Bigg Boss: ಡ್ರೋನ್ ಹಾರಿಸು ಮಾರಾಯ ಅಂದ್ರೆ, ಬಾಂಬ್ ಸ್ಫೋಟಿಸಿದ ‘ಉಗ್ರ’ ಪ್ರತಾಪ್?

ಒಂದೊಂದಲ್ಲ ಅಣ್ಣಾ... ಒಂದೊಂದಲ್ಲ... ಈ ಡೈಲಾಗ್ ನೀವು ಕೂಡ ಕೇಳಿದ್ದೀರಿ ಅಂತಾ ಕಾಣುತ್ತೆ ಅಲ್ವಾ? ವರ್ತೂರ್ ಸಂತೋಷ್ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ವಿರೋಧಿಗಳ ವಿರುದ್ಧ ಆಕ್ರೋಶ ಹೊರ ಹಾಕುತ್ತಾ, ಕಣ್ಣೀರು ಹಾಕುವಾಗ ಹೇಳಿದ ಡೈಲಾಗ್ ಇದು. ಆದ್ರೆ ವರ್ತೂರ್ ಸಂತೋಷ್ ಹೇಳಿದ್ದ ಈ ಡೈಲಾಗ್, ಡ್ರೋನ್ ಪ್ರತಾಪ್‌ಗೆ ಪಕ್ಕಾ ಅನ್ವಯಿಸುವಂತೆ ಇದೆ! ಯಾಕೆ ಗೊತ್ತಾ? ಡ್ರೋನ್ ಪ್ರತಾಪ್ ಮಾಡಿಕೊಂಡ ಅವಾಂತರ ಏನು? ಮತ್ತೆ ಕಂಬಿ ಹಿಂದೆ ಬಿದ್ದಿದ್ದು ಏಕೆ ಡ್ರೋನ್ ವೀರ & ಕಾಗೆ ಹಾರಿಸಿದ್ದ ಧೀರ?

ಹೌದು, ಡ್ರೋನ್ ಪ್ರತಾಪ್ ಮತ್ತೊಂದು ಅವಾಂತರ ಮಾಡಿಕೊಂಡು ಇದೀಗ ಸದ್ದು ಕೂಡ ಮಾಡುತ್ತಿದ್ದಾರೆ. ಈ ಹಿಂದೆ ಡ್ರೋನ್ ಟೆಕ್ನಾಲಜಿ ಬಗ್ಗೆ ಪುಂಗುತ್ತಾ, ರಾಷ್ಟ್ರೀಯ ಮಟ್ಟಕ್ಕು ಸುದ್ದಿ ಮಾಡಿದ್ದ ಡ್ರೋನ್ ಪ್ರತಾಪ್ ವಿಚಾರ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಮತ್ತೊಮ್ಮೆ ಡ್ರೋನ್ ಪ್ರತಾಪ್ ಕಂಬಿ ಹಿಂದೆ ಬಿದ್ದಿದ್ದು, ಬಿಗ್‌ಬಾಸ್ ಮಾಜಿ ಸ್ಪರ್ಧಿ ಅರೆಸ್ಟ್ ಆಗಿರುವುದು ಸಂಚಲನ ಸೃಷ್ಟಿ ಮಾಡಿದೆ!

Drone Prathap Is Now Facing Problems Because Of This Reason

ಬ್ಲಾಸ್ಟ್ ಮಾಡಿ ಲಾಕ್ ಆದ ಡ್ರೋನ್!

ಇರಲಾರದೆ ಇರುವೆ ಬಿಟ್ಟುಕೊಂಡರು ಅನ್ನುವಂತೆ, ಡ್ರೋನ್ ಪ್ರತಾಪ್ ಮಾಡಿಕೊಳ್ಳುತ್ತಿರುವ ಎಡವಟ್ಟುಗಳು ಒಂದೆರಡಲ್ಲ. ಹೀಗಾಗಿಯೇ ಜನಗಳು ಕೂಡ ಪ್ರತಾಪ್ ಮುಖ ನೋಡುತ್ತಾ, ಒಂದೊಂದಲ್ಲ ಅಣ್ಣಾ... ಒಂದೊಂದಲ್ಲ... ಅಂತಾ ಡೈಲಾಗ್ ಹೊಡೆಯುತ್ತಿದ್ದಾರೆ. ಅರೆರೆ ಈಗ ಏನು ಮಾಡಿದ ಈ ವ್ಯಕ್ತಿ? ಅಂತಾ ನೀವು ಪ್ರಶ್ನೆ ಕೇಳುತ್ತಿದ್ದರೆ, ಹಿಂದೆ ಕೂಡ ಹಲವು ವಿವಾದ ಮಾಡಿಕೊಂಡಿರುವ ಡ್ರೋನ್ ಪ್ರತಾಪ್ ವಿರುದ್ಧ ಇದೀಗ ಕಾನೂನು ಬಾಹೀರವಾಗಿ ಸ್ಫೋಟಕ ಬಳಸಿದ ಆರೋಪ ಕೇಳಿ ಬಂದಿದೆ.

ಡ್ರೋನ್ ಪ್ರತಾಪ್ ಬ್ಲಾಸ್ಟ್ ಮಾಡಿದ್ದು ಏನು?

ಸೋಡಿಯಂ ಎಂಬ ರಾಸಾಯನಿಕ ನೀರಿಗೆ ಎಸೆದು ಬ್ಲಾಸ್ಟ್ ಮಾಡಿದ್ದ ಭಾರಿ ಗಂಭೀರ ಆರೋಪ ಡ್ರೋನ್ ಪ್ರತಾಪ್ ವಿರುದ್ಧ ಕೇಳಿ ಬಂದಿತ್ತು. ಸ್ವತಃ ಇದನ್ನ ವಿಡಿಯೋ ಮಾಡಿ, ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡಿದ್ದ ಡ್ರೋನ್ ಪ್ರತಾಪ್. ಹೀಗಾಗಿ, ಪ್ರತಾಪ್ ವಿರುದ್ಧ ಕರ್ನಾಟಕದ ಜನರು ಅದರಲ್ಲೂ ಪರಿಸರ ಪ್ರೇಮಿಗಳು ರೊಚ್ಚಿಗೆದ್ದು ಆಕ್ರೋಶ ಕೂಡ ಹೊರ ಹಾಕಿದ್ದರು.

ಹೀಗಾಗಿ, ಇದೀಗ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸರು ಡ್ರೋನ್ ಪ್ರತಾಪ್‌ನ ಅರೆಸ್ಟ್ ಮಾಡಿದ್ದಾರೆ. ಈ ರೀತಿ ಕೃತ್ಯ ಎಸಗಿರುವ ಆರೋಪ ಕೇಳಿ ಬಂದ ಹಿನ್ನೆಲೆ ಡ್ರೋನ್ ಪ್ರತಾಪ್ ವಿಚಾರಣೆ ಕೂಡ ನಡೆಸಲಾಗುತ್ತಿದೆ. ಮತ್ತೊಂದು ಕಡೆ, ಈ ರೀತಿ ಡ್ರೋನ್ ಪ್ರತಾಪ್ ಅರೆಸ್ಟ್ ಆಗಿರುವ ವಿಚಾರವು ಸೋಷಿಯಲ್ ಮೀಡಿಯಾ ಸೇರಿ ಇಂಟರ್‌ನೆಟ್ ಪೂರ್ತಿ ಹಲ್‌ಚಲ್ ಎಬ್ಬಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+