Ekka Song: 'ಎಕ್ಕ' 3ನೇ ಸಾಂಗ್ ರಿಲೀಸ್ ಡೇಟ್ ಫಿಕ್ಸ್! ABCD...XYZಗೆ ಹೊಸ ಅರ್ಥ ತಿಳ್ಕೊಳ್ಳಿ..
Ekka Film 3rs ABCD Song: ಯುವರಾಜ್ ಕುಮಾರ್ ಅವರ 'ಎಕ್ಕ' ಸಿನಿಮಾ ರಿಲೀಸ್‌ಗೆ ದಿನಗಣನೇ ಶುರುವಾದ ಬೆನ್ನಲ್ಲೆ ಚಿತ್ರತಂಡ ಒಂದೊಂದೆ ಹಾಡನ್ನು ಬಿಡುಗಡೆ ಮಾಡುತ್ತಿದೆ. ಇತ್ತೀಚೆಗಷ್ಟೆ ಬಿಡುಗಡೆಯಾದ 'ಬ್ಯಾಂಗಲ್ ಬಂಗಾರಿ...' ಹಾಡು ಎಲ್ಲರಲ್ಲೂ ಗುನುಗುವಂತೆ ಮಾಡಿದೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಮುನ್ನುಗ್ಗುತ್ತಿದೆ. ಇದೀಗ 'ಎಕ್ಕ' ಮೂರನೇ ಹಾಡು ರಿಲೀಸ್ ಆಗಲಿದ್ದು, ಡೇಟ್ ಫಿಕ್ಸ್ ಮಾಡಲಾಗಿದೆ. ಪ್ರೇಕ್ಷಕರಿಗೆ ಮತ್ತಷ್ಟು ಖುಷಿ ಕೊಡುವ ಹಾಡು ಇದಾಗಿದೆ ಎಂದು ಯುವರಾಜ್ ಕುಮಾರ್ ಅವರು ತಿಳಿಸಿದ್ದಾರೆ.
ಸಿನಿಮಾ ಮೂರನೇ ಲಿರಿಕಲ್ ಹಾಡು ಬಿಡುಗಡೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ನಟ ಯುವರಾಜ್ ಕುಮಾರ್ ಅಪ್ಡೇಟ್ಸ್ ನೀಡಿದ್ದಾರೆ. ರೌಡಿ ರೈಮ್ಸ್ ಹಾಡು ಬಿಡುಗಡೆ ಆಗುತ್ತಿದೆ. ABCD....IJKL....XYZ ಗೆ ಹೊಸ ಅರ್ಥ ಇದೆ. ಆ ಅರ್ಥವನ್ನು ನೀವು ಈ 'ಎಕ್ಕ' ಸಿನಿಮಾದ ಮೂರನೇ ಹಾಡಿನಿಂದ ತಿಳಿದುಕೊಳ್ಳುತ್ತೀರಿ ಎಂದು ಯುವ ಅವರು ಹೇಳಿದ್ದಾರೆ. ಈ ಮೂಲಕ ಅಭಿಮಾನಿಗಳನ್ನು ಹೆಚ್ಚೆಬ್ಬಿಸುವ ಮತ್ತೊಂದು ಅತ್ಯುತ್ತಮ ಹಾಡು ಇದಾಗಲಿದೆ ಎಂದಿದ್ದಾರೆ.

ನಾಳೆ ಸಂಜೆ 5.27 ಗಂಟೆಗೆ ರಿಲೀಸ್..
A ಫಾರ್ ಆಪಲ್, B ಫಾರ್ ಬಾಲ್...ಎಂದು ಕಲಿತವರಿಗೆ 'ಎಕ್ಕ' ಚಿತ್ರತಂಡ ಹೊಸ ಅರ್ಥ ಕಲಿಸುವ ಹಾಡನ್ನು ಇದೇ ಜುಲೈ 05ರಂದು ಬಿಡುಗಡೆ ಮಾಡಲಿದ್ದಾರೆ. ಅಂದು ಸಂಜೆ 5.27 ಗಂಟೆಗೆ ಬಹುನಿರೀಕ್ಷೆಯ ಲಿರಿಕಲ್ ಹಾಡು ಬಿಡುಗಡೆಯಾಗಲಿದೆ. ಹಾಡಿನ ಸಾಹಿತ್ಯ ಚಿತ್ರ ನಿರ್ದೇಶಕ ರೋಹಿತ್ ಪದಕಿ ಮತ್ತು ನಾಗಾರ್ಜುನ್ ಶರ್ಮಾ ಅವರು ಬರೆದಿದ್ದಾರೆ. ಹಾಡನ್ನು ಚರಣ್ ರಾಜ್ ಅವರು ಕಂಠದಲ್ಲಿ ಹಾಡು ಮೂಡಿ ಬಂದಿದೆ. ಸ್ವತಃ ಚರಣ್ ರಾಜ್ ಅವರೇ ಸಂಗೀತ ಸಂಯೋಜಿಸಿದ್ದಾರೆ.
ಈ ಹಾಡು ಸಹ ಬ್ಯಾಂಗಲ್ ಬಂಗಾರಿಯಂತೆ..ಸದ್ದು ಮಾಡುವ ಮುನ್ಸೂಚನೆ ಕಾಣುತ್ತಿದೆ. ರೋಹಿತ್ ಪದಕಿ ನಿರ್ದೇಶನದ 'ಎಕ್ಕ' ಸಿನಿಮಾ ಪಿಆರ್‌ಕೆ ಪ್ರೊಡಕ್ಷನ್, ಕೆಆರ್‌ಜಿ ಸ್ಟುಡಿಯೋ ಹಾಗೂ ಜಯಣ್ಣ ಕಂಬೈನ್ಸ್ ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾ ತಂಡದಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಹ್ಯಾಷ್ ಟ್ಯಾಗ್ ಹಾಕಿ ಯುವಕ, ಯುವತಿಯರನ್ನು ಪ್ರಚಾರಕ್ಕಾಗಿ ಈ ಹಿಂದೆ ಆಹ್ವಾನಿಸಲಾಗಿತ್ತು.
ಹಾಡು ಸಖತ್ ವೈರಲ್...
ಎಕ್ಕ ಮಾರ್ ಮಾರ್...ಹಾಡಿನ ಬಳಿಕ ಎರಡನೇ ಬ್ಯಾಂಗಲ್ ಬಂಗಾರಿ...ಬಿಡುಗಡೆ ಆಗಿತ್ತು. ಈ ಹಾಡಿಗೆ ಕುಣಿಯದವರಿಲ್ಲ. ಸಣ್ಣ ಮಕ್ಕಳಿಂದ ಹಿಡಿದು, ಮುದುಕರವರೆಗೂ ನೃತ್ಯ ಮಾಡಿದ್ದಾರೆ. ಆ ರೀಲ್ಸ್ ವಿಡಿಯೋ ಅಪ್ಲೋಡ್ ಆಗುತ್ತಲೇ ಇವೆ. ಹೀಗಾಗಿ ಮುಂದಿನ ಎಬಿಸಿಡಿ...ಹಾಡಿನ ಹೆಚ್ಚಿನ ನಿರೀಕ್ಷೆಗಳೂ ಇವೆ. 'ಎಕ್ಕ' ಜುಲೈ 18ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ದೊಡ್ಮನೆ ಅಭಿಮಾನಿಗಳು ಕಾತರರಿಂದ ಕಾಯುತ್ತಿದ್ದಾರೆ.












Click it and Unblock the Notifications