Actor Salman Khan: ಸಲ್ಮಾನ್ ಖಾನ್ ಜೊತೆ ನಂಟು ಕಳೆದುಕೊಳ್ಳಲು ಕಾರಣ ಏನೆಂದು ತಿಳಿಸಿದ ಮಾಜಿ ಗೆಳತಿ
Actor Salman Khan: ಮೊದಲಿನಿಂದಲೂ ನಟ ಸಲ್ಮಾನ್ ಖಾನ್ ಅವರು ವೈಯಕ್ತಿಕ ಜೀವನದ ವಿಚಾರವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇವರು ಅನೇಕರ ಜೊತೆ ಸಂಬಂಧ ಹೊಂದಿದ್ದರು. ಆದರೆ, ಇಂದಿಗೂ ಮದುವೆಯಾಗಿಲ್ಲ. ಇದೀಗ ಮಾಜಿ ಗೆಳತಿಯೊಬ್ಬರು ಸಲ್ಮಾನ್ ಖಾನ್ ಜೊತೆ ನಂಟು ಕಳೆದುಕೊಳ್ಳಲು ಕಾರಣ ಏನು ಎನ್ನುವ ಬಗ್ಗೆ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ಗೆಳತಿ ಸೋಮಿ ಅಲಿ ಅವರು ಸಲ್ಮಾನ್ ಖಾನ್ ದೈಹಿಕವಾಗಿ ಕಿರುಕುಳ ನೀಡುತ್ತಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಸಲ್ಮಾನ್ ಮತ್ತು ಸೋಮಿ ಅಲಿ 1990ರಲ್ಲಿ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಇದೀಗ ಸೋಮಿ ಸಲ್ಮಾನ್ ಖಾನ್ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ. ಯಾವ ಕಾರಣಕ್ಕೆ ಸಲ್ಮಾನ್ ಖಾನ್ ಅವರಿಂದ ದೂರವಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಸೋಮಿ ಅವರು ಕೊಟ್ಟ ಉತ್ತರ ಏನು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

"ನಾನು ಸಲ್ಮಾನ್ ಖಾನ್‌ನಿಂದ ದೂರಾವಾಗಲು ಒಂದು ಮಹತ್ವದ ಕಾರಣ ಇದೆ. ಸಲ್ಮಾನ್ ಖಾನ್ ಅವರಿಂದ ಒಂದಲ್ಲ.. ಎರಡಲ್ಲ ಸತತ ಎಂಟು ನೈಟ್ ಸ್ಟ್ಯಾಂಡ್‌ಗಳಿಂದ ಅಸಹ್ಯಗೊಂಡಿದ್ದೇನೆ. ಇದನ್ನೇ ಇಟ್ಟುಕೊಂಡು ಅವರು ಪ್ರತಿದಿನ ನನ್ನನ್ನು ನಿಂದನೆ ಮಾಡುತ್ತಿದ್ದರು ಮತ್ತು ಕೈ ಮಾಡುತ್ತಿದ್ದರು," ಎಂದು ಗಂಭೀರ ಆರೋಪ ಮಾಡಿದ್ದಾರೆ.
ಸಲ್ಮಾನ್ ಖಾನ್ ದೈಹಿಕವಾಗಿ ನನಗೆ ತೊಂದರೆ ನೀಡಿದ್ದಾರೆ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಅಲ್ಲದೆ, ಅವರು ಐಶ್ವರ್ಯಾ ಜೊತೆ ಡೇಟಿಂಗ್ ಮಾಡಿರುವ ಬಗ್ಗೆ ಕೇಳಿದಾಗ, "ಐಶ್ವರ್ಯಾ ತುಂಬಾ ಒಳ್ಳೆಯವರು. ಸಲ್ಮಾನ್ ಖಾನ್ ಜೊತೆ ಉತ್ತಮ ಬಾಂಧವ್ಯದಲ್ಲಿದಾಗ ಅವರಿಗೆ ಏನಾಯಿತು ಎಂಬ ಬಗ್ಗೆ ನನಗೆ ತುಂಬಾ ವಿಷಾದವಿದೆ," ಎಂದು ಹೇಳಿದ್ದಾರೆ. ಇದೇ "ವೇಳೆ ನಾನು ಸಲ್ಮಾನ್ ಜೀವನದಲ್ಲಿ ಇನ್ನೊಬ್ಬ ಮಹಿಳೆಯ ಬಗ್ಗೆ ತಿಳಿದಾಗ ನಾನು ಅವರನ್ನು ಬಿಡಲು ನಿರ್ಧರಿಸಿದೆ," ರಂದು ಹೇಳಿದ್ದಾರೆ.
ಇನ್ನು ಸೋಮಿ ಅಲಿ ಸುಮಾರು ಎಂಟು ವರ್ಷಗಳಿಂದ ಸಲ್ಮಾನ್ ಖಾನ್ ಜೊತೆ ಡೇಟಿಂಗ್ ನಡೆಸುತ್ತಿದ್ದರು. ಸಲ್ಮಾನ್ ಮತ್ತು ಸೋಮಿ ಅವರ ಸಂಬಂಧವೂ ವಿವಿಧ ಕಾರಣಗಳಿಂದ ಸುದ್ದಿಯಲ್ಲಿದ್ದರು. ಬ್ರೇಕಪ್ ಬಳಿಕ ಸೋಮಿ ಅವರು ಸಲ್ಮಾನ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಅಲ್ಲದೇ, ನನಗೆ ಚಿತ್ರಹಿಂಸೆ ನೀಡಿದ್ದಾರೆ ಅಂತಲೂ ಗಂಭೀರ ಆರೋಪ ಮಾಡಿ ಸಂಚಲನ ಮೂಡಿಸಿದ್ದಾರೆ.
ಅಷ್ಟೇ ಅಲ್ಲದೆ, ಸುಶಾಂತ್ ಸಿಂಗ್ ರಜಪೂತ್ ಅವರದ್ದು ಆತ್ಮಹತ್ಯೆ ಅಲ್ಲ. ಅವರನ್ನು ಕೊಲೆ ಮಾಡಲಾಗಿದೆ ಎಂದು ಸಲ್ಮಾನ್ ಖಾನ್ ಮಾಜಿ ಗೆಳತಿ ಸೋಮಿ ಅಲಿ ಹೇಳಿದ್ದಾರೆ.












Click it and Unblock the Notifications