ್ದರು.

ಇದೀಗ ಸೀರಿಯಲ್‌ನಲ್ಲಿ ಶರತ್ ಹಾಗೂ ದುರ್ಗಾ ಅವರಿಬ್ಬರು ಅನಿರೀಕ್ಷಿತವಾಗಿ ದಾಂಪತ್ಯಕ್ಕೆ ಜೀವನಕ್ಕೆ ಕಾಲಿರಿಸುತ್ತಿದ್ದಾರೆ ಎನ್ನುವ ಟ್ವಿಸ್ಟ್‌ ತೋರಿಸಲಾಗಿದೆ. ಮಾಯಾಳ ಷಡ್ಯಂತ್ರವನ್ನು ಹಿತಾ ಭೇದಿಸಿದ್ದು. ಶರತ್ ದುರ್ಗಾಳನ್ನು ಮದುವೆಯಾಗಲು ಮುಂದಾಗಿದ್ದಾನೆ. ದುರ್ಗಾಗೆ ಬೇರೊಬ್ಬರೊಂದಿಗೆ ಮದುವೆ ನಿಶ್ಚಯವಾಗಿತ್ತು. ಆದರೆ ಆತ ಮೋಸಗಾರ ಎನ್ನುವುದು ಗೊತ್ತಾಗಿದೆ. ಆದರೂ ದುರ್ಗಾ ಒತ್ತಾಯಕ್ಕೆ ಮಣಿದು ಆತನನ್ನೇ ಮದುವೆಯಾಗುತ್ತೇನೆ ಅಂತಾ ಹೇಳಿದ್ದಾಳೆ. ಆದರೆ ಕೊನೆಯ ಹಂತದಲ್ಲಿ ದುರ್ಗಾಳನ್ನು ಶರತ್ ಕೈಹಿಡಿದಿರುವಂತೆ ತೋರಿಸಲಾಗಿದೆ.

Exciting twist in the serial nanina bidalare Sharath-Durga s wedding Hita s celebration

ನಾ ನಿನ್ನ ಬಿಡಲಾರೆ ಧಾರಾವಾಹಿ ವಿಭಿನ್ನ ಕಥೆಯನ್ನು ಹೊಂದಿದೆ. ಅಲ್ಲದೇ ಈ ಸೀರಿಯಲ್‌ನ ಮೇಕಿಂಗ್‌ನಿಂದಲೇ ಪ್ರಾರಂಭದ ದಿನದಿಂದಲೂ ಹೆಚ್ಚು ಫೇಮಸ್ ಆಗಿದೆ. ದುಷ್ಟ ಶಕ್ತಿಗಳು, ಮಾಟ ಮಂತ್ರ ಹಾಗೂ ದೇವಿ ಮಹಾತ್ಮೆಯ ಮೂಲಕ ಒಳ್ಳೆಯ ವಿಚಾರ ಯಾವಾಗಲೂ ಗೆಲ್ಲುತ್ತದೆ ಎನ್ನುವಂತೆ ತೋರಿಸಿಕೊಂಡು ಬರಲಾಗಿದೆ. ಭಾವನಾತ್ಮಕವಾಗಿ ಒಂದು ಕುಟುಂಬದ ಕತೆಯನ್ನು ಅದ್ಭುತವಾಗಿ ತೋರಿಸಲಾಗುತ್ತಿದೆ. ಇದೀಗ ಈ ಧಾರಾವಾಹಿಯಲ್ಲಿ ದೊಡ್ಡದೊಂದು ಟ್ವಿಸ್ಟ್‌ ಶುರುವಾಗಿದೆ. ದುರ್ಗಾ ಏನೂ ಹೇಳಿದರೂ ಕೇಳದೆ ಇರುವುದರಿಂದ ಹಸೆಮಣೆಗೆ ಶರತ್ ಬಂದು ಕುಳಿತಿರುವುದುನ್ನು ಪ್ರಮೋದಲ್ಲಿ ತೋರಿಸಲಾಗಿದೆ.

ಇಂತಹದ್ದೊಂದು ತಿರುವನ್ನು ಪ್ರೇಕ್ಷಕರು ಸಹ ನಿರೀಕ್ಷೆ ಮಾಡಿದ್ದರು. ಶರತ್ ಮನೆಯವರೇ ಮುಂದೆ ನಿಂತು ದುರ್ಗಾ ಮದುವೆಗೆ ಮುಂದಾಗಿದ್ದರು. ಇನ್ನೇನು ಮದುವೆ ಆಗಬೇಕು ಎನ್ನುವಾಗಲೇ ಆತ ವಂಚನೆ ಮಾಡುವ ಉದ್ದೇಶದಿಂದ ಮದುವೆಯಾಗಲು ಮುಂದಾಗಿದ್ದಾನೆ ಎನ್ನುವುದು ಗೊತ್ತಾಗಿದೆ. ಹಿತಾ, ವರ ಮಾತನಾಡುವುದನ್ನು ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಶರತ್ - ದುರ್ಗಾನ ಮದುವೆಯಾಗುವುದಕ್ಕೆ ಮುಂದಾಗಿದ್ದಾನೆ. ಆದರೆ ಇದನ್ನು ವಿನಲ್‌ಗಳು ಸಹಿಸಿಕೊಳ್ಳುತ್ತಾರಾ ಅಂತಾ ಪ್ರೇಕ್ಷಕರು ಪ್ರಶ್ನೆ ಮಾಡುತ್ತಿದ್ದಾರೆ.

ಶರತ್‌ನ ಮದುವೆಯಾಗಬೇಕು ಎಂದು ಮಾಯಾ ಪ್ಲ್ಯಾನ್ ಮಾಡಿಕೊಂಡಿದ್ದಾಳೆ. ಇದಕ್ಕೆ ದುರ್ಗಾ ಅಡ್ಡವಾಗುತ್ತಿದ್ದಾಳೆ ಎಂದು ಎಲ್ಲರೂ ಪ್ಲ್ಯಾನ್ ಮಾಡಿಕೊಂಡು ದುರ್ಗಾ ಮದುವೆ ಮಾಡಿಸುವುದಕ್ಕೆ ಮುಂದಾಗಿದ್ದರು. ಆದರೆ ಆತ ಫ್ರಾಂಡ್ ಎನ್ನುವುದು ಈಗ ಗೊತ್ತಾಗಿದೆ. ಈಗ ಬಿಡುಗಡೆ ಆಗಿರುವ ಪ್ರೋಮೋದಲ್ಲಿ ಶರತ್ ಹಾಗೂ ದುರ್ಗಾಳ ಮದುವೆ ನಡೆಯಲಿದೆ ಎನ್ನುವಂತೆ ತೋರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+